Breaking News

ಧಾರವಾಡದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲು ಜಿಲ್ಲಾಡಳಿತ ವಿಫಲ: ಆರೋಪ

ಧಾರವಾಡ: ನಗರದ ಚಪ್ಪರಬಂದ ಕಾಲೋನಿಯಲ್ಲಿರುವ ತಮ್ಮನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಸಂತ್ರಸ್ತ ದಂಪತಿ ಆರೋಪಿಸಿದ್ದಾರೆ.ಚಪ್ಪರಬಂದ ಕಾಲೋನಿಯ ದ್ರಾಕ್ಷಾಯಿಣಿ ಹಾಗೂ ಮಂಜುನಾಥ ದಂಪತಿ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದಾರೆ. ಕೇವಲ 6 ಅಡಿ ಜಾಗದಲ್ಲಿ ಇವರು ವಾಸವಾಗಿದ್ದು, ‌ಭಾರಿ ಮಳೆ ಹಿನ್ನೆಲೆ ಗಟಾರ ಪಕ್ಕದಲ್ಲಿರುವ ಮನೆ ಗೋಡೆ ಕುಸಿತವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಪ್ರವಾಹದ ಹಿನ್ನೆಲೆ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ ನಮ್ಮತ್ತ ಗಮನ ಹರಿಸಿಲ್ಲವೆಂದು ದೂರಿದ್ದಾರೆ. ಪ್ರವಾಹದ ಮುನ್ಸೂಚನೆಯಿದ್ದರೂ ಯಾಕೆ ನಮ್ಮನ್ನು ಸ್ಥಳಾಂತರಿಸಿಲ್ಲ ಎಂದು ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share News

About admin

Check Also

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ …

Leave a Reply

Your email address will not be published. Required fields are marked *