Breaking News

ಜಿಲ್ಲೆ

ಮಹಿಳೆಯರಿಬ್ಬರನ್ನು ಉಪಾಯದಿಂದ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತು ಬಿಗಿದು ಹತ್ಯೆಗೆ ಯತ್ನ……

ಮಂಗಳೂರು (ದಕ್ಷಿಣ ಕನ್ನಡ): ವ್ಯಕ್ತಿಯೊಬ್ಬ ಮಹಿಳೆಯರಿಬ್ಬರನ್ನು ಉಪಾಯದಿಂದ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತು ಬಿಗಿದು ಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಸಮೀಪ ಮಂಗಳವಾರ ನಡೆದಿದೆ. ಈ ಸಂಬಂಧ ಸುಳ್ಯದ ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಂಪ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ. ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಮೂಲೆಗದ್ದೆ ಬಾಣಪದವಿನ ಶಿಕ್ಷಕ ದಿವಂಗತ ವಾಸು ನಾಯ್ಕ ಅವರ ಪತ್ನಿ ಸುರೇಖಾ (54) ಮತ್ತು ಗೋಳಿತ್ತೊಟ್ಟುವಿನ ಗಿರಿಜಾ …

Read More »

ಟ್ರ್ಯಾಕ್ಟರ್​ಗಳನ್ನು ಪಡೆದು ಬಳಿಕ ಖಾಸಗಿ ವ್ಯಕ್ತಿಗಳಿಗೆ ಹೆಚ್ಚಿನ ಹಣಕ್ಕೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದನ ಬಂಧನ….

ಮೈಸೂರು:ರೈತರಿಂದ ಟ್ರ್ಯಾಕ್ಟರ್​ಗಳನ್ನು ಬಾಡಿಗೆ ಪಡೆದುಕೊಂಡು, ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯ ವಿಚಾರಣೆಯಿಂದ ಈ ತರಹದ ಪ್ರಕರಣ ಬೆಳಕಿಗೆ ಬಂದಿದೆ. ಹುಣಸೂರು ತಾಲೂಕಿನ ಹನಗೂಡು ಹೊಬಳಿಯ ಗಾಣನಕಟ್ಟೆ ನಂದೀಶ್ ರೈತರಿಂದ ಬಾಡಿಗೆಯ ನೆಪದಲ್ಲಿ ಟ್ರ್ಯಾಕ್ಟರ್​ಗಳನ್ನು ಪಡೆದು ಬಳಿಕ ಖಾಸಗಿ ವ್ಯಕ್ತಿಗಳಿಗೆ ಹೆಚ್ಚಿನ ಹಣಕ್ಕೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದನು.

Read More »

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ….

ಮಂಗಳೂರು(ದಕ್ಷಿಣಕನ್ನಡ):ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 298 ಮಂದಿಯ ಚಾಲನಾ ಪರವಾನಗಿ (ಡಿಎಲ್ )ರದ್ದು ಮಾಡುವಂತೆ ನಗರ ಪೊಲೀಸ್ ಕಮಿಷನರ್ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ನಿರಂತರ ಸಂಚಾರ ನಿಯಮ ಉಲ್ಲಂಘನೆ, ಅಜಾಗರೂಕತೆ, ನಿರ್ಲಕ್ಷ್ಯದಿಂದ ಚಾಲನೆ ಆರೋಪದ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮಂಗಳೂರು ನಗರ ಪೊಲೀಸ್ ಇಲಾಖೆ ಮುಂದಾಗಿದೆ. ಸುಪ್ರೀಂ ಕೋರ್ಟ್​ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ನಿತ್ಯ ಭಾರತೀಯ ದಂಡ ಸಂಹಿತೆ 1860 …

Read More »

ಮಾತುಕತೆಗೆ‌ ಕರೆಸಿ ಯುವಕನನ್ನು‌ ಚಾಕುವಿನಿಂದ ಇರಿದು ಕೊಲೆ‌ಗೈದ ಘಟನೆ…

ಶಿವಮೊಗ್ಗ : ಭಾನುವಾರ ನಡೆದಿದ್ದ ಗಲಾಟೆ ಸಂಬಂಧ ಇಂದು (ಸೋಮವಾರ) ಮಾತುಕತೆಗೆ‌ ಕರೆಸಿ ಯುವಕನನ್ನು‌ ಚಾಕುವಿನಿಂದ ಇರಿದು ಕೊಲೆ‌ಗೈದ ಘಟನೆ ಶಿಕಾರಿಪುರ ಪಟ್ಟಣದ ಕೆಹೆಚ್​ಬಿ ಕಾಲೋನಿಯ ಬಳಿ ನಡೆದಿದೆ. ಮೃತನನ್ನು ಶಿಕಾರಿಪುರದ ಜನ್ನತ್ ಗಲ್ಲಿಯ ನಿವಾಸಿ ಮಹಮ್ಮದ್ ಜಾಫರ್(32) ಎಂದು ಗುರುತಿಸಲಾಗಿದೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಭಾನುವಾರ ಶಿಕಾರಿಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಮಾತುಕತೆ ನಡೆಸಲು ಮತ್ತೆ ಶಿಕಾರಿಪುರದ ಕೆಹೆಚ್​ಬಿ ಕಾಲೋನಿಯ …

Read More »

ಬರ್ಬರ ಹತ್ಯೆ ಹೆಂಡ್ತಿಯ ಕುತ್ತಿಗೆ ಕಟ್

ವಿಜಯಪುರ: ಅನೈತಿಕ ಸಂಬಂಧದ ಸಂಶಯ ಹಿನ್ನೆಲೆ ಹೆಂಡತಿಯನ್ನು ಬರ್ಬರವಾಗಿಗಂಡನೋರ್ವ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಲಂಗೋಟಿ ತೋಟದ ವಸ್ತಿಯಲ್ಲಿ ನಡೆದಿದೆ. ಶಾಂತಾಬಾಯಿ ಲಂಗೋಟಿ ಹತ್ಯೆಯಾಗಿರುವ ದುರ್ದೈವಿ. ಇನ್ನು ಬಸಪ್ಪ ಲಂಗೋಟಿ ಹತ್ಯೆಗೈದಿರುವ ಪಾಪಿ ಗಂಡ, ಹೆಂಡತಿ ಶಾಂತಾಬಾಯಿ ಅನೈತಿಕ ಸಂಬಂಧದ ಸಂಶಯ ವ್ಯಕ್ತಪಡಿಸಿ, ಕುತ್ತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದ ಕುತ್ತಿಗೆ ಕಟ್ ಮಾಡಿದ್ದಾನೆ. ಇದರಿಂದ ಹೆಂಡತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಹೊರ್ತಿ ಪೊಲೀಸ ಠಾಣೆಯಲ್ಲಿ …

Read More »

ರಕ್ತದಲ್ಲಿ ಬರೆದುಕೊಡ್ತೀನಿ, ಬಿಜೆಪಿ ಬಿಡಲ್ಲ

ಕೊಪ್ಪಳ ಬಿಜೆಪಿ ತೊರೆಯುವದಾಗಿ ವದಂತಿ ಹಬ್ಬಿದ್ದು, ಪಕ್ಷ ತೊರೆಯುವ ಪ್ರಶ್ನೆಯೆ ಇಲ್ಲ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ.ಬೇಕಾದರೆ ರಕ್ತದಲ್ಲಿ ಬರೆದು ಕೊಡ್ತೀನಿ, ಪಕ್ಷ ಬಿಡಲ್ಲ ಎಂದಿದ್ದಾರೆ. ಈ ಬಾರಿಯೂ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧೆ ಮಾಡುವದಾಗಿ ತಿಳಿಸಿದ ಅವರು, ಪಕ್ಷ ಟಿಕೇಟ್ ಕೊಡದೆ ಹೋದರು, ಪಕ್ಷ ಸೂಚಿಸಿದ ಅಭ್ಯರ್ಥಿ ಪರ ದುಡಿಯುವದಾಗಿ ಸಂಗಣ್ಣ ಕರಡಿ ತಿಳಿಸಿದ್ದಾರೆ

Read More »

ನಡಹಬ್ಬ ದಸರಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ಕಲಾವಿದರು, ಕಲಾ ತಂಡ ಸಿದ್ಧತೆ…

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಲವು ಕಲಾವಿದರು ಮತ್ತು ಕಲಾ ತಂಡಗಳು ಈಗಾಗಲೇ ಅರ್ಜಿ ಸಲ್ಲಿಸುತ್ತಿದ್ದಾರೆ. ದೇಶ ವಿದೇಶಗಳಿಂದ ಅನೇಕ ಕಲಾವಿದರು ಮೈಸೂರಿನ ಕಲಾಮಂದಿರದಲ್ಲಿರುವ ಕಚೇರಿಗೆ ನೇರವಾಗಿ ಮತ್ತು ಅಂಚೆಯ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ ಡಿ.ಸುದರ್ಶನ್ ತಿಳಿಸಿದ್ದಾರೆ. ದಸರಾದಲ್ಲಿ ಜರುಗುವ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವೀರಗಾಸೆ, ಕತ್ತಿಕುಣಿತ , ಕರಡಿ …

Read More »

ಹಾವೇರಿಗೆ ಬರಲು ಹಾಂಸಿ, ಶಾಕಾರ ಗ್ರಾಮದ ಜನರ ಪರದಾಟ….

ಹಾವೇರಿ: ತಾಲೂಕಿನ ಹಾಂಸಿ, ಶಾಕಾರ ಗ್ರಾಮಗಳನ್ನು ತುಂಗಭದ್ರಾ ನದಿ ಹಾವೇರಿ ಜಿಲ್ಲೆಯಿಂದ ಪ್ರತ್ಯೇಕಿಸುತ್ತದೆ. ಇದರಿಂದಾಗಿ ಗ್ರಾಮಸ್ಥರು ತಮ್ಮ ನಿತ್ಯ ಕೆಲಸ ಕಾರ್ಯಕ್ಕಾಗಿ ಹಾವೇರಿ ತಾಲೂಕು ಕೇಂದ್ರ ಹಾಗೂ ಸಮೀಪದ ಗ್ರಾಮಗಳನ್ನು ಅವಲಂಬಿಸಿದ್ದಾರೆ. ಇದೇ ಕಾರಣದಿಂದ ಸಂಚರಿಸಲು ಬ್ರಿಡ್ಜ್ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ತೆಪ್ಪ ಅಥವಾ ದೋಣಿಗಳ ಸಹಾಯದಿಂದಲೇ ತುಂಗಭದ್ರಾ ನದಿ ದಾಟಿಯೇ ಹಾವೇರಿಗೆ ಬರಬೇಕಾದ ಪರಿಸ್ಥಿತಿ ಇದೆ. ಇದಲ್ಲದೇ ಇದ್ದರೆ 40 ಕಿ.ಮೀ ದೂರ ಕ್ರಮಿಸಿ ಹಾವೇರಿಯ ಗುತ್ತಲ, ಹಾವನೂರು …

Read More »

ಹುಬ್ಬಳ್ಳಿ ಮಹಾದಾಯಿಗಾಗಿ ರೈತರ ಪ್ರತಿಭಟನೆ

ಹುಬ್ಬಳ್ಳಿ: ಮಹಾದಾಯಿಗಾಗಿ ಮಹಾ ವೇದಿಕೆ ವತಿಯಿಂದ 4 ಜಿಲ್ಲೆಗಳ ಮಹಾದಾಯಿ ಕಳಸಾ ಬಂಡೂರಿ ಹೋರಾಟಗಾರ ಎಲ್ಲಾ ಸಂಘಟನೆಗಳ ವೇದಿಕೆ ವತಿಯಿಂದ ಶಂಕರ್ ಅಂಬಲಿ‌ ನೇತೃತ್ವದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಕೇಶ್ವಾಪೂರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಮುಂದೆ ಧರಣಿ ನಡೆಸಿ ಪ್ರತಿಭಟಿಸಲಾಯಿತು

Read More »

ಕಾಂಗ್ರೆಸ್ ಸೇರಲು ಕೆಲ ಬಿಜೆಪಿಗರು ತುದಿಗಾಲಲ್ಲಿದ್ದಾರೆ: ವಿನಯ್ ಕುಲಕರ್ಣ

ವಿಜಯಪುರ: ವಲಸಿಗರು ಘರ್ ವಾಪಸಿ ವಿಚಾರಕ್ಕೆ ವಿಜಯಪುರದಲ್ಲಿ ಶಾಸಕ ವಿನಯ ಕುಲಕರ್ಣಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯಲ್ಲಿ ಹಲವರು ಬೇಜಾರಿನಲ್ಲಿ ಇರೋದು ನಿಜ. ಹಾಲಿ ಶಾಸಕರ ಜೊತೆಗೆ ಕೆಲ ಮಾಜಿ ಶಾಸಕರು ಅಸಮಧಾನ ಗೊಂಡಿದ್ದಾರೆ. ಕಳೆದ ಬಾರಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಾಕಷ್ಟು ಮಂದಿ ಬಿಜೆಪಿಯಿಂದ ಬರುವ ಸಂಭವ ಇದೆ. 13 ರಿಂದ 14 ಮಾಜಿಗಳು ಬರ್ತಾರೆ, ಹಾಲಿ ಶಾಸಕರ ಮಾಹಿತಿ ನನಗೆ ಇಲ್ಲ. …

Read More »