ದಾವಣಗೆರೆ; ಕಸ ಕೊಟ್ಟರು ಸಹ ರಸ ಮಾಡಿಕೊಂಡು ಕುಡಿಯೋ ಶಕ್ತಿ ನನಗಿದೆ, ನನ್ನ ಬಗ್ಗೆ ಎಷ್ಟೆ ಟ್ರೋಲ್ ಮಾಡಿದರೂ ಸಹ ನಾನು ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಅನಾರೋಗ್ಯವಿದ್ದರು ಸಹ ಬೆಳಿಗ್ಗೆಯಿಂದ ಎಡೆಬಿಡದೇ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ, ಆದರೆ ಕೊನೆಯಲ್ಲಿ ಇಳಿವಯಸ್ಸಿನ ವ್ಯಕ್ತಿ ದೋಣಿ ಚಲಾಯಿಸುತ್ತಿದ್ದರು ನಾನು ಸಹ ದೋಣಿ ಚಲಾಯಿಸೋಣ ಎಂದು ಮುಂದಾದೆ, ಇದು ಪ್ರಚಾರಕ್ಕೆ ಮಾಡಿದಲ್ಲ, ವಿರೋಧಿಗಳು, ಮಾಧ್ಯಮದವರು ಎಷ್ಟೆ ಕೆಟ್ಟದಾಗಿ ಬಿಂಬಿಸಿದರು ಸಹ ನಾನು ಕುಗ್ಗದೇ ನನ್ನ ಕೆಲಸ ಮುಂದುವರೆಸುತ್ತೇನೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





