Breaking News

ಹಾವೇರಿಗೆ ಬರಲು ಹಾಂಸಿ, ಶಾಕಾರ ಗ್ರಾಮದ ಜನರ ಪರದಾಟ….

ಹಾವೇರಿ: ತಾಲೂಕಿನ ಹಾಂಸಿ, ಶಾಕಾರ ಗ್ರಾಮಗಳನ್ನು ತುಂಗಭದ್ರಾ ನದಿ ಹಾವೇರಿ ಜಿಲ್ಲೆಯಿಂದ ಪ್ರತ್ಯೇಕಿಸುತ್ತದೆ. ಇದರಿಂದಾಗಿ ಗ್ರಾಮಸ್ಥರು ತಮ್ಮ ನಿತ್ಯ ಕೆಲಸ ಕಾರ್ಯಕ್ಕಾಗಿ ಹಾವೇರಿ ತಾಲೂಕು ಕೇಂದ್ರ ಹಾಗೂ ಸಮೀಪದ ಗ್ರಾಮಗಳನ್ನು ಅವಲಂಬಿಸಿದ್ದಾರೆ. ಇದೇ ಕಾರಣದಿಂದ ಸಂಚರಿಸಲು ಬ್ರಿಡ್ಜ್ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ತೆಪ್ಪ ಅಥವಾ ದೋಣಿಗಳ ಸಹಾಯದಿಂದಲೇ ತುಂಗಭದ್ರಾ ನದಿ ದಾಟಿಯೇ ಹಾವೇರಿಗೆ ಬರಬೇಕಾದ ಪರಿಸ್ಥಿತಿ ಇದೆ. ಇದಲ್ಲದೇ ಇದ್ದರೆ 40 ಕಿ.ಮೀ ದೂರ ಕ್ರಮಿಸಿ ಹಾವೇರಿಯ ಗುತ್ತಲ, ಹಾವನೂರು ಗ್ರಾಮಕ್ಕೆ ಬರಬೇಕಾಗುತ್ತದೆ.
ಹಲವಾರು ವರ್ಷಗಳಿಂದ ಸಂಚಾರಕ್ಕೆ ಸೇತುವೆ ನಿರ್ಮಾಣ ಮಾಡಿ ಕೊಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾರೂ ನಮ್ಮ ಗೋಳು ಕೇಳುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು. ವಿಜಯನಗರ ಜಿಲ್ಲೆಯ ಗಡಿ ಹಂಚಿಕೊಂಡಿರುವ ಹಾಂಸಿ, ಶಾಕಾರ ಗ್ರಾಮಗಳು ಬ್ರಿಟಿಷರ ಕಾಲದಿಂದಲೂ ಹಾವೇರಿ ಜಿಲ್ಲಾಡಳಿತಕ್ಕೆ ಒಳಪಟ್ಟಿವೆ. ಈ ಎರಡೂ ಗ್ರಾಮಗಳು ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ.

ಶಾಕಾರ ಗ್ರಾಮದಿಂದ ಕೂಗಳತೆ ದೂರದಲ್ಲಿ ಹಾವೇರಿಯ ದೊಡ್ಡ ಗ್ರಾಮಗಳಲ್ಲಿ ಒಂದಾದ ಹಾವನೂರು ಕೂಡ ಇದೆ. ಈ ಗ್ರಾಮಕ್ಕೆ ಶಾಕಾರ ಗ್ರಾಮದಿಂದ ತುಂಗಭದ್ರಾ ಮೇಲೆ ಹೋದರೆ ಸ್ವಲ್ಪವೇ ದೂರವಿದೆ. ಈ ದೂರವನ್ನು ಇಲ್ಲಿಯ ಗ್ರಾಮಸ್ಥರು ತೆಪ್ಪದಲ್ಲಿ ದಾಟುತ್ತಾರೆ. ತೆಪ್ಪ ಬಿಟ್ಟರೆ, ದೋಣಿಗಳ ಸಹಾಯದಿಂದಲೇ ಇವರೆಲ್ಲ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಬೇಸಿಗೆ ಕಾಲದಲ್ಲಿ ತುಂಗಭದ್ರಾ ಒಡಲು ಬರಿದಾಗಿದ್ದರೆ ಹಾಂಸಿ, ಶಾಕಾರ ಗ್ರಾಮಸ್ಥರು ಹಾವನೂರು ಗ್ರಾಮಕ್ಕೆ ನಡೆದು ಇಲ್ಲವೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾರೆ. ಮಳೆಗಾಲದಲ್ಲಿ ನದಿ ಮೈದುಂಬಿದರೆ ದೋಣಿಯ ಸಹಾಯದಿಂದ ಸಂಚರಿಸಬೇಕು. ತೆಪ್ಪದ ಸಂಪರ್ಕ ಬಿಟ್ಟರೆ ಈ ಗ್ರಾಮಗಳು ಹಾವೇರಿ ಜಿಲ್ಲೆಯನ್ನು ಸಂಪರ್ಕಿಸಲು ಸುಮಾರು 40 ಕಿ.ಮೀಟರ್ ದೂರದ ಪಯಣವನ್ನು ಮಾಡಬೇಕಾಗಿದೆ.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *