admin
September 12, 2019
ಕರ್ನಾಟಕ, ಸುದ್ದಿ
ದಾವಣಗೆರೆ; ಕಸ ಕೊಟ್ಟರು ಸಹ ರಸ ಮಾಡಿಕೊಂಡು ಕುಡಿಯೋ ಶಕ್ತಿ ನನಗಿದೆ, ನನ್ನ ಬಗ್ಗೆ ಎಷ್ಟೆ ಟ್ರೋಲ್ ಮಾಡಿದರೂ ಸಹ ನಾನು ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಅನಾರೋಗ್ಯವಿದ್ದರು ಸಹ ಬೆಳಿಗ್ಗೆಯಿಂದ ಎಡೆಬಿಡದೇ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ, ಆದರೆ ಕೊನೆಯಲ್ಲಿ ಇಳಿವಯಸ್ಸಿನ ವ್ಯಕ್ತಿ ದೋಣಿ ಚಲಾಯಿಸುತ್ತಿದ್ದರು ನಾನು ಸಹ ದೋಣಿ ಚಲಾಯಿಸೋಣ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ : ಮಾಜಿ ಸಿಎಂ ಸಿದ್ಧರಾಮಯ್ಯ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕು ಕಾಂಗ್ರೆಸ್ ಸಮಿತಿಯ ವತಿಯಿಂದ ಸಾರ್ವಜನಿಕ ದುಂಡಶೆಟ್ಟ ಲಕ್ಷ್ಮಿ ಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಫಲು ವಿತರಣೆ ಮಾಡಲಾಯಿತು.ಮಾಜಿಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಪ್ರವಾಹ ಪೀಡಿತ ಗ್ರಾಮಗಳಿಗೆ ಶ್ರೀ ಸಿದ್ದೇಶ್ವರ ಸ್ವಾಮಿಜಿ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಿದರು. ವಿಜಯಪೂರದ ಜ್ಞಾನ ಯೋಗಾಶ್ರಮದ ಪ್ರಸಿದ್ಧ ಸ್ವಾಮಿಜಿಯಾದ ಸಿದ್ದೇಶ್ವರ ಸ್ವಾಮಿಜಿ ಅವರು ಕಾಗವಾಡ ತಾಲೂಕಿನ ಶಿರಗುಪ್ಪಿ , ಮಂಗಸುಳಿ, ಕವಲಗುಡ್ಡ ಸೇರಿದಂತೆ ಹಲವಾರು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು. ಸ್ವಾಮಿಜಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಕಾಗವಾಡ್ ಮಾಜಿ ಶಾಸಕ ರಾಜು ಕಾಗೆ ಸಾಥ್ ನೀಡಿದರು. ಇದೇ ವೇಳೆ ಸಂತ್ರಸ್ತರು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಧಾರಾಕಾರ ಮಳೆಯಿಂದ ಹಾನಿಗೀಡಾದ ಹುಬ್ಬಳ್ಳಿ, ಅಣ್ಣಿಗೇರಿ, ನವಲಗುಂದ ತಾಲೂಕಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಬಂದಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯ ಸರ್ಕಾರದ ಆಡಳಿತ ವೈಖರಿ ಕುರಿತು ವ್ಯಂಗ್ಯವಾಡಿದರು.ರಾಜ್ಯದಲ್ಲಿ ರಾಜ್ಯಭಾರದ ಆಳ್ವಿಕೆ ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ದೊರೆಯಾಗಿದ್ದಾರೆ. ಅವರ ಆಳ್ವಿಕೆ ಎಲ್ಲಿಯವರೆಗೆ ನಡೆಯುತ್ತೆ ನೋಡೋಣ. ಇದನ್ನ ಅರಿತು ಕೇಂದ್ರ ಸರ್ಕಾರ ಅಲ್ಲಿಂದಲೇ ರಾಜ ಭವನದಲ್ಲಿ ಕುಳಿದು 3-4 ಜನರನ್ನು ಆದರೂ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ:ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರ ಕೈಗೊಂಡ ಪರಿಹಾರ ಕಾರ್ಯದಲ್ಲಿ ನಮ್ಮ ಪಕ್ಷ ರಾಜಕೀಯ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರು, ಮುಖಂಡರು ಸಹಾಯಹಸ್ತ ಚಾಚುವಂತೆ ಹೇಳಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಕುಂದಗೋಳ, ಹುಬ್ಬಳ್ಳಿ, ಬೈಲಹೊಂಗಲ, ಸೇರಿದಂತೆ ಇತರೆಡೆ ಪ್ರವಾಸ ಕೈಗೊಂಡಿದ್ದೇನೆ. 70 ವರ್ಷಗಳ ಇತಿಹಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಧ್ವಜರೋಣ ಮಾಡುತ್ತಿದ್ದರು. ಆದರೆ ಈ ಬಾರಿ ಸಚಿವರಿಲ್ಲದೆ ಸ್ವಾತಂತ್ರ್ಯ ದಿನಾಚರಣೆ …
Read More »
admin
September 12, 2019
ಧಾರವಾಡ, ಸುದ್ದಿ
ಧಾರವಾಡ: ನಗರದ ಚಪ್ಪರಬಂದ ಕಾಲೋನಿಯಲ್ಲಿರುವ ತಮ್ಮನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಸಂತ್ರಸ್ತ ದಂಪತಿ ಆರೋಪಿಸಿದ್ದಾರೆ.ಚಪ್ಪರಬಂದ ಕಾಲೋನಿಯ ದ್ರಾಕ್ಷಾಯಿಣಿ ಹಾಗೂ ಮಂಜುನಾಥ ದಂಪತಿ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದಾರೆ. ಕೇವಲ 6 ಅಡಿ ಜಾಗದಲ್ಲಿ ಇವರು ವಾಸವಾಗಿದ್ದು, ಭಾರಿ ಮಳೆ ಹಿನ್ನೆಲೆ ಗಟಾರ ಪಕ್ಕದಲ್ಲಿರುವ ಮನೆ ಗೋಡೆ ಕುಸಿತವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಪ್ರವಾಹದ ಹಿನ್ನೆಲೆ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ ನಮ್ಮತ್ತ ಗಮನ ಹರಿಸಿಲ್ಲವೆಂದು ದೂರಿದ್ದಾರೆ. ಪ್ರವಾಹದ ಮುನ್ಸೂಚನೆಯಿದ್ದರೂ ಯಾಕೆ ನಮ್ಮನ್ನು ಸ್ಥಳಾಂತರಿಸಿಲ್ಲ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ:ಮಳೆಯಿಂದ ಹಾನಿಗೊಳಗಾದ ಸ್ಥಳಗಳಾದ ದೇವಿನಗರ, ಕುಂಬಾರ ಓಣಿ, ಹಳೇಹುಬ್ಬಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಮಹಿಳೆ ಹಾಗೂ ವೃದ್ದೆಗೆ ಹಣ ನೀಡಿದರು.ಮಳೆ ಹಾನಿಗೆ ಒಳಗಾದ ದೇವಿನಗರದ ಮನೆ ಮನೆಗಳಿಗೂ ಭೇಟಿ ನೀಡಿದ ನಿಖಿಲ್‌ಕುಮಾರಸ್ವಾಮಿ, ಸಂತ್ರಸ್ತರ ಸಮಸ್ಯೆ ಆಲಿಸಿ ಕೈಲಾದ ಸಹಾಯ ಮಾಡಿದರು. ಹಾಗೇ ಎಲ್ಲರಿಗೂ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸತತ ಮಳೆಗೆ ರಾಜ್ಯ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಡ್ಯ ಜಿಲ್ಲೆಯ ದೊದ್ದನಕಟ್ಟೆ ಸೇತುವೆಯ ಬಳಿ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.40-45 ವರ್ಷ ವಯಸ್ಸಿನ ಪುರುಷನ ಶವವನ್ನು ದೊದ್ದನಕಟ್ಟೆ ಬಳಿಯ ಸೇತುವೆಯ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ.ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಮೃತ ದೇಹವನ್ನು ತಂದು ಬಿಸಾಕಿ ಹೋಗಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ.ಮೃತ ವ್ಯಕ್ತಿಯ ಬಗ್ಗೆ ತಿಳಿದವರು ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅಥವಾ ಗ್ರಾಮಾಂತರ ಪೋಲಿಸ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ : ಸುಪ್ರೀಂ ಕೋರ್ಟ್ ನ ನ್ಯಾಯಧೀಶರಾದ ಬಿ.ಆರ್. ಗವಾಯಿ ಅವರು ಕಾರ್ಯ ನಿಮಿತ್ತವಾಗಿ ಕುಟುಂಬ ಸದಸ್ಯರು ಸಾಂಸ್ಕೃತಿಕ ನಗರ ಮೈಸೂರಿಗೆ ಆಗಮಿಸಿದ್ದರು ಇಂದು ಬೆಂಗಳೂರಿಗೆ ಹೊರಡುತ್ತಿದ್ದ ಅವರನ್ನು ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಬರಮಾಡಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಎಂ.ವಿ. ವೆಂಕಟೇಶ್ , ಪೋಲಿಸ್ ವರಿಷ್ಠಾಧಿಕಾರಿ ಪರಶುರಾಮು , ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ವಿಜಯಲಕ್ಷ್ಮಿ , ಮದ್ದೂರಿನ ಹಿರಿಯ ನ್ಯಾಯಾಧೀಶ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಕಬಿನಿ ಜಲಾಶಯದಿಂದ ಹೆಚ್ಚಾಗಿ ನದಿಗೆ ನೀರು ಹೊರ ಬಿಡಲಾಗುತ್ತಿರುವ ಹಿನ್ನಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಗ್ರಾಮಗಳ ಜನರು, ಜಾನುವಾರಗಳ ರಕ್ಷಣೆಗಾಗಿ ಮುಂಜಾಗರೂಕತೆ ಕ್ರಮ ವಹಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಗ್ರಾಮವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.ಒಟ್ಟು ಎಂಟು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನದಿಗೆ ನೀರನ್ನು ಬಿಡುವ ಬಗ್ಗೆ ಮಾಹಿತಿ ಪಡೆದು ಪ್ರವಾಹದ ಎಚ್ಚರಿಕೆಯ …
Read More »