ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಶನಿವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದೊಂದಿಗೆ ಬಸವ ಜಯಂತಿ ಪ್ರಯುಕ್ತ ನಗರದ ಶ್ರೀ ಕಾಮಾಕ್ಷಿ ಮಹಿಳಾ ಮಂಡಳ(ರಿ) ವತಿಯಿಂದ “ವಚನ ವೈಭವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಮಂಡಳದವರು ಪಾಲ್ಗೊಂಡು ವಚನ ವಿಶ್ಲೇಷಣೆ ಹಾಗೂ ಸಮೂಹ ವಚನ ನೃತ್ಯ ಸ್ಪರ್ಧೆ ಹಾಗೂ ಸಮೂಹ ಗೀತ ವಚನ ನಾಟಕವನ್ನು ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ, ಶ್ರೀಮತಿ ಡಾ. ಭಾರತಿ ಹಿರೇಮಠ, ವಿದುಷಿ ಶ್ರೀಮತಿ ಡಾ. ಸಹನಾ ಭಟ್, ಶ್ರೀಮತಿ ಡಾ. ಶೋಭಾ ಕರವೀರಶೇಟ್ಟರ, ಶ್ರೀಮತಿ ವಿದ್ಯಾ ವಂಟಮುರಿ ಹಾಗೂ ಶ್ರೀಮತಿ ಅಪರ್ಣಾ ಹೆಬಸೂರ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

