Breaking News

ಬ್ರಾಹ್ಮಿ ಮುಹೂರ್ತದಲ್ಲಿ ಜರುಗಿದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ

ಬಾಗಲಕೋಟೆ: ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಒಕ್ಕೂಟದ ಜಾಗೆಯಲ್ಲಿ ರಾಜ್ಯದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮ ಭಾನುವಾರ ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಈ ಕಾರ್ಯಕ್ರಮ ನಡೆಯಿತು.

3ನೇ ಪೀಠದ ಪೀಠಾಧಿಕಾರಿ ಆಗುತ್ತಿರುವ ಷ. ಬ್ರ. ಡಾ. ಮಹದೇವ ಶಿವಾಚಾರ್ಯ ಸ್ವಾಮೀಜಿಗಳಿಗೆ ಪಟ್ಟಾಭಿಷೇಕ ಕಾರ್ಯ ನಡೆಯಿತು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹೆಸರಿನಲ್ಲಿ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿಗೆ ಒಕ್ಕೂಟದ ಸ್ವಾಮೀಜಿಗಳು ರುದ್ರಾಭಿಷೇಕ ನೆರವೇರಿಸಿದರು.

ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅಷ್ಟ ದುರ್ಗಾ ಪೂಜಾ, ಪಾರ್ವತಿ ಪೂಜಾ, ಏಕಾದಶಿ ಮಹಾರುದ್ರ ಪೂಜಾ, ಸ್ವಸ್ತಿಪುಣ್ಯ ಆಹ್ವಾಚನ ಪೂಜೆ ನಡೆಯಿತು.

ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಕಾರ್ಯದರ್ಶಿ ಅಭಿನವ ಸಂಗನಬಸವ ಸ್ವಾಮೀಜಿ, ಉಪಾಧ್ಯಕ್ಷ ಬೆಂಡವಾಡದ ರೇವಣಸಿದ್ದ ಸ್ವಾಮೀಜಿ, ಸಿದ್ದಲಿಂಗದೇವರು ಸೇರಿದಂತೆ ಒಕ್ಕೂಟದ ಸ್ವಾಮೀಜಿಗಳು ಭಾಗಿಯಾಗಿದ್ರು.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *