Breaking News

ಹುಬ್ಬಳ್ಳಿ

ಕಾಂಕ್ರೀಟ್ ಕಾಮಗಾರಿಗೆ ಭೂಮಿಪೂಜೆ ಸಲ್ಲಿಕೆ

ಹುಬ್ಬಳ್ಳಿ: ಶಾಸಕ ಪ್ರಸಾದ್ ಅಬ್ಬಯ್ಯ ವಾರ್ಡ್ ನಂ . 82 ರ ಸೋನಿಯಾಗಾಂಧಿ ನಗರದಲ್ಲಿ ಕೈಗೊಂಡಿರುವ 20 ಲಕ್ಷ ರೂ . ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು . ಈ ವೇಳೆಯಲ್ಲಿ ಬಡಾವಣೆಯ ಸಾರ್ವಜನಿಕರಿಗೆ ಶಾಸಕರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಇದ್ದರು .

Read More »

ಮನನೊಂದು ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿದ ಶರಣ ಪಟ್ಟಣಶೆಟ್ಟಿ

ಹುಬ್ಬಳ್ಳಿ: ಮನನೊಂದು ವ್ಯಕ್ತಿಯೊಬ್ಬ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಬೆಳ್ಳಂಬೆಳಗ್ಗೆ ನಗರದ ಗೋಕುಲ್ ರಸ್ತೆಯಲ್ಲಿ ನಡೆದಿದೆ. 36 ವರ್ಷದ ಶರಣ ಪಟ್ಟಣಶೆಟ್ಟಿ ಎಂಬುವನೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗೋಕುಲ್ ರಸ್ತೆಯ ಶ್ರಿಯಾ ಇನ್‌ಕ್ಲೂವ್ ಅಪಾರ್ಟ್‌ಮೆಂಟ್ ನಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ಕುರಿತು ಗೋಕುಲ ರಸ್ತೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲಾ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ….

Read More »

ಸಾರ್ವಜನಿಕರಿಗೆ ವಂಚಿಸುತ್ತಿದ್ದ ವ್ಯಕ್ತಿ ಬಂಧನ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ರಾಜಧಾನಿ ಕಾಲೋನಿ ಕ್ರಾಸ್ ಹತ್ತಿರ ಓಸಿ ಬರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಓರ್ವನನ್ನು ಗೋಕುಲ ರಸ್ತೆಯ ಪೊಲೀಸರು ಬಂಧಿಸಿ ಅವನಿಂದ ೯,೩೯೦ ರೂ. ವಶಪಡಿಸಿಕೊಂಡಿದ್ದಾರೆ.ಹಳೆ ಹುಬ್ಬಳ್ಳಿ ಅರವಿಂದ ನಗರದ ನಿವಾಸಿ ಮೋಹನ ಎ. ಎಂಬಾತ ಬಂಧಿತ ಆರೋಪಿ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕರೆ ಮೂಲಕ ಅಪರಿಚಿತ ವ್ಯಕ್ತಿಯಿಂದ ಹಣ ವರ್ಗಾವಣೆ

ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ ಮಾಡಬೇಕು ಎಂದು ಚನ್ನವ್ವ ಸೂರಿಯವರಿಗೆ ಕರೆ ಮಾಡಿದ ವ್ಯಕ್ತಿ 1,52,934 ರೂ . ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪರಿಚಿತ ವ್ಯಕ್ತಿ ಚನ್ನವ್ವ ಅವರಿಗೆ ಕರೆ ಮಾಡಿ ನಿಮ್ಮಬ್ಯಾಂಕ್ ಸ್ಥಗಿತವಾಗುತ್ತೆ . ಕೆವೈಸಿ ಅಪಡೇಟ್ ಮಾಡಿಕೊಳ್ಳಬೇಕು ಎಂದು ನಂಬಿಸಿ ಎಟಿಎಂ ಕಾರ್ಡ್ ನಂಬರ ಮತ್ತು ಒಟಿಪಿ ಪಡೆದು ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ .

Read More »

ಹುಬ್ಬಳ್ಳಿ ಗಲಭೆಯಲ್ಲಿ ಯಾವುದೇ ಪಕ್ಷದ ಮುಖಂಡರು ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು: ಶೆಟ್ಟರ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಯಾವುದೇ ಪಕ್ಷದ ಮುಖಂಡರು ಭಾಗಿಯಾಗಿದ್ದರೂ ಕಾನೂನು ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹುಬ್ಬಳ್ಳಿಯ ಶಾಂತಿಗೆ ದಕ್ಕೆಯನ್ನುಂಟು ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಬಿಜೆಪಿ ಪ್ರಮುಖರ ಸಭೆಯ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ ಸುಮಾರು ವರ್ಷಗಳಿಂದ ಯಾವುದೇ ಗಲಾಟೆ ಹಾಗೂ ಕೋಮುಗಲಭೆ ಇಲ್ಲದಿರುವ ಹುಬ್ಬಳ್ಳಿಯಲ್ಲಿ ಈಗ ಏಕಾಏಕಿ ಅಶಾಂತಿಯನ್ನು ಹುಟ್ಟು ಹಾಕಲಾಗಿದೆ. ಈ ಘಟನೆಯಲ್ಲಿ …

Read More »

ಹುಬ್ಬಳ್ಳಿ ಗಲಭೆ : ನನ್ನ ಗಂಡನನ್ನು ಬೀಡಿ ಎಂದು‌ ಕಣ್ಣೀರು ಹಾಕಿದ ಗರ್ಭಿಣಿ

ಹುಬ್ಬಳ್ಳಿ : ನಗರದ ಹುಬ್ಬಳ್ಳಿ ಗಲಭೆ ಹಿನ್ನಲೆ ಇಲ್ಲಿಯವರೆಗೂ 140 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ . ಸಾದಿಕ ಮಕಾಂದಾರ ಎಂಬುವನನ್ನು ಪೋಲಿಸರು ವಿಚಾರಣೆ ಮಾಡಲು ಪೋಲಿಸ್ ಠಾಣೆಗೆ ಕರೆತಂದಿದ್ದಾರೆ . ಈ ಸಂದರ್ಭದಲ್ಲಿ ಬಂಧಿತನ ಸಂಬಂಧಿಕರ ಆಕ್ರಂದನ ಮಾತ್ರ ಹಳೆ ಪೋಲಿಸ್ ಠಾಣೆ ಎದುರು ನಿಂತಿಲ್ಲ . 8 ತಿಂಗಳ ತುಂಬು ಗರ್ಭಿಣಿಯು ತನ್ನ ಗಂಡನನ್ನು ಬಿಡುವಂತೆ ಕಣ್ಣಿರು ಹಾಕಿದಳು . ನಾನು ಆಸ್ಪತ್ರೆಗೆ ಹೋಗಬೇಕು , ಇದು …

Read More »

ವಿವಿಧ ಪ್ರದರ್ಶನಗಳಿಂದ ಮೇರುಗು ತುಂಬಿದ ವಚನ ವೈಭವ‌ ಕಾರ್ಯಕ್ರಮ

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಶನಿವಾರದಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದೊಂದಿಗೆ ಬಸವ ಜಯಂತಿ ಪ್ರಯುಕ್ತ ನಗರದ ಶ್ರೀ ಕಾಮಾಕ್ಷಿ ಮಹಿಳಾ ಮಂಡಳ(ರಿ) ವತಿಯಿಂದ “ವಚನ ವೈಭವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ  ಮಹಿಳಾ ಮಂಡಳದವರು ಪಾಲ್ಗೊಂಡು ವಚನ ವಿಶ್ಲೇಷಣೆ ಹಾಗೂ ಸಮೂಹ ವಚನ ನೃತ್ಯ ಸ್ಪರ್ಧೆ ಹಾಗೂ ಸಮೂಹ ಗೀತ ವಚನ …

Read More »

ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಸಹ್ಯ ಬರಹ:ದೂರು ದಾಖಲು

ಹುಬ್ಬಳ್ಳಿ: ಇನ್‌ಸ್ಟಾಗ್ರಾಮ್ ಟ್ರೋಲ್ ಪೇಜ್‌ನಲ್ಲಿ ನಗರದ ವಿದ್ಯಾರ್ಥಿನಿಯೊಬ್ಬಳ ಹೆಸರಿನಲ್ಲಿ ಆಶ್ಲೀಲ ಪದಗಳನ್ನು ಬಳಸಿ ಗೌರವಕ್ಕೆ ಧಕ್ಕೆ ಉಂಟು ಮಾಡುವ ಸಂದೇಶ ಹಾಕಿರುವ ಬಗ್ಗೆ ದೂರು ದಾಖಲಾಗಿದೆ. ಜೊತೆಗೆ ಆರೋಪಿತ ನಿತ್ಯ ವಿಡಿಯೋ ಕಾಲ್ ಮಾಡಿ ಅಸಹ್ಯವಾಗಿ ವರ್ತಿಸುತ್ತಿದ್ದಾನೆ ಎನ್ನಲಾಗಿದ್ದು , ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಪುಟಾಣಿಗಳಿಂದ ವಿಶ್ವ ಭೂದಿನ ಮಹತ್ವದ ಆಚರಣೆ

ಹುಬ್ಬಳ್ಳಿ : ಪುಟಾಣಿಗಳು ವಿಶ್ವ ಭೂದಿನದ ಅಂಗವಾಗಿ ಪರಿಸರದ ಬಗ್ಗೆ ತಮಗರಿವಿರುವಷ್ಟು ಜಾಗೃತಿ ಮೂಡಿಸಿದ್ದಾರೆ . ಇಂತದೊಂದು ಅಪರೂಪದ ದೃಶ್ಯ ಕಂಡು ಬಂದದ್ದು ಧಾರವಾಡದಲ್ಲಿ , ಧಾರವಾಡದ ಯುವ ಡ್ಯಾನ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂದಿನದ ಕಾರ್ಯಕ್ರಮದಲ್ಲಿ ಪುಟಾಣಿಗಳು , ಮರವನ್ನು ರಕ್ಷಿಸಿ , ನೀರನ್ನು ಮಿತವಾಗಿ ಬಳಸಿ ಎಂಬ ಇತ್ಯಾದಿ ಸಂದೇಶಗಳುಳ್ಳ ಬೋರ್ಡ್‌ಗಳನ್ನು ಹಿಡಿದ ಜಾಗೃತಿ ಮೂಡಿಸಿದರು .

Read More »

ಹುಬ್ಬಳ್ಳಿ ಗಲಭೆ ಇದೊಂದು ಪೂರ್ವ ನಿಯೋಜಿತ ಕೃತ್ಯ : ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ :ಹಳೇ ಹುಬ್ಬಳ್ಳಿ ಗಲಭೆ ಘಟನೆಗೆ ಸಂಬಂಧಿಸಿದಂತೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಿಂದೂಗಳನ್ನು ಭಯಭೀತಿಗೊಳಿಸುವ ಉದ್ದೇಶದಿಂದ ಗಲಭೆ ರೂಪಿಸಲಾಗಿದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು. ನಗರದಲ್ಲಿಂದು ಸುದ್ದಿಗಾರರೊಂಧಿಗೆ ಮಾತನಾಡಿದ ಅವರು, ಎಐಎಂಐಎಂ ಹಾಗೂ ಕಾಂಗ್ರೆಸ್ ಪಕ್ಷದ ಕೈವಾಡವಿದ್ದು, ಕಾಂಗ್ರೆಸ್ ಮುಖಂಡರಾದ ಅಲ್ತಾಪ್ ಹಳ್ಳೂರ, ಅಲ್ತಾಪ್ ನವಾಜ್ ಎಂ. ಕಿತ್ತೂರ ಅವರನ್ನು ಬಂಧಿಸಬೇಕು. ಇವರಿಬ್ಬರು ಕುಮ್ಮಕ್ಕು ನೀಡಿ ಇಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ದೂರಿದರು.ನಗರದ …

Read More »