Breaking News

ಜಿಲ್ಲೆ

ಕೋರ್ಟ್‌ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಪತಿ

ಹಾಸನ :  ಜಿಲ್ಲೆಯಲ್ಲಿ ಪತ್ನಿ ಜೀವನಾಂಶ ಕೋರಿ ಕೋರ್ಟ್‌ ಮೊರೆ ಹೋಗಿದ್ದಕ್ಕೆ ಆಕ್ರೋಶ ಪತಿ ಕೋರ್ಟ್‌ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಹಾಕಿದ ಘೋರ ದುರಂತ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಚೈತ್ರ ಕೋರ್ಟ್‌ ಆವರಣದ ಶೌಚಾಯಲಕ್ಕೆ ತೆರಳಿದ ವೇಳೆ ಹೊಂಚು ಹಾಕಿ ಕೂತ್ತಿದ್ದ ಪತಿ ಶಿವಕುಮಾರ್‌ ಚೈತ್ರಾಳ ಕತ್ತುಕೊಯ್ದು ಕೃತ್ಯವೆಸಗಿದ್ದಾನೆ. ಸಾವು ಬದುಕಿನ ಹೋರಾಡುತ್ತಿರುವ ಗಾಯಾಳು ಚೈತ್ರಳನ್ನು ಹೊಳೆನರಸೀಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆನರಸೀಪುರ ಟೌನ್‌ಪೊಲೀಸ್‌ ಠಾಣಾ …

Read More »

ಮೈಸೂರು ದಸರಾ : ರಾಜಬೀದಿಗಳಲ್ಲಿ ದಸರಾ ಗಜಪಡೆಗಳಿಗೆ ತಾಲೀಮುಕರ್

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಹಿನ್ನೆಲೆ ಇಂದಿನಿಂದ ರಾಜಬೀದಿಗಳಲ್ಲಿ ದಸರಾ ಗಜಪಡೆಗಳಿಗೆ ತಾಲೀಮು ನಡೆಯಲಿದೆ. ಮೈಸೂರು ಅರಮನೆ ಆವರಣದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪೂಜೆ ನಡೆಸಲಾಗುತ್ತದೆ. ಅರ್ಜುನ, ಗೋಪಾಲಸ್ವಾಮಿ, ಭೀಮ, ಧನುಂಜಯ, ಕಾವೇರಿ, ಚೈತ್ರ, ಲಕ್ಷ್ಮೀ, ಮಹೇಂದ್ರ ಆನೆಗೆ ಸಾಂಪ್ರಾದಾಯಿಕ ಪೂಜೆ ನಡೆಸಿದರು. ಕುಂಬಳಕಾಯಿ ಒಡೆದು ಆನೆಗಳಿಗೆ ದೃಷ್ಠಿ ತೆಗೆಯಲಾಗಿದೆ. ಡಿಸಿಎಫ್‌ ಕರಿಕಾಳನ್‌ ಸೇರಿದಂತೆ ಹಲವರು ಉಪಸ್ಥಿತಿಯಿದ್ದರು.

Read More »

ಗೃಹ ಸಚಿವರು ಕೂಡಲೇ ರಾಜಿನಾಮೆ ನಿಡುವಂತೆ ಆಗ್ರಹ..!

ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಾದ ಪ್ರವೀಣ ನೇಟ್ಟಾರು ಅವರ ಹತ್ಯೆ ಖಂಡಿಸಿ ತಕ್ಷಣದಲ್ಲಿ ಗೃಹ ಸಚಿವರು ರಾಜಿನಾಮೆ ನೀಡುವಂತೆ ಹಿಂದೂಸ್ತಾನ ಜನತಾ ಪಾರ್ಟಿಯ ರಾಜ್ಯಾದ್ಯಕ್ಷರಾದ ವಿನಾಯಕ ಮಾಳದಕರ ಒತ್ತಾಯಿಸಿದ್ರು. ಹಿಂದುತ್ವ ಅಜೇಂಡಾ ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನೆಡೆಸುತ್ತಿರುವ ಬಿಜೆಪಿ ಸರ್ಕಾರವು ಕಾನೂನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಕೇರಳದ ಮುಸ್ಲಿಂ ಸಂಘಟನೆಗಳಾದ PFI,SDPI,MIM ಸಂಘಟನೆಗಳ ಕಾರ್ಯಕರ್ತರಿಂದ ಕರ್ನಾಟಕ ರಾಜ್ಯದಲ್ಲಿ 30 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದರೂ,ಕೂಡ …

Read More »

ಹೆತ್ತ ಮಗಳನ್ನೇ ಕೊಂದ ಪಾಪಿ ತಂದೆ : ಯುವತಿಯ ವಾಯ್ಸ್‌ ರಿಕಾರ್ಡ್ ಪತ್ತೆ

ಮೈಸೂರು : ಅನ್ಯ ಕೋಮಿನ ಯುವಕನನ್ನು ಪ್ರೀತಿ ಮಾಡಿದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಅಪ್ರಾಪ್ತ ಮಗಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪ್ರಿಯಕರನಿಗೆ ಬರೆದ ಪತ್ರ ಹಾಗೂ ಆತನ ಮೊಬೈಲ್​​​ ವಶಪಡಿಸಿಕೊಂಡು ಆತನನ್ನು ವಿಚಾರಣೆ ನಡೆಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಶಾಲಿನಿ ಎಂಬ ಅಪ್ರಾಪ್ತೆ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವತಿಯ ತಂದೆ ಮಗಳನ್ನೇ ಕೊಲೆ ಮಾಡಿದ್ದ ಎಂಬ …

Read More »

ರೈಲಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಪೊಲೀಸ್!

ಗದಗ: ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಆಯಾ ತಪ್ಪಿ ರೈಲಿನಡಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಮಹಿಳೆಯೊಬ್ಬಳನ್ನು ಸ್ಥಳದಲ್ಲಿಯೇ ಇದ್ದ ರೈಲ್ವೇ ಪೊಲೀಸ್ ಸಿಬ್ಬಂದಿಯೊಬ್ಬರು ರಕ್ಷಣೆ ಮಾಡಿ ಸಮಯ ಪ್ರಜ್ಣೆ ಮೆರೆದ ಘಟನೆ ಗದಗ ರೈಲ್ವೆ ಜಂಕ್ಷನ್​ನಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಾಯಿರಾ ಎಂಬ ಮಹಿಳೆ ತಮ್ಮ ಕುಟುಂಬ ಸಮೇತರಾಗಿ ಹುಬ್ಬಳ್ಳಿ ವಿಜಯಪುರ ಪ್ಯಾಸೆಂಜರ್ ರೈಲಿನ ಮೂಲಕ ಗದಗ ಮಾರ್ಗವಾಗಿ ವಿಜಯಪುರ, ಸೊಲ್ಲಾಪುರಕ್ಕೆ ಹೊರಟಿದ್ರು. ಗದದ ರೈಲು ನಿಲ್ದಾಣದಲ್ಲಿ …

Read More »

ನಾಡಗೀತೆ ಮೊಟಕುಗೊಳಿಸುವ ನಿರ್ಧಾರ : ವಿ.ಸುನಿಲ್
ಕುಮಾರ್

ಬೀದರ್ : ನಾಡಗೀತೆ ಮೊಟಕುಗೊಳಿಸುವ ಕುರಿತಂತೆ ರಾಜ್ಯ ಸರ್ಕಾರ ಒಂದು ವಾರದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ಕುಮಾರ್ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ವಿ.ಸುನಿಲ್ ಕುಮಾರ್, ನಾಡಗೀತಿಯ ಧಾಟಿ ಹಾಗೂ ಮೊಟಕುಗೊಳಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಕುರಿತ ಗೊಂದಲಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Read More »

ಪಿಎಸ್‌ಐ ನೇಮಕಾತಿ ಅಕ್ರಮ : ದರ್ಶನ್ ಗೌಡ ಬಂಧನ..

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೌಡ ರಾಮನಗರ ಜಿಲ್ಲೆಯ ಮಾಗಡಿ ಮೂಲದ ನಿವಾಸಿ. ದರ್ಶನ್ ಗೌಡ ಪ್ರಕರಣದಲ್ಲಿ ಸಚಿವ ಅಶ್ವತ್ಥನಾರಾಯಣ ಹೆಸರು ಬಾಯ್ಬಿಟ್ಟಿದ್ದ ಎಂದು ಹೇಳಲಾಗಿತ್ತು. ನಿನ್ನೆ ವಿಚಾರಣೆಗಾಗಿ ಸಿಐಡಿ ಪೊಲೀಸರು ದರ್ಶನ್ ಗೌಡನನ್ನು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಬಂಧಿಸಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ದರ್ಶನ್ ಗೌಡ ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದ. ಪರೀಕ್ಷೆ ಬಳಿಕ …

Read More »

ಖರ್ಗೆಗೆ ನಾಯಕತ್ವ ಕೊಟ್ಟರೆ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವ ಚಿಂತನೆ : ಕುಮಾರಸ್ವಾಮಿ

ಬೆಳಗಾವಿ: ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ನಾಯಕತ್ವ ಕೊಟ್ಟರೆ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವ ಬಗ್ಗೆ ಯೋಚಿಸಲಾಗುವುದು ಎಂದು ಎಚ್‌. ಡಿ. ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಖರ್ಗೆ ಹಿರಿಯ ನಾಯಕರು. ಆ ಪಕ್ಷಕ್ಕೆ ನಿಷ್ಠೆ ಯಿಂದ ಕೆಲಸ ಮಾಡಿದ್ದಾರೆ. ಹಲವು ಬಾರಿ ಅವರಿಗೆ ಅನ್ಯಾಯ ಆಗಿದ್ದರೂ ನಿಷ್ಠೆಯಿಂದ ನಡೆದುಕೊಂಡಿದ್ದಾರೆ ಎಂದರು. ಪ್ರವಾಹದಲ್ಲಿ ಮನೆ ಬಿದ್ದವರಿಗೆ ಇನ್ನೂ ಮನೆ ನಿರ್ಮಿಸಿ ಕೊಟ್ಟಿಲ್ಲ. ಕೊಡಗು, ಚಿಕ್ಕಮಗಳೂರಿನಲ್ಲಿ ಮನೆ ಕಟ್ಟಲಿಲ್ಲ. …

Read More »

ನಾಡಗೀತೆ ಅವಮಾನ ಹಿನ್ನೆಲೆ ಜೂನ್‌ 2ರಂದು ಮೈಸೂರುನಲ್ಲಿ ಪ್ರತಿಭಟನೆ

ಮೈಸೂರು: ‘ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಗೆ ಅಪಮಾನ ಮಾಡಿರುವ ಹಾಗೂ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರು ನಡೆಸಿದ ಹಲ್ಲೆ ಪ್ರಕರಣವನ್ನು ಖಂಡಿಸಿ ಜೂನ್‌ 2ರಂದು ಬೆಳಿಗ್ಗೆ 11 ಗಂಟೆಗೆ ನಗರದ ಗಾಂಧಿ ಚೌಕದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ತಿಳಿಸಿದರು. ‘ನಾಡಗೀತೆಯನ್ನು ತಿರುಚಿ ಬರೆದಿರುವುದು ಹಾಗೂ ಮಹಾಕವಿಯನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ. ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವ ಮರಾಠಿ ಪುಂಡರನ್ನು …

Read More »

ಎಡ ಮತ್ತು ಬಲಪಂಥೀಯ ಸಿದ್ಧಾಂತಗಳ ಬೋಧನೆಗೆ ಅವಕಾಶ ಇರಬಾರದು : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು : ‘ಇತಿಹಾಸವನ್ನು ತಿದ್ದದೇ ಅದು ಇರುವಂತೆಯೇ ಮಕ್ಕಳಿಗೆ ಬೋಧಿಸಬೇಕು.ಅಲ್ಲಿ ಎಡ ಮತ್ತು ಬಲಪಂಥೀಯ ಸಿದ್ಧಾಂತಗಳ ಬೋಧನೆಗೆ ಅವಕಾಶ ಇರಬಾರದು’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ‘ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯವನ್ನು ಅಳವಡಿಸಬೇಕು’ ಎಂದರು.’ಪಾರಂಪರಿಕ ಕಟ್ಟಡಗಳ ಉಳಿವು ಎಂದರೆ ನೆಲಸಮ ಮಾಡಿ ಮರು ನಿರ್ಮಿಸುವುದಲ್ಲ. ಕಟ್ಟಡಗಳ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನಶ್ಚೇತನಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು …

Read More »