ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಾದ ಪ್ರವೀಣ ನೇಟ್ಟಾರು ಅವರ ಹತ್ಯೆ ಖಂಡಿಸಿ ತಕ್ಷಣದಲ್ಲಿ ಗೃಹ ಸಚಿವರು ರಾಜಿನಾಮೆ ನೀಡುವಂತೆ ಹಿಂದೂಸ್ತಾನ ಜನತಾ ಪಾರ್ಟಿಯ ರಾಜ್ಯಾದ್ಯಕ್ಷರಾದ ವಿನಾಯಕ ಮಾಳದಕರ ಒತ್ತಾಯಿಸಿದ್ರು.
ಹಿಂದುತ್ವ ಅಜೇಂಡಾ ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನೆಡೆಸುತ್ತಿರುವ ಬಿಜೆಪಿ ಸರ್ಕಾರವು ಕಾನೂನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಕೇರಳದ ಮುಸ್ಲಿಂ ಸಂಘಟನೆಗಳಾದ PFI,SDPI,MIM ಸಂಘಟನೆಗಳ ಕಾರ್ಯಕರ್ತರಿಂದ ಕರ್ನಾಟಕ ರಾಜ್ಯದಲ್ಲಿ 30 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದರೂ,ಕೂಡ ಮುಸ್ಲಿಂ ಸಂಘಟನೆಯ ವಿರುದ್ಧ ಮೃದು ಧೋರಣೆ ತೋರಿದ್ದು ಖಂಡನೀಯ. ಚಿಕ್ಕಮಂಗಳೂರಿನ ಹರ್ಷ ಈಗ ದಕ್ಷಿಣ ಕನ್ನಡ ಜಿಲ್ಲೆ ಪ್ರವೀಣ, ಮುಂದೆ ಆಗುವ ಅನಾಹುತವನ್ನು ತಡೆಯುವಗೊಸ್ಕರ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಕಾನೂನು ವೈಫಲ್ಯದ ಜವಾಬ್ದಾರಿಯನ್ನು ಹೊತ್ತು ತಕ್ಷಣದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟ ನೆಡೆಸುವುದಾಗಿ ಎಚ್ಚರಿಕೆ ನೀಡಿದರು..
bigtvnews | Hubli Dharwad News | Kannada News | Karnataka News Hubli News | News In Hubli | Local news

