Breaking News

ಬಾಗಲೂರು: ವ್ಯಾಪಾರಿಯ ಕೊಂದು ಕಾರಿನಲ್ಲಿ ಶವವಿಟ್ಟ ದುರುಳರು

ಬೆಂಗಳೂರು: ಹಣಕಾಸು ಹಾಗೂ ವೈಯಕ್ತಿಕ ವಿಚಾರಕ್ಕೆ ಗುಜರಿ ವ್ಯಾಪಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬನ್ನೇರುಘಟ್ಟ ನಿವಾಸಿ ಇಮ್ರಾಜ್ ಪಾಷಾ (35) ಕೊಲೆಯಾದವರು. ನ.16ರಂದು ತಡರಾತ್ರಿ ಮಂಚಪ್ಪನಹಳ್ಳಿ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗುಜರಿ ವ್ಯಾಪಾರ ಮಾಡುತ್ತಿದ್ದ ಇಮ್ರಾಜ್ ಪಾಷಾ, ವ್ಯವಹಾರದ ಹಣ ಸಂಗ್ರಹಿಸಲು ಬಾಗಲೂರಿಗೆ ಬಂದಿದ್ದರು. ರಾತ್ರಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದು, ಮೃತದೇಹವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಇರಿಸಿ ಪರಾರಿಯಾಗಿದ್ದಾರೆ. ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ ತಲೆಯ ಗಾಯ ಪರಿಶೀಲಿಸಿದಾಗ ಗುಂಡು ಪತ್ತೆಯಾಗಿದ್ದು, ಸ್ಥಳದಲ್ಲಿ ಪಿಸ್ತೂಲ್ ಸಿಗದ ಕಾರಣ ಕೊಲೆ ಎಂಬುದು ದೃಢಪಟ್ಟಿದೆ. ಹಣಕಾಸು ವ್ಯವಹಾರದಲ್ಲಿ ಯಾರೊಂದಿಗಾದರೂ ದ್ವೇಷವಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಬಾಗಲೂರು ಶೂಟೌಟ್‌ ಕೇಸ್‌: ಪ್ರಮುಖ ಆರೋಪಿ ನವೀದ್‌ ಇಲಾಹಿ ಬೇಗ್‌ ಅರೆಸ್ಟ್‌

ಬೆಂಗಳೂರು: ಬಾಗಲೂರಿನಲ್ಲಿ ಕಾರಿನಲ್ಲೇ ಗುಜರಿ ವ್ಯಾಪಾರಿ ಇಮ್ರಾಜ್ ಪಾಷಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ …

Leave a Reply

Your email address will not be published. Required fields are marked *