ಚಿಕ್ಕೋಡಿ: ಭಾರೀ ಮಳೆಯಿಂದಾಗಿ ಈಗಾಗಲೇ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಈ ವೇಳೆ ನದಿ ದಾಟಲು ಯತ್ನಿಸಿ ವೇದಗಂಗಾ ನದಿಯಲ್ಲಿ ಸಿಲುಕಿದ್ದ 3 ಜನರ ರಕ್ಷಣೆ ಮಾಡುವಲ್ಲಿ ಎನ್.ಡಿ.ಆರ್.ಎಫ್. ತಂಡ ಯಶಸ್ವಿಯಾಗಿದೆ.
ಚೆತನ ಯಲಗುಡೆ, ಅಕ್ಷಯ ಪೊಕಲೆ, ಪ್ರಶಾಂತ ಕಾಂಬಳೆ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಗಳು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾವ ಕಾರದಗಾ-ಬೋಜ ಸೇತುವೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣಾ ತಂಡ ಹಾಗೂ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





