Breaking News

ಮಾತುಕತೆಗೆ‌ ಕರೆಸಿ ಯುವಕನನ್ನು‌ ಚಾಕುವಿನಿಂದ ಇರಿದು ಕೊಲೆ‌ಗೈದ ಘಟನೆ…

ಶಿವಮೊಗ್ಗ : ಭಾನುವಾರ ನಡೆದಿದ್ದ ಗಲಾಟೆ ಸಂಬಂಧ ಇಂದು (ಸೋಮವಾರ) ಮಾತುಕತೆಗೆ‌ ಕರೆಸಿ ಯುವಕನನ್ನು‌ ಚಾಕುವಿನಿಂದ ಇರಿದು ಕೊಲೆ‌ಗೈದ ಘಟನೆ ಶಿಕಾರಿಪುರ ಪಟ್ಟಣದ ಕೆಹೆಚ್​ಬಿ ಕಾಲೋನಿಯ ಬಳಿ ನಡೆದಿದೆ. ಮೃತನನ್ನು ಶಿಕಾರಿಪುರದ ಜನ್ನತ್ ಗಲ್ಲಿಯ ನಿವಾಸಿ ಮಹಮ್ಮದ್ ಜಾಫರ್(32) ಎಂದು ಗುರುತಿಸಲಾಗಿದೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಭಾನುವಾರ ಶಿಕಾರಿಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಮಾತುಕತೆ ನಡೆಸಲು ಮತ್ತೆ ಶಿಕಾರಿಪುರದ ಕೆಹೆಚ್​ಬಿ ಕಾಲೋನಿಯ ಸಮೀಪ ಎರಡು ಗುಂಪುಗಳು ಸೇರಿವೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ‌ಮಿಲಾಯಿಸುವ ಹಂತ ತಲುಪಿದೆ. ಎದುರಾಳಿ ಗುಂಪಿನ ವ್ಯಕ್ತಿಯೊಬ್ಬ ಮಹಮ್ಮದ್ ಜಾಫರ್‌ನನ್ನು ಹಿಂದಿನಿಂದ ಬಲವಾಗಿ ಹಿಡಿದುಕೊಂಡಿದ್ದಾನೆ. ಇನ್ನೋರ್ವ ಹೊಟ್ಟೆಗೆ ಚಾಕು ಇರಿದಿದ್ದಾನೆ.

ಜಾಫರ್ ರಕ್ತದ ಮಡುವಿನಲ್ಲಿ‌ ಬಿದ್ದಿದ್ದು, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಶಿಕಾರಿಪುರ ಪುರಸಭೆ ಸದಸ್ಯ ರೋಷನ್ ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಜನರ ಮೇಲೆ ದೂರು ದಾಖಲಿಸಿದ್ದಾರೆ. ಕೊಲೆಗೈದ ಇಬ್ಬರು ಆರೋಪಿಗಳು ಶಿವಮೊಗ್ಗ ನಿವಾಸಿಗಳೆಂದು ತಿಳಿದು ಬಂದಿದೆ. ಆರೋಪಿಗಳು ಗಾಂಜಾದ ಅಮಲಿನಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *