Breaking News

ರಾಜಕೀಯ ಸುದ್ದಿ

ಬಿಜೆಪಿ ಸರ್ಕಾರ ನಾಡಿನ ಸಮಸ್ಯೆಗಳನ್ನು ‘ವಿಷಯಾಂತರ’ ಮಾಡಲು ‘ಮತಾಂತರ’ ಗುಮ್ಮವನ್ನು ತಂದು ನಿಲ್ಲಿಸಿದೆ-ಎಚ್.ಡಿ. ಕುಮಾರಸ್ವಾಮಿ

ಬೆಳಗಾವಿ: ಕಲಾಪ ವರದಿ ಮಾಡಲು ಬಂದ ಮಾಧ್ಯಮಗಳಿಗೆ ಸುವರ್ಣಸೌಧ ಪ್ರವೇಶಕ್ಕೆ ನಿರ್ಬಂಧ ಹೇರಿದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿರುವವರು ಸಂವಿಧಾನದ ಒಂದು ಕಾಲನ್ನೇ ಮುರಿಯುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ, ಟ್ವೀಟ್‍ನಲ್ಲಿ ಏನಿದೆ?ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರ್ಕಾರ ನಾಡಿನ ಸಮಸ್ಯೆಗಳನ್ನು ‘ವಿಷಯಾಂತರ’ ಮಾಡಲು …

Read More »

ಅಧಿವೇಶನದಲ್ಲಿ ವಿರೋಧ ಪಕ್ಷದವರು ಚರ್ಚೆಯಿಂದ ಓಡಿ ಹೋದರು: ಜೋಶಿ ವ್ಯಂಗ್ಯ

ನವದೆಹಲಿ: ನೂತನ ಎಲೆಕ್ಷನ್ ಬಿಲ್ ಅನ್ನೇ ನೆಪ ಮಾಡಿಕೊಂಡು ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಸಂಸತ್ ಅಧಿವೇಶನದಲ್ಲಿ ಗಲಾಟೆ ಮಾಡಿದವು, ಅವರಿಗೆ ಸ್ಪೀಕರ್ ಚರ್ಚೆಗೆ ಅವಕಾಶ ನೀಡಿದರೂ ಚರ್ಚೆ ಮಾಡದೇ ಓಡಿ ಹೋದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಅನಿರ್ದಿಷ್ಟವಾಧಿಗೆ ಮುಂದೂಡಿಕೆಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲೂ ವಿಪಕ್ಷಗಳು ಅತ್ಯಂತ ಕೆಟ್ಟದಾಗಿ ವರ್ತಿಸಿವೆ, ರೂಲ್ …

Read More »

ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿಲ್ಲ : ಕರವೇ ಅಧ್ಯಕ್ಷ್ಯ ಟಿ. ಎ ನಾರಾಯಣ ಗೌಡ

ಬೆಂಗಳೂರು : ಡಿಸೆಂಬರ್‌ 31ರ ಕರ್ನಾಟಕ ಬಂದ್‌ಗೆ ಸಧ್ಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ್ಯ ಟಿ.ಎ ನಾರಾಯಣ ಗೌಡ ಹೇಳಿದ್ದಾರೆ.ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷರು, ’31ರ ಕರ್ನಾಟಕ ಬಂದ್‌ಗೆ ಸಧ್ಯಕ್ಕೆ ನಮ್ಮ ಬೆಂಬಲವಿಲ್ಲ . ಯಾಕಂದ್ರೆ, ಬಂದ್‌ಗೆ ಒಂದಷ್ಟು ಯೋಜನೆ ಮಾಡಿಕೊಳ್ಳಬೇಕು. ಈ ರೀತಿ ಏಕಾಏಕಿ ಪ್ರತಿಭಟನೆ ಮಾಡಿದ್ರೆ, ಜನರಿಗೆ ತೊಂದರೆ ಆಗುತ್ತೆ. ಹಾಗಾಗಿ ನಾಳಿನ ಕರವೇ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ …

Read More »

ಜನರ ಭಾವನೆಗಳನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದೆ-ಸಿದ್ಧರಾಮಯ್ಯ

ಬೆಳಗಾವಿ: ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಕಳ್ಳರ ಹಾಗೆ ಜಾರಿಗೆ ತಂದಿದ್ದಾರೆ. ಹೀಗಾಗಿ, ಸದನದ ಹೊರಗೆ ಮತ್ತು ಒಳಗೂ ಕಾನೂನು‌ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದವರು ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದ್ದಾರೆ. ಇವತ್ತಿನವರೆಗೆ ಆಮಿಷ ಹಾಗೂ ಪ್ರಚೋದನೆಗಳಿಗೆ ಮತಾಂತರವಾಗಿದ್ದು ಬಹಳ ಕಡಿಮೆ. ಏನಾದರೂ ಮತಾಂತರವಾಗಿದ್ದರೆ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಿಂದ ಅವಮಾನವಾಗಿ ಆರ್ಥಿಕ …

Read More »

ಹಣ ದ್ವಿಗುಣ ವಂಚನೆ ಪ್ರಕರಣ : ಚಿತ್ರದುರ್ಗ ನಗರಸಭೆ ಜೆಡಿಎಸ್​ ಸದಸ್ಯ ಬಂಧನ

ಚಿತ್ರದುರ್ಗ : ಹಣ ದ್ವಿಗುಣ ವಂಚನೆ ಆರೋಪದ ಮೇಲೆ ಇಲ್ಲಿನ ನಗರಸಭೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಗರಸಭೆಯ 4ನೇ ವಾರ್ಡ್ ಜೆಡಿಎಸ್ ಸದಸ್ಯ ಚಂದ್ರಶೇಖರ್ ಅಲಿಯಾಸ್ ಚಂದ್ರು ಬಂಧಿತ ಆರೋಪಿಯಾಗಿದ್ದಾರೆ. ಚಂದ್ರಶೇಖರ್ ಖೋಟಾ ನೋಟು ಕಿಂಗ್ ಪಿನ್ ಎಂದೇ ಕುಖ್ಯಾತನಾಗಿರುವ. ಸಾಕಷ್ಟು ಪ್ರಕರಣಗಳಲ್ಲಿ ಬೇಕಾಗಿದ್ದ. ಆದರೆ, ಯಾವುದೇ ದಾಖಲೆಗಳು ಸಿಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚೆಗೆ ದೊಡ್ಡಬಳ್ಳಾಪುರ ಮೂಲದ ನಾಗರಾಜ್ ಎಂಬುವರಿಗೆ ವಂಚಿಸಿರುವ ಬಗ್ಗೆ ಚಿತ್ರದುರ್ಗದಲ್ಲಿ ಚಂದ್ರಶೇಖರ್ ವಿರುದ್ದ ಪ್ರಕರಣ …

Read More »

ಬಸವಣ್ಣ- ಅಂಬೇಡ್ಕರ್ ಸಿದ್ಧಾಂತಗಳಿಗೆ ಸರ್ಕಾರ ಅಪಚಾರ : ಡಿಕೆ ಶಿವಕುಮಾರ

ಬೆಳಗಾವಿ:– ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸುವ ಮೂಲಕ ರಾಜ್ಯ ಸರ್ಕಾರ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಅಪಚಾರ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೆ ಶತಮಾನದಲ್ಲಿ ಎಲ್ಲ ಸಮುದಾಯಗಳಿಗೂ ಲಿಂಗಧಾರಣೆ ಮಾಡುವ ಮೂಲಕ ಬಸವಣ್ಣ ಸಮಾನತೆಯ ತತ್ವ ಸಾರಿದ್ದರು. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಬಗ್ಗೆ ಪ್ರಚಾರ ಮಾಡಿದ್ದರು. ಆದರೆ, ಬಿಜೆಪಿಯವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು …

Read More »

ದೈಹಿಕ ಸಂಬಂಧದ ನಂತರ ಮದುವೆಯಾಗಲು ನಿರಾಕರಿಸುವುದು ಮೋಸವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಪರಸ್ಪರ ಒಪ್ಪಿಗೆಯೊಂದಿಗೆ ದೀರ್ಘಾವಧಿಯವರೆಗೆ ದೈಹಿಕ ಸಂಬಂಧಗಳನ್ನು ಉಳಿಸಿಕೊಂಡ ನಂತರ ಮದುವೆಯಾಗಲು ನಿರಾಕರಿಸುವುದನ್ನು ವಂಚನೆ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಸಂತ್ರಸ್ತೆ ಪಾಲ್ಘರ್ ನಿವಾಸಿಯೊಬ್ಬರು ಮೂರು ವರ್ಷಗಳಕಾಲ ಮದುವೆಯ ನೆಪದಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದರು ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಾಗ ಯುವಕ ನಿರಾಕರಿಸಿದ್ದಾನೆ ಅಂತ ಯುವತಿ ನ್ಯಾಯಾಕ್ಕಾಗಿ ಮನವಿ ಸಲ್ಲಿಸಿದ್ದಳು. ಇದೇ ವೇಳೇ ಆರೋಪಿಯ ಮೇಲೆ ಅತ್ಯಾಚಾರ ಮತ್ತು ವಂಚನೆಗಾಗಿ ಸೆಕ್ಷನ್ 376 ಮತ್ತು 417 ರ ಅಡಿಯಲ್ಲಿ …

Read More »

ತೃತೀಯ ಲಿಂಗಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ಅವಕಾಶ..!

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ನೀಡುವ ಮೂಲಕ ಸ್ವಾಗತಾರ್ಹ ಮತ್ತು ಪ್ರಗತಿಪರ ಹೆಜ್ಜೆ ಇಟ್ಟಿದ್ದು, ಕೆಎಸ್‌ಆರ್‌ಪಿ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ ವಿಶೇಷ ಮೀಸಲು ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಪುರುಷ, ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಳೆದ ವರ್ಷ ನಗರದ ಎನ್‌ಜಿಒ ಮತ್ತು ಹಕ್ಕುಗಳ ಸಂಘ – ಸಂಗಮ ಹಾಗೂ ಸಾಮಾಜಿಕ ಕಾರ್ಯಕರ್ತೆ ನಿಶಾ ಗೂಳೂರ್ ಪರ ಹಿರಿಯ ವಕೀಲ ಬಿಟಿ ವೆಂಕಟೇಶ್ …

Read More »

ಸಿಎಂ ಬದಲಾವಣೆ ವಿಚಾರ ಅದೊಂದು ಊಹಾಪೋಹ ಅಷ್ಟೇ.. ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಧಾರವಾಡ : ಸಿಎಂ ಬದಲಾವಣೆ ವಿಚಾರ ಅದೊಂದು ಊಹಾಪೋಹ ಅಷ್ಟೇ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಬೊಮ್ಮಾಯಿ ನಮ್ಮ ಶಾಸಕಾಂಗ ಪಕ್ಷದ ನಾಯಕ. ನಮ್ಮ ನಾಯಕರು ಅಂತಾ ಒಪ್ಪಿದ್ದೇವೆ. ಅಮಿತ್ ಶಾ, ನಡ್ಡಾ ಹಾಗೂ ಎಲ್ಲ ನಾಯಕರು ಒಪ್ಪಿದ್ದಾರೆ.ಬದಲಾವಣೆ ಅನ್ನೋದು ಮಾಧ್ಯಮದಲ್ಲಿ ಮಾತ್ರ ಕೇಳಿದ್ದೇವೆ. ಪಕ್ಷದಲ್ಲಿ ಬದಲಾವಣೆ ಮಾಡುವುದಿಲ್ಲ. ಅಂತಹ ಬದಲಾವಣೆ ನಮ್ಮ ಕಣ್ಣ …

Read More »

ಹೊಸ ವರ್ಷಕ್ಕೆ ನಿರ್ಬಂಧ, ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ-ಕ್ರೀಸ್ಮಸ್‌ ಗಿಲ್ಲ ನಿರ್ಬಂಧ

ಬೆಂಗಳೂರು : 2021ಕ್ಕೆ ಬೈ-ಬೈ ಹೇಳಿ 2022ಕ್ಕೆ ಹಾಯ್‌ ಹೇಳುತ್ತಾ ಅದ್ಧೂರಿಯಾಗಿ ಹೊಸ ವರ್ಷವನ್ನು ವೆಲ್‌ಕಮ್‌ ಮಾಡ್ಕೊಳ್ಳೋಕೆ ಸಾಕಷ್ಟು ಮಂದಿ ತುದಿಗಾಲಲ್ಲಿರುವ ಹೊತ್ತಿನಲ್ಲೇ, ಕೊರೊನಾ ಮತ್ತು ಒಮಿಕ್ರಾನ್‌ ವೈರಸ್‌ ತಡೆಗಟ್ಟುವ ಕಾರಣದಿಂದ ಸರ್ಕಾರ ಅದ್ಧೂರಿ ವರ್ಷಾಚರಣೆಗೆ ಬ್ರೇಕ್‌ ಹಾಕಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಜೊತೆಗೆ ಕ್ರೀಸ್ಮಸ್‌ ಹಬ್ಬಕ್ಕೆ ಯಾವುದೇ ನಿರ್ಭಂದ ಹೇರಿಲ್ಲ. ರೆಸ್ಟೋರೆಂಟ್, ಕ್ಲಬ್‌ಗಳಿಗೆ ಶೇಕಡಾ 50ರಷ್ಟು ಜನರಿಗೆ ಪ್ರವೇಶಸೀಮಿತ ಪ್ರಮಾಣದಲ್ಲಿ ಮ್ಯೂಸಿಕ್‌, ಡಿ.ಜೆಗೆ ಅವಕಾಶಎಂಜಿ ರಸ್ತೆ, ಬ್ರಿಗೇಡ್ ರಸ್ತೆ …

Read More »