Breaking News

ಹೆತ್ತ ಮಗಳನ್ನೇ ಕೊಂದ ಪಾಪಿ ತಂದೆ : ಯುವತಿಯ ವಾಯ್ಸ್‌ ರಿಕಾರ್ಡ್ ಪತ್ತೆ


ಮೈಸೂರು : ಅನ್ಯ ಕೋಮಿನ ಯುವಕನನ್ನು ಪ್ರೀತಿ ಮಾಡಿದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಅಪ್ರಾಪ್ತ ಮಗಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪ್ರಿಯಕರನಿಗೆ ಬರೆದ ಪತ್ರ ಹಾಗೂ ಆತನ ಮೊಬೈಲ್​​​ ವಶಪಡಿಸಿಕೊಂಡು ಆತನನ್ನು ವಿಚಾರಣೆ ನಡೆಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಶಾಲಿನಿ ಎಂಬ ಅಪ್ರಾಪ್ತೆ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವತಿಯ ತಂದೆ ಮಗಳನ್ನೇ ಕೊಲೆ ಮಾಡಿದ್ದ ಎಂಬ ಪ್ರಕರಣ, ಕಳೆದ ಮೂರು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಕೊಲೆಯಾದ ಪುತ್ರಿಯ ತಂದೆ ಸುರೇಶನನ್ನು ಪೊಲೀಸರು ತನಿಖೆಗೊಳಪಡಿಸಿದ್ದು, ಸ್ಥಳ ಮಹಜರು ಹಾಗೂ ಇತರ ಆಯಾಮಗಳಿಂದಲೂ ತನಿಖೆ ತೀವ್ರಗೊಳಿಸಿದ್ದಾರೆ.ಈ ಮಧ್ಯೆ ಸಾವಿಗೂ ಮುನ್ನ ಬಾಲಕಿ ತನಗೆ ಜೀವ ಭಯ ಇದೆ ಎಂಬ ವಿಷಯಗಳನ್ನೊಳಗೊಂಡ ಮೂರು ಪುಟದ ಪತ್ರವನ್ನು ಬರೆದು ಪ್ರಿಯಕರನಿಗೆ ನೀಡಿದ್ದಳು. ಇದರ ಜೊತೆಗೆ ಆತನೊಂದಿಗೆ ಮಾತನಾಡಿದ ಮೊಬೈಲ್ ವಾಯ್ಸ್ ರೆಕಾರ್ಡ್ ಸಹ ಪ್ರಿಯಕರನ ಬಳಿ ಇದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *