ಕಾರವಾರ: ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಓರ್ವ ವಿಕಲಚೇತನ ಸಾವನ್ನಪ್ಪಿದ್ದಾರೆ. ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ಸಂಭವಿಸಿದೆ.
ನಿಜಾಮುದ್ದಿನ್ (36) ಮೃತ ದುರ್ದೈವಿ. ನಿಯಂತ್ರಣ ತಪ್ಪಿದ ಕಾರು ಆಕಳಿಗೆ ಗುದ್ದಿದೆ. ಬಳಿಕ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಿಜಾಮುದ್ದಿನ್ ಹಾಗೂ ಅವರ ಸ್ನೇಹಿತ ಅಬಕಾರಿ ಇಲಾಖೆ ಜಪ್ತಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋರಟಿದ್ದರು. ಈ ವೇಳೆ ಅಪಘಾತ ನಡೆದಿದೆ. ಕಾರು ಚಾಲಕ ಅಶೋಕ ಖೇಣಿಗೆ ಸಣ್ಣ ಪುಟ್ಟಗಾಯಗಳಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

