Breaking News

ಜಿಲ್ಲೆ

ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವು

ಮಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮಂಗಳೂರು ನಗರದ ಉರ್ವಾದ ನಿವಾಸಿ ರಾಜೇಶ್ (30) ಮೃತ ವ್ಯಕ್ತಿ. ನಗರದ ಜ್ಯೋತಿ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿಯ ಕಬ್ಬಿಣದ ಸರಳು ಕದ್ದೊಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಗಳ ಪೈಕಿ ರಾಜೇಶ್​ಗೆ ರಾತ್ರಿ ವೇಳೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆತನನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರಿಂದ ರಾಜೇಶ್ …

Read More »

ಮಾಜಿ ಶಾಸಕ ಜಿ.ವಿ.ಮಂಟೂರ ನಿಧನನಾ

ಬಾಗಲಕೋಟೆ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಗಲಕೋಟೆಯ ಮಾಜಿ ಶಾಸಕ ಜಿ.ವಿ.ಮಂಟೂರ (92) ಗುರುವಾರ  ಬೆಳಗ್ಗೆ 5.30ಕ್ಕೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಾಗಲಕೋಟೆ ತಾಲೂಕಿನ ಸ್ವಗ್ರಾಮ ಖಜ್ಜಿಡೋಣಿಯಲ್ಲಿ ಮಂಟೂರ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಕ್ಕೆ ನಡೆಯಲಿದೆ. ಮಂಟೂರ ಅವರರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಜಿ.ವಿ.ಮಂಟೂರ ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ದರು.

Read More »

ಮಾಜಿ ಶಾಸಕ ಡಾ.ಹೆಚ್.ಡಿ.ಚೌಡಯ್ಯ ನಿಧನ

ಮಂಡ್ಯ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಶಾಸಕ ಡಾ.ಹೆಚ್.ಡಿ.ಚೌಡಯ್ಯ (94) ಅವರು ತಡರಾತ್ರಿ 2.15ರ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ತಾಲೂಕಿನ ಹೊಳಲು ಗ್ರಾಮದ ತಮ್ಮ ನಿವಾಸದಲ್ಲಿ ಚೌಡಯ್ಯ ಅವರು ನಿಧನರಾಗಿದ್ದಾರೆ.1928ರಲ್ಲಿ ಜನಿಸಿದ ಚೌಡಯ್ಯ ಅವರು ಕೃಷಿ ವಿಭಾಗದಲ್ಲಿ ಬಿಎಸ್​ಸಿ ಪದವಿ ಶಿಕ್ಷಣ ಪಡೆದಿದ್ದರು. ಇವರು 4 ಬಾರಿ ಕೆರಗೋಡು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಾವೇರಿ ಹೋರಾಟದಲ್ಲಿ …

Read More »

ಮಲಗಿದ್ದಲೇ ಹಾರಿ ಹೋದ ವಿದ್ಯಾರ್ಥಿಯ ಪ್ರಾಣ ಪಕ್ಷಿ

ಮಂಗಳೂರು (ದ.ಕನ್ನಡ): ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬರು ಆಸ್ಪತ್ರೆಯ ರೆಸ್ಟ್ ರೂಮ್​ನಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದ ಮನಕುಲ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಿವಾಸಿ ನಾಗೇಶ್ (23) ಸಾವನ್ನಪ್ಪಿದ ವಿದ್ಯಾರ್ಥಿ. ಇವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಭಾನುವಾರ ರಾತ್ರಿ ರೆಸ್ಟ್ ರೂಮ್​​ನಲ್ಲಿ ಮಲಗಿದ್ದು, ಬೆಳಗ್ಗೆ ನೋಡಿದಾಗ ಮೃತಪಟ್ಟಿದ್ದಾರೆ.

Read More »

ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್

ಬಾಗಲಕೋಟೆ: ಹಿಜಾಬ್ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಜಾಬ್ ಧರಿಸದೇ ಇದ್ದರೆ ರೇಪ್ ಆಗುತ್ತೆ ಎಂಬ ಜಮೀರ್ ಹೇಳಿಕೆ ಅತ್ಯಂತ ನಿರ್ಲಜ್ಜದ ಹೇಳಿಕೆ.ಈ ದೇಶದಲ್ಲಿ ಹಿಂದೂ ಮಹಿಳೆಯರು ಹಿಜಾಬ್ ಇಲ್ಲದೇ ಜೀವನ ಮಾಡುತ್ತಿದ್ದಾರೆ. ಅವರು ಸುರಕ್ಷಿತರಾಗಿಯೇ ಇದ್ದಾರೆ. ಹೀಗಿರುವಾಗ ಹಿಜಾಬ್ ಇಲ್ಲದಿದ್ದರೆ ಅತ್ಯಾಚಾರವಾಗುತ್ತದೆ ಎಂಬ ರೀತಿಯಲ್ಲಿ ಶಾಸಕರು …

Read More »

ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ : ಅಯೂಬ್‌ ಖಾನ್‌ ಬಂಧನ

ಮೈಸೂರು: ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ದಿ ಇಂಡಿಯನ್‌ ನ್ಯೂ ನ್ಯಾಷನಲ್‌ ಪಾರ್ಟಿ ಅಧ್ಯಕ್ಷ ಅಯೂಬ್‌ ಖಾನ್‌ ಅವರನ್ನು ಮೈಸೂರು ನಗರದ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಯೂಬ್‌ ಖಾನ್‌ ವಿರುದ್ಧ ದಿಗಂಬರ ಜೈನ ಸಮಾಜ ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ದೂರು ನೀಡಿತ್ತು. ಗೊಮ್ಮಟೇಶ್ವರ ಕುರಿತು ಅವ ಹೇಳನಕಾರಿ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು …

Read More »

ಪ್ರತಾಪ್‌ ಸಿಂಹ ಹೇಳಿಕೆ ವಿರುದ್ಧ ಯು.ಟಿ. ಖಾದರ್ ವಾಗ್ದಾಳಿ

ಮೈಸೂರು: ಸಂಸದ ಪ್ರತಾಪ್‌ ಸಿಂಹನಂತಹ ಮೂರ್ಖ ಯಾರೂ ಇಲ್ಲ. ತಂದೆ ಮುಖ್ಯನಾ?, ತಾಯಿ ಮುಖ್ಯನಾ ಅಂತ ಕೇಳಲು ಆಗುತ್ತಾ. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ಊಟ ಬೇಕಾ?, ನೀರು ಬೇಕಾ ಅಂದ್ರೆ ಆಗುತ್ತಾ? ಎಂದು ಪ್ರಶ್ನಿಸಿದರು. ಹಿಜಾಬ್ ಬಿಟ್ಟು ಕಿತಾಬ್ ಕೇಳಿ ಎಂದಿದ್ದ ಪ್ರತಾಪ್‌ ಸಿಂಹ ಹೇಳಿಕೆಗೆ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ. ನೀವು ಪಾರಂಪರಿಕ, ಐತಿಹಾಸಿಕ‌ ಮೈಸೂರು ಸಂಸದರು. ಮೈಸೂರಿನ ಘನತೆ ಉಳಿಸಿ, ಅದಕ್ಕೆ ಕಪ್ಪುಚುಕ್ಕೆ …

Read More »

ಸರ್ಕಾರ ವಿರುದ್ಧ ಆರೋಪ ಮಾಡಿದ ಡಿಕೆಶಿ

ಗದಗ: ‘ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ.ಅಲ್ಲದೇ, ವಿವಾದ ರಾಜ್ಯದೆಲ್ಲೆಡೆ ವ್ಯಾಪಿಸಲು ಸರ್ಕಾರವೇ ಪ್ರೋತ್ಸಾಹ ನೀಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾನುವಾರ ಆರೋಪಿಸಿದರು. ‘ರಾಜ್ಯದಲ್ಲಿರುವಂತೆ ತಾಂತ್ರಿಕ, ಶೈಕ್ಷಣಿಕ, ಸಾಂಸ್ಕೃತಿಕ ಶ್ರೀಮಂತಿಕೆ ಬೇರೆಲ್ಲೂ ಇಲ್ಲ. ಇಂತಹ ವಾತಾವರಣದಲ್ಲಿ ಈಗ ವಿವಾದ ಹುಟ್ಟಿಕೊಂಡಿದೆ. ಬಿಜೆಪಿ ಸರ್ಕಾರದಿಂದಲೇ ರಾಜ್ಯಕ್ಕೆ ಕಪ್ಪುಚುಕ್ಕೆ ಬಿದ್ದಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು. ‘ಸಂವಿಧಾನ ಮತ್ತು ರಾಷ್ಟ್ರಧ್ವಜವೇ ಕಾಂಗ್ರೆಸ್‌ ಪಕ್ಷದ ಧರ್ಮ. ತಲೆಕೆಟ್ಟ ಕೆ.ಎಸ್.ಈಶ್ವರಪ್ಪ, …

Read More »

ಬ್ರಾಹ್ಮಿ ಮುಹೂರ್ತದಲ್ಲಿ ಜರುಗಿದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ

ಬಾಗಲಕೋಟೆ: ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಒಕ್ಕೂಟದ ಜಾಗೆಯಲ್ಲಿ ರಾಜ್ಯದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮ ಭಾನುವಾರ ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಈ ಕಾರ್ಯಕ್ರಮ ನಡೆಯಿತು. 3ನೇ ಪೀಠದ ಪೀಠಾಧಿಕಾರಿ ಆಗುತ್ತಿರುವ ಷ. ಬ್ರ. ಡಾ. ಮಹದೇವ ಶಿವಾಚಾರ್ಯ ಸ್ವಾಮೀಜಿಗಳಿಗೆ ಪಟ್ಟಾಭಿಷೇಕ ಕಾರ್ಯ ನಡೆಯಿತು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹೆಸರಿನಲ್ಲಿ ಜಗದ್ಗುರು ಡಾ.ಮಹಾದೇವ …

Read More »

ಡಿವೈಡರ್​ಗೆ ಡಿಕ್ಕಿ, :ವಿಕಲಚೇತನ ಸಾವು

ಕಾರವಾರ: ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಓರ್ವ ವಿಕಲಚೇತನ ಸಾವನ್ನಪ್ಪಿದ್ದಾರೆ. ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ಸಂಭವಿಸಿದೆ. ನಿಜಾಮುದ್ದಿನ್ (36) ಮೃತ ದುರ್ದೈವಿ. ನಿಯಂತ್ರಣ ತಪ್ಪಿದ ಕಾರು ಆಕಳಿಗೆ ಗುದ್ದಿದೆ. ಬಳಿಕ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಿಜಾಮುದ್ದಿನ್ ಹಾಗೂ ಅವರ ಸ್ನೇಹಿತ ಅಬಕಾರಿ ಇಲಾಖೆ ಜಪ್ತಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋರಟಿದ್ದರು. ಈ ವೇಳೆ ಅಪಘಾತ ನಡೆದಿದೆ. ಕಾರು ಚಾಲಕ ಅಶೋಕ ಖೇಣಿಗೆ …

Read More »