Breaking News

ದಕ್ಷಿಣ ಕನ್ನಡ ಬೈಕಂಪಾಡಿಯ ಬೋಲಾಸ್ ಘಟಕದಿಂದ 1,240 ಕೆ.ಜಿ. ನಕಲಿ ಅಡುಗೆ ಎಣ್ಣೆ ಜಪ್ತಿ!

ಮಂಗಳೂರು: ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್‌ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ಲೋಪ ಎಸಗಿದ ಹಿನ್ನೆಲೆಯಲ್ಲಿ, ಬೈಕಂಪಾಡಿಯ ಬೋಲಾಸ್ ಆಗ್ರೋ ಘಟಕದಿಂದ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ಆರೋಗ್ಯ ಇಲಾಖೆ ವಶಪಡಿಸಿಕೊಂಡಿದೆ. ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆ ತರಿಸಿ, ಅದನ್ನು ‘ಕೋಲ್ಡ್ ಪ್ರೆಸ್ಡ್’ ಎಣ್ಣೆ ಎಂದು ಲೇಬಲ್ ಮಾಡಿ ಮಾರಾಟ ಮಾಡುತ್ತಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಲೇಬಲಿಂಗ್ ಹಾಗೂ ಬ್ರ್ಯಾಂಡಿಂಗ್ ಲೋಪಗಳನ್ನು ಗುರುತಿಸಿದ್ದಾರೆ. ಘಟಕದಿಂದ 11 ಬಾಕ್ಸ್ ಕಡಲೆಕಾಯಿ ಎಣ್ಣೆ, 30 ಕ್ಯಾನ್ ಕಡಲೆಕಾಯಿ ಎಣ್ಣೆ ಹಾಗೂ 4 ಬಾಕ್ಸ್ ತೆಂಗಿನ ಎಣ್ಣೆ ಸೇರಿ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆ ವಶಪಡಿಸಿಕೊಳ್ಳಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

Share News

About BigTv News

Check Also

ಮನೆಯ ಮಾಲೀಕನಿಗೆ ಚಾಕು ತೋರಿಸಿ ಚಿನ್ನ, ನಗದು ದರೋಡೆ!

ಬೆಂಗಳೂರು: ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಮಧ್ಯರಾತ್ರಿ ಮುಸುಕುಧಾರಿ ದರೋಡೆಕೋರರ ತಂಡವೊಂದು ಮನೆಯ ಬಾಗಿಲು ಒಡೆದು ಒಳನುಗ್ಗಿ ದಂಪತಿಗೆ ಚಾಕು …

Leave a Reply

Your email address will not be published. Required fields are marked *