Breaking News

ಸುದ್ದಿ

ಮಹಾಮಳೆಗೆ ತುಂಬಿದ ತುಂಗಭದ್ರೆ. ಅಲ್ಲಲ್ಲಿ ರಸ್ತೆ ಸಂಪರ್ಕ ಕಟ್, ಅಧಿಕಾರಿಗಳ ದೌಡು, ಬೋಟ್ ವ್ಯವಸ್ಥೆ.

ದಾವಣಗೆರೆ: ದಾವಣಗೆರೆ ಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಸತತ ಐದು ದಿನಗಳಿಂದಲು ಎಡೆಬಿಡದೆ ಮಳೆ ಸುರಿಯುತ್ತಿದೆ. ಇದ್ರಿಂದ ದಾವಣಗೆರೆಯ ಜೀವನಾಡಿ ಭದ್ರ ಜಲಾಶಯದಲ್ಲಿ ನೀರಿನ ಶೇಕರಣೆ ಹೆಚ್ಚಾಗಿದ್ದು. ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹರಿಹರದ ಉಕ್ಕಡಗಾತ್ರಿಯ ಕರಿಬಸವೇಶ್ವ ದೇವಸ್ಥಾನದ ಮೆಟ್ಟಿಲು ಭಾಗದ ವರೆಗೂ ನದಿ ನೀರು ಬಂದಿದ್ದು. ಉಕ್ಕಡಗಾತ್ರಿ- ಪತ್ತೆಪುರ, ಸಾರಧಿ- ಚಿಕ್ಕಬಿದರೆ, ಹರಪನಹಳ್ಳಿಯ ಹಲುವಾಗಲು – ಕಡತಿ ರಸ್ತೆ ಮಾರ್ಗ ಕಡಿತಗೊಂಡಿದೆ. ಕಡಿತಗೊಂಡ ಗ್ರಾಮಸ್ಥರಿಗೆ ದಿಕ್ಕುತೋಚದಂತಾಗಿದ್ದು ನಾಯಿಗಳು ಈಜಿಕೊಂಡು …

Read More »

ನದಿಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿದ ಎನ್.ಡಿ.ಆರ್.ಎಫ್. ರಕ್ಷಣಾ ತಂಡ

ಚಿಕ್ಕೋಡಿ: ಭಾರೀ ಮಳೆಯಿಂದಾಗಿ ಈಗಾಗಲೇ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಈ ವೇಳೆ ನದಿ ದಾಟಲು ಯತ್ನಿಸಿ ವೇದಗಂಗಾ ನದಿಯಲ್ಲಿ ಸಿಲುಕಿದ್ದ 3 ಜನರ ರಕ್ಷಣೆ ಮಾಡುವಲ್ಲಿ ಎನ್.ಡಿ.ಆರ್.ಎಫ್. ತಂಡ ಯಶಸ್ವಿಯಾಗಿದೆ. ಚೆತನ ಯಲಗುಡೆ, ಅಕ್ಷಯ ಪೊಕಲೆ, ಪ್ರಶಾಂತ ಕಾಂಬಳೆ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಗಳು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾವ ಕಾರದಗಾ-ಬೋಜ ಸೇತುವೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣಾ ತಂಡ ಹಾಗೂ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

Read More »

ಸುರಿವ ಮಳೆಯಲ್ಲಿಯೂ ಸಂತ್ರಸ್ಥರನ್ನು ಭೇಟಿ ಮಾಡಿ ಸಂತೈಸಿದ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್

ಬೆಳಗಾವಿ: ಇಲ್ಲಿನ ಗ್ರಾಮೀಣ ಭಾಗದಲ್ಲಿ ಮಳೆ ನಿರಂತರ ಸುರಿಯುತ್ತಿರುವ ಕಾರಣ ಬಹುಭಾಗದಲ್ಲಿ ನೀರು ನಿಂತು ಜನಜೀವನ ಅಸ್ಥವ್ಯಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ರವರು ಇಂದು ಜಲಾವೃತಗೊಂಡ ಸ್ಥಳಗಳನ್ನು ಖುದ್ದು ಪರಿಶೀಲಿಸಿದರು. ಮತ್ತು ಅಗತ್ಯ ಸ್ಥಳಗಳಲ್ಲಿ ಗಂಜೀಕೇಂದ್ರಗಳನ್ನು ತೆರೆಯುವಂತೆ ಹಾಗೂ ತಾತ್ಕಾಲಿಕ ಪುನವ೯ಸತಿ ಕಲ್ಪಿಸುವಂತೆ ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ತಾಲೂಕು ಆಡಳಿತಾಧಿಕಾರಿಗಳೊಂದಿಗೆ ತೆರಳಿ ನೆರೆ ಸಂತ್ರಸ್ಥರನ್ನು ಖುದ್ದು ಭೇಟಿಯಾದ ಶಾಸಕಿ ಲಕ್ಷ್ಮೀಹೆಬ್ಬಾಳಕರ್ …

Read More »

ಗುರುವಾರದ ರಾಶಿ ಫಲ ಇಲ್ಲಿದೆ…

ಮೇಷ : ವಿಶ್ವವು ಪ್ರಣಯದ ಆಸಕ್ತಿಯತ್ತ ಕೊಂಡೊಯ್ಯುತ್ತಿದೆ. ನೀವು ಪ್ರಲೋಭನೆಗೆ ಒಳಗಾಗುತ್ತೀರಿ, ಮತ್ತು ನಿಮ್ಮ ಬಯಕೆಗಳನ್ನು ನಿರ್ಲಕ್ಷಿಸುತ್ತೀರಿ. ಬಿಕ್ಕಟ್ಟಿನ ಸಂಬಂಧದಲ್ಲಿದ್ದರೆ, ನೀವು ಕೆಲ ಪರಿಹಾರವಾಗದ ಸಮಸ್ಯೆಗಳ ಕುರಿತು ಕೊಂಚ ಜ್ಞಾನ ಪಡೆಯುತ್ತೀರಿ.ವೃಷಭ: ನೀವು ಇಂದು ಪ್ರಾರಂಭಿಸುವ ಪ್ರತಿಯೊಂದರಲ್ಲೂ ಯಶಸ್ವಿಯಾಗುತ್ತೀರಿ. ಹಣಕಾಸಿನ ವಹಿವಾಟುಗಳು ಸಂಜೆಯ ವೇಳೆಗೆ ಸಂತೃಪ್ತಿಕರ ಮತ್ತು ಅನುಕೂಲಕರವಾಗಿರುತ್ತವೆ. ಈ ದಿನ ನೀವು ನಿರೀಕ್ಷಿಸಿದಂತೆ ಶಕ್ತಿಯುತವಾಗಿರುವುದಿಲ್ಲ. ಕೊಂಚ ದಣಿವಿನ ದಿನಕ್ಕೆ ಉತ್ಸಾಹದ ರಾತ್ರಿ ಸಮಾಧಾನ ನೀಡುತ್ತದೆ.ಮಿಥುನ: ನೀವು ನಿಮ್ಮ ಪ್ರೀತಿಪಾತ್ರರನ್ನು …

Read More »

ಗಂಡುಮೆಟ್ಟಿದ ನಾಡಿನ ಹೃದಯಭಾಗದಂತಿರುವ ರಾಣಿ ಚೆನ್ನಮ್ಮ ಪುತ್ಥಳಿ ಶಿಥಿಲ

ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡಿನ ಪ್ರಸಿದ್ಧ ವೃತ್ತವೇ ಚೆನ್ನಮ್ಮ ಸರ್ಕಲ್​​. ಹುಬ್ಬಳ್ಳಿಗೆ ಮುಕುಟದಂತಿರುವ ಕೇಂದ್ರ ಸ್ಥಳದಲ್ಲಿರುವ ರಾಣಿ ಚೆನ್ನಮ್ಮನ ಪುತ್ಥಳಿ ಶಿಥಿಲಗೊಂಡಿದೆ. ಪುತ್ಥಳಿಯ ಸುತ್ತಮುತ್ತ ಬಿರುಕುಗಳು ಕಾಣಿಸಿಕೊಂಡಿವೆ.ಸುಮಾರು 40 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಪುತ್ಥಳಿಗೆ ಈಗ ಕಂಟಕ ಎದುರಾಗಿದೆ. ಚೆನ್ನಮ್ಮ ಪುತ್ಥಳಿಯ ತಳಭಾಗದ ಬೆಸ್​ಮೆಂಟ್​ಗೆ ಹೊಂದಿಸಿದ ಕಲ್ಲುಗಳು ಹೊರಬಂದಿವೆ. ಹೀಗಾಗಿ ಚೆನ್ನಮ್ಮ ಮೂರ್ತಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ 8 ಪ್ರಮುಖ ರಸ್ತೆಗಳು ಒಂದೆಡೆ …

Read More »

ವಿದ್ಯುತ್ ತಂತಿ ತಗುಲಿ ತಾಯಿ ಮಗಳ ದುರ್ಮರಣ

ಚಿಕ್ಕೋಡಿ : ಜಾನುವಾರುಗಳು ನಿಲ್ಲುವ ಸ್ಥಳದಲ್ಲಿ ಜಲ್ಲಿಕಲ್ಲು (ಗರಸು) ಹಾಕಬೇಕೆಂದು ತಾಯಿ ಮಗಳು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವನೂರು ಗ್ರಾಮದಲ್ಲಿ ನಡೆದಿದೆ.ಪಾರ್ವತಿ ರೂಪನೂರ (68) ತಾಯಿ ಕೃಷ್ಣಾಬಾಯಿ ವಾಗ್ಮುಡೆ (48) ಮಗಳು ಮೃತ ದುರ್ದೈವಿಗಳು.ಜಾನುವಾರು ನಿಲ್ಲುವ ಜಾಗ ಮಳೆಯಿಂದ ಕೆಸರಾಗಿದ್ದರಿಂದ ಜಲ್ಲಿ ತರಲು ಹೋಗಿದ್ದ ತಾಯಿ ಮಗಳು ಜಲ್ಲಿಯ ಮೇಲೆ ಬಿದ್ದಿದ್ದ ತಂತಿಯನ್ನು ಸರಿಸುವಾಗ ವಿದ್ಯುತ ಸ್ಪರ್ಶಿಸಿ ಸ್ಥಳದಲ್ಲೇ ಮಗಳು …

Read More »

ಭಾರೀ ಮಳೆಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.‌ ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ಆಗಸ್ಟ್ 9 ರವರೆಗೆ ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. …

Read More »

ಬೆಂಗಳೂರು ಪುಣೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೂಕುಸಿತ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ‌ಇದರಿಂದ ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಪರಿಣಾಮನಾಳೆ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತಗೊಳಿಸಲು ಸೂಚಿಸಲಾಗಿದೆ.ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದರು.ಬೆಳಗಾವಿ ಪೊಲೀಸರು ರಾಜ್ಯದ ಗಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.

Read More »

ವರುಣನ ಆರ್ಭಟಕ್ಕೆ ಚಿಕ್ಕೋಡಿಯಲ್ಲಿ ಮತ್ತೊಂದು ಬಲಿ

ಚಿಕ್ಕೋಡಿ: ಭೀಕರ ಮಳೆಯಿಂದಾಗಿ ಗೋಡೆ ಕುಸಿದು ವ್ಯಕ್ತಿ ಬಲಿಯಾಗಿರುವ ಘಟನೆ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಾಳಪ್ಪಾ ಕಬ್ಬೂರಿ ೭೫ ಮೃತ ದುರ್ದೈವಿ. ಮಳೆ ಹಿನ್ನೆಲೆಯಲ್ಲಿ ಗೋಡೆ ಕುಸಿದು ಸಾವು ಸಂಭವಿಸಿದೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಇಂಜಿನಿಯರಿಂಗ್ ಶಿಕ್ಷಣ ವರದಾನ

ಮಂಡ್ಯ: ಸುಭದ್ರ ರಾಷ್ಟದ ನಿರ್ಮಾಣಕ್ಕೆ ತಾಂತ್ರಿಕ ಶಿಕ್ಷಣವು ವರದಾನವಾಗಿದೆ. ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಶ್ರದ್ಧೆ ಆಸಕ್ತಿಯಿಂದ ವ್ಯಾಸಂಗ ಮಾಡಿ ನಾಡಿನ ಶ್ರೇಷ್ಠ ಎಂಜಿನಿಯರುಗಳಾಗಿ ಹೊರಹೊಮ್ಮಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶೇಷಾಧಿಕಾರಿ ಎಸ್.ಸಿ.ಅರವಿಂದ್ ಅವರು ತಿಳಿಸಿದರು. ಇಂದು ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಆರ್. ಪೇಟೆಯಲ್ಲಿ ಆಯೋಜಿಸಲಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಥಮವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಎಂಜಿನಿಯರುಗಳು ತಮ್ಮಲ್ಲಿನ ತಾಂತ್ರಿಕ ಕೌಶಲ್ಯವನ್ನು …

Read More »