Breaking News

ಜಿಲ್ಲೆ

ಜೆಡಿಎಸ್‌ ಪಕ್ಷ ಪಂಚರತ್ನ ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ತಿಳಿಸಲಿದೆ : ಕುಮಾರಸ್ವಾಮಿ

ಮೈಸೂರು: ದೇಶದಲ್ಲೇ ಒಂದು ಚುನಾಯಿತ ಸರಕಾರ ಯಾವ ರೀತಿ ಕಾರ್ಯಕ್ರಮಗಳನ್ನು ಕೊಡಬಹುದು ಎಂಬುದನ್ನು ಜೆಡಿಎಸ್‌ ಪಕ್ಷ ಪಂಚರತ್ನ ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ತಿಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಜೆಡಿಎಸ್ ಸಮಾಲೋಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಪಂಚರತ್ನ ರಥಯಾತ್ರೆಯ ಸಿಡಿ ಬಿಡುಗಡೆ ಮಾಡಿದರು. ‘ಉಚಿತ ಶಿಕ್ಷಣ, ಉಚಿತ ಆರೋಗ್ಯ, ಪ್ರತಿ ಕುಟುಂಬಕ್ಕೆ ಉದ್ಯೋಗ, ವಸತಿ ಸೌಲಭ್ಯವನ್ನು …

Read More »

ನಾನು ನನ್ನ ಜೀವನದಲ್ಲಿ ಹಲಾಲ್ ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನೋದಿಲ್ಲ ; ಈಶ್ವರಪ್ಪ

ಶಿವಮೊಗ್ಗ : ರಾಜ್ಯದಲ್ಲಿ ಮತ್ತೆ ಧರ್ಮದ ದಂಗಲ್ ಶುರುವಾಗಿದ್ದು, ಹಲಾಲ್ ಮುಕ್ತ ದೀಪಾವಳಿಗೆ ಹಿಂದೂಪರ ಸಂಘಟನೆಗಳು ಕರೆಕೊಟ್ಟಿವೆ. ಈ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಜೀವನದಲ್ಲಿ ಹಲಾಲ್ ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನೋದಿಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನನಗೆ ಹಲಾಲ್ ಕಟ್ಟೋ, ಹಲ್ಕ ಕಟ್ಟೋ ಗೊತ್ತಿಲ್ಲ. ನಾವು ಏಕೆ ನಮ್ಮ ದೇವರಿಗೆ ಹಲಾಲ್ ಕಟ್ ಮಾಂಸ ಎಡೆ ಇಡೋಣ …

Read More »

ಮಂಡ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಜಮೀರ್ ಅಹ್ಮದ್ ಖಾನ್ 5 ಲಕ್ಷ ರೂ. ಪರಿಹಾರ ಧನ ವಿತರಣೆ

ಮಂಡ್ಯ: ಕಾಮುಕ ಟ್ಯೂಶನ್ ಶಿಕ್ಷಕನಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮಳವಳ್ಳಿ ಪಟ್ಟಣದ ಬಾಲಕಿ ನಿವಾಸಕ್ಕೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಬಾಲಕಿ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮೃತ ಬಾಲಕಿ ಕುಟುಂಬಕ್ಕೆ ಶಾಸಕ ಜಮೀರ್ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಬಳಿಕ ಮಾತನಾಡಿದ …

Read More »

ವರುಣನ ಆರ್ಭಟಕ್ಕೆ ಅರಮನೆ ಗೊಡೆ ಕುಸಿತ

ಮೈಸೂರು: ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆಯ ರಕ್ಷಣಾ ಗೋಡೆ ಏಕಾಏಕಿ ಕುಸಿದಿದೆ. ಇದು ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಸರಿಯಾದ ನಿರ್ವಹಣೆ ಇಲ್ಲದೆ ಐತಿಹಾಸಿಕ ಹಿನ್ನೆಲೆಯುಳ್ಳ ವಿಶ್ವ ಪ್ರಸಿದ್ಧ ಅಂಬಾವಿಲಾಸ ಅರಮನೆಯ ಕೋಟೆ, ಮಾರಮ್ಮ ದೇವಾಲಯ ಹಾಗೂ ಜಯ ಮಾರ್ತಾಂಡ ದ್ವಾರದ ನಡುವೆ ಇರುವ ಕೋಟೆಯ ಗೋಡೆ ಕುಸಿದಿದೆ. ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ಅರಮನೆಗೆ ಮೈಸೂರು ಅರಸರು ಈ ಕೋಟೆಯನ್ನು …

Read More »

ಕಾಲುಬಾಯಿ ರೋಗಕ್ಕೆ 100 ಜಾನುವಾರುಗಳಿಗೆ ಲಸಿಕೆಮಂ

ಮಂಡ್ಯ: ತಾಲ್ಲೂಕಿನ ಶಿವಾರ ಗ್ರಾಮದಲ್ಲಿ ವಿ.ಸಿ.ಫಾರಂನ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಶಿಬಿರದಲ್ಲಿ ಪಾಲ್ಗೊಂಡು ಜಾನುವಾರುಗಳಿಗೆ ಲಸಿಕೆ ಹಾಕಿ, ರೈತರಲ್ಲಿ ಜಾಗೃತಿ ಮೂಡಿಸಿದರು. ಶಿಬಿರದಲ್ಲಿ ಕೃಷಿ ಡೀನ್ ಡಾ.ಎಸ್.ಎಸ್.ಪ್ರಕಾಶ್, ಶಿಬಿರದ ಸಂಯೋಜಕ ಡಾ.ವಿ.ಡಿ.ರಂಗನಾಥ್ ಅವರ ಮಾರ್ಗದರ್ಶನದಲ್ಲಿ ಪಶು ವೈದ್ಯ ಡಾ.ವಿ.ಎಸ್.ಲೋಕೇಶ್ ಬಾಬು, ತೋಟಗಾರಿಕೆ ವಿಭಾಗದ ವೆಂಕಟೇಶ್, ಸಹ ಸಂಯೋಜಕರಾದ ಅನುಷ ಕಾರ್ಯಕ್ರಮಕ್ಕೆ ಚಾಲನೆ ನೀಡದರು. ಶಿಬಿರದಲ್ಲಿ ಸುವಾರು 100 ಜಾನುವಾರುಗಳಿಗೆ ಚುಚ್ಚುಮದ್ದು ನೀಡಲಾಯಿತು. ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ರೈತರಿಗೆ …

Read More »

ಪವರ್ ಸ್ಟಾರ್ ಅಭಿಮಾನಿಗಳಿಂದ ರಾಕೇಶ್ ಪಾಪಣ್ಣ ಅವರ ಮನೆ ಮುಂದೆ ಪ್ರತಿಭಟನೆ

ಮೈಸೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅಪಮಾನ ಮಾಡಿರುವ ಹಿನ್ನೆಲೆ. ನಾನು ಖಂಡಿಸಿ ರಾಕೇಶ್ ಪಾಪಣ್ಣ ಅವರ ಮೈಸೂರಿನ ಮನೆ ಮುಂದೆ ಅಪ್ಪು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಕೇಶ್ ಪಾಪಣ್ಣ ಅವರ ಸಂಬಂಧಿ ಪುಟ್ಟ ಎಂಬಾತನಿಂದ ನಿಂದನೆ ಮಾಡಲಾಗಿದ್ದು ಕೂಡಲೇ ಆತನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

Read More »

ಬಸನಗೌಡ ಪಾಟೀಲ ಯತ್ನಾಳ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅರುಣ್‌ಸಿಂಗ್

‌ಹಾವೇರಿ: ‘ಕೆಲವರು ಹೀಗೂ ಇರುತ್ತಾರೆ, ಮಾತಾಡೋದೇ ಅವರ ಕೆಲಸ. ಇದು ಅವರ ಹವ್ಯಾಸ. ಪಕ್ಷದಿಂದ ಈಗಾಗಲೇ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ನೋಟಿಸ್ ಜಾರಿಯಾಗಿದೆ. ಆದ್ರೆ ಕಲಿಯುವುದಿಲ್ಲ, ತಿಳಿದುಕೊಳ್ಳಲ್ಲ ಅಂದ್ರೆ ಏನು ಮಾಡೋದು? ಬಿಜೆಪಿ ಕಾರ್ಯಕರ್ತರು ಇದನ್ನ ಇಷ್ಟಪಡಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರನ್ನ ಎಲ್ಲ ಪಕ್ಷಗಳು ಗೌರವಿಸುತ್ತವೆ. ಬಿಜೆಪಿ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಇದು ಅವರಿಗೆ ಕಾಣುತ್ತಿಲ್ವಾ? ನಮ್ಮ …

Read More »

ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿ

ಶಿರಸಿ: ವಿಧಾನಸಭೆ ಅಧಿವೇಶನಕ್ಕೆ ಗೈರು ಹಾಜರಾದ ಹಿನ್ನಲೆಯಲ್ಲಿ ಶಾಸಕರಾದ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸೂಕ್ತ ಕಾರಣ ನೀಡದೆ, ಅನುಮತಿ ಪಡೆಯದೆ ಅಧಿವೇಶನಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿರುವುದಾಗಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಸಚಿವರು, ಶಾಸಕರು ಲಿಖಿತವಾಗಿ ಅಥವಾ ಮೌಖಿಕವಾಗಿ ಸೂಕ್ತ ಕಾರಣ ನೀಡುತ್ತಾರೆ. ಆದರೆ, ರಮೇಶ್ …

Read More »

ಮುರುಘಾ ಶ್ರೀ ಮತ್ತೊಂದು ಮುಖವಾಡ ಬಯಲು

ಮೈಸೂರು : ಮುರುಘಾ ಶ್ರೀ ಮತ್ತೊಂದು ಮುಖವಾಡ ಬಟಾಬಯಲಾಗಿದ್ದು, FIRನಲ್ಲಿ ಆಘಾತಕಾರಿ ಅಂಶಗಳು ದಾಖಲಾಗಿದೆ. ಅಪ್ರಾಪ್ತ ಬಾಲಕಿಯರೇ ಮುರುಘಾ ಶ್ರೀ ಟಾರ್ಗೆಟ್​ ಆಗಿದ್ದು, ಋತುಮತಿ ಆಗದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಋತುಮತಿ ಆಗುವ ತನಕ ನಿರಂತರ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ಬಾಲಕಿಯರನ್ನ ಒತ್ತಾಯಪೂರ್ವಕವಾಗಿ ಶ್ರೀಗಳ ಕೊಠಡಿಗೆ ಕಳುಹಿಸಲಾಗ್ತಿತ್ತು.ಅದಲ್ಲದೇ, ಮಕ್ಕಳು ಶರಣರ ಕೊಠಡಿಗೆ ಹೋಗದಿದ್ರೆ ಹೆದರಿಸಿ ಕಳುಹಿಸುತ್ತಿದ್ದರು. ಅದಲ್ಲದೇ, ಬರೋಬ್ಬರಿ 7 ಮಂದಿಗೆ ಪೋಕ್ಸೊ ಉರುಳು ಸುತ್ತಿಕೊಂಡಿದ್ದು, …

Read More »

ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸಕ್ಕೆ ಹಾಜರಾದ ಪ್ರವೀಣ್‌ ನೆಟ್ಟಾರು ಅವರ ಪತ್ನಿ

ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರ ಆದೇಶದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ದಿ| ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರು  ಜಿಲ್ಲಾಧಿಕಾರಿ ಕಚೇರಿಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು ನೇಮಕಾತಿ ಆದೇಶ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿದರು. ಸಿಎಂ ಕಚೇರಿಯ ಆದೇಶ ಪ್ರಕಾರ ನೂತನ ಕುಮಾರಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯ ಸಿಎಂ ಪರಿಹಾರ ನಿಧಿ ವಿಭಾಗದಲ್ಲಿ …

Read More »