ಮೈಸೂರು : ಮುರುಘಾ ಶ್ರೀ ಮತ್ತೊಂದು ಮುಖವಾಡ ಬಟಾಬಯಲಾಗಿದ್ದು, FIRನಲ್ಲಿ ಆಘಾತಕಾರಿ ಅಂಶಗಳು ದಾಖಲಾಗಿದೆ.
ಅಪ್ರಾಪ್ತ ಬಾಲಕಿಯರೇ ಮುರುಘಾ ಶ್ರೀ ಟಾರ್ಗೆಟ್ ಆಗಿದ್ದು, ಋತುಮತಿ ಆಗದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಋತುಮತಿ ಆಗುವ ತನಕ ನಿರಂತರ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ಬಾಲಕಿಯರನ್ನ ಒತ್ತಾಯಪೂರ್ವಕವಾಗಿ ಶ್ರೀಗಳ ಕೊಠಡಿಗೆ ಕಳುಹಿಸಲಾಗ್ತಿತ್ತು.ಅದಲ್ಲದೇ, ಮಕ್ಕಳು ಶರಣರ ಕೊಠಡಿಗೆ ಹೋಗದಿದ್ರೆ ಹೆದರಿಸಿ ಕಳುಹಿಸುತ್ತಿದ್ದರು.
ಅದಲ್ಲದೇ, ಬರೋಬ್ಬರಿ 7 ಮಂದಿಗೆ ಪೋಕ್ಸೊ ಉರುಳು ಸುತ್ತಿಕೊಂಡಿದ್ದು, ಆರೋಪಿ-1 ಮುರುಘಾ ಶೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಆರೋಪಿ-2 ವಾರ್ಡನ್ ರಶ್ಮಿ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-3 ಬಸವಾದಿತ್ಯಾ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-4 ಪರಮಶಿವಯ್ಯ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-5 ಗಂಗಾಧರಯ್ಯ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-6 ಮಹಾಲಿಂಗ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-7 ಕರಿಬಸಪ್ಪ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

