Breaking News
Featured Video Play Icon

ಹುಬ್ಬಳ್ಳಿಯಲ್ಲಿ ಮೀತಿ ಮೀರಿದ ಮೀಟರ್ ಬಡ್ಡಿ ದಂಧೆ: ಸಾಲ ಭಾದೆ ತಾಳಲಾರದೆ ಟ್ರಕ್ ಗೆ ಬಿದ್ದು ವ್ಯಕ್ತಿ ಸಾವು

ಹುಬ್ಬಳ್ಳಿಯಲ್ಲಿ ಬಡ್ಡಿದಂದೆಗೆ ಮತ್ತೊಂದು ಬಲಿ!!

ಹಗಲು ವೇಶದಲ್ಲಿ ಜನಸೇವಕರು ರಾತ್ರಿ ಹೊತ್ತಲ್ಲಿ ಮನೆಮುರಕರು!!!

ಬಿಳಿ ಕಾಲರ್ ಬಟ್ಟೆ ತೊಟ್ಟು ಬಡವರ ಜೊತೆ ಆಟ ಆಡುವವರು ಕಾಣ್ತಿಲ್ವಾ ಇಲಾಖೆಗೆ.

ಬಡ್ಡಿಕೊರರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ವಿಫಲವಾದ ಪೊಲೀಸ್ ಇಲಾಖೆ..?

ಸಿದ್ದಪ್ಪನ ಸಾವಿನ ಜೊತೆ ಆಟಾಡಿದ ನಾ ಮಹೇಶ. ?

ಹುಬ್ಬಳ್ಳಿ: ಸಾಲ ಭಾದೆ ತಾಳಲಾರದೆ ಟ್ರಕ್ ಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಬೈಪಾಸ್ ರಸ್ತೆಯ ದಾರಾವತಿ ಹನಮಮಪ್ಪನ ದೇವಸ್ಥಾನದ ಬಳಿ ನಡೆದಿದೆ.

ಸಿದ್ಧಪ್ಪ ಕೆಂಚಣ್ಣವರ(41) ಮೃತ ದುರ್ದೈವಿ, ಸಿದ್ಧಪ್ಪ ಉಣಕಲ್ ದುರ್ಗಮ್ಮನ ಓಣಿ ನಿವಾಸಿಯಾಗಿದ್ದು ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೈಕ್ ಚಲಾಯಿಸುತ್ತಲೇ ಟ್ರಕ್ ಕೆಳಗೆ ಬಿದ್ದಿರೋ ಸಿದ್ಧಪ್ಪ, ಮಹೇಶ್ ಚಿಕ್ಕವೀರಮಠ ಎಂಬಾತನಿಂದ ಬಡ್ಡಿ ಗಾಗಿ ಕಿರುಕುಳಕ್ಕೆ ಒಳಗಾಗಿದ್ದನು.

ಮಹೇಶ್ ಚಿಕ್ಕವೀರಮಠ ಗೆ ತಕ್ಕ ಶಿಕ್ಷೆ ನೀಡಬೇಕೆಂದು ಡೆತ್ ನಲ್ಲಿ ಒತ್ತಾಯಿಸಿ ಪೋಷಕರನ್ನು, ಕುಟುಂಬಸ್ಥರ ಕ್ಷಮೆ ಕೋರಿರೋ ಸಿದ್ಧಪ್ಪ ಮಹೇಶ್ ಚಿಕ್ಕವೀರಮಠನಿಂದ 10 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಅದಕ್ಕೆ ಬದಲಾಗಿ ಹಂತ ಹಂತವಾಗಿ ಹಣ ವಾಪಸ್ ಮಾಡಿದ್ದರೂ ಇದರ ಹೊರತಾಗಿಯೂ ಹಣ ಕಟ್ಟುವಂತೆ ಮಹೇಶ್ ಪೀಡಿಸುತ್ತಿದ್ದ ಸಾಲಗಾರನ ಕಿರುಕುಳು ತಾಳಲಾರದೆ ಟ್ರಕ್ ಗೆ ಬಿದ್ದು ಸಾವನ್ನಪ್ಪಿದ್ದಾನೆ.

ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರ ಬೇಟಿ, ಪರಿಶೀಲನೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರತಿಕ್ರಿಯಿಸಿ ಗೋಕುಲ್ ರೋಡ್ ಠಾಣೆ ಮತ್ತು ಪೂರ್ವ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ‌ನಡೆದಿತ್ತು. ಮಹೇಶ್ ಚಿಕ್ಕವೀರಮಠ ನಿಂದ 10 ಲಕ್ಷ ಸಾಲ ಪಡೆದಿದ್ದ ಆತ ಸಾಲವನ್ನ ಹಂತ ಹಂತವಾಗಿ ವಾಪಸ್ ನೀಡಿದ್ದ ಸಿದ್ದಪ್ಪ ಆತ್ಮಹತ್ಯೆ ಮಾಡಿಕೊಳ್ತಾ ಇದ್ದೇನೆ ಅಂತ 3 ಪುಟದ ಮೆಸೇಜ್ ಸ್ಟೇಟಸ್ ಹಾಕಿಕೊಂಡಿದ್ದ.

ನಿನ್ನೆ ಸಂಜೆ 7 ಗಂಟೆಗೆ ಮನೆ ಬಿಟ್ಟು ಹೋಗಿದ್ದ ಸಿದ್ದಪ್ಪ(41) ಮೃತ ದೇಹ ಸಿಕ್ಕಿದೆ, ಪ್ರಾಥಮಿಕವಾಗಿ ರಸ್ತೆ ಅಪಘಾತ ಅಂತ ಕಂಡು ಬಂದಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆದ ಬಗ್ಗೆ ದೂರು ಬಂದಿತ್ತು. ಆತ್ಮಹತ್ಯೆ ಅಂತ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ, ಮಹೇಶ್ ಚಿಕ್ಕವೀರಮಠನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎಲ್.ಶಶಿಕುಮಾರ್ ತಿಳಿಸಿದ್ದಾರೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *