Breaking News

ಧಾರವಾಡ

ಮಹಿಳೆಯರ ಮೇಲೆ ಚಿರತೆ ದಾಳಿ

ಧಾರವಾಡ: ತಾಲೂಕಿನ ಗೋವನಕೋಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ‌ ಚಿರತೆ ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ಮಾಡಲಾಗಿದೆ. ಗೋನವಕೋಪ್ಪ ಹಾಗೂ ಕವಲಗೇರಿ ಗ್ರಾಮದ ಮಹಿಳೆಯರ ಮೇಲೆ ಚಿರತೆ ದಾಳಿಗೆ ಒಳಗಾಗಿದ್ದು,ಬಸವನ್ನೆವ್ವ ಕುಲಕರ್ಣಿ ಹಾಗೂ ಮಂಜುಳಾ ತೋಟದ ಎಂಬ ಮಹಿಳೆಯರ ಮೇಲೆ‌ ದಾಳಿ ಮಾಡಲಾಗಿದೆ ‌. ಈ ಹಿಂದೆಯೂ ಕಾಣಿಸಿಕೊಂಡಿದ್ದ ಚಿರತೆಚಿರತೆಯನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆ ಮತ್ತೊಂದು ಚಿರತೆ ದಾಳಿಂದ ಆತಂಕಗೊಂಡ ಗ್ರಾಮಸ್ಥರು ಭಯದಲ್ಲಿದ್ದಾರೆ. ಅರಣ್ಯ ಇಲಾಖೆ ಸ್ಥಳಕ್ಕೆ ದೌಡಾಯಿಸಿದ್ದು,ಯಾಳು ಮಹಿಳೆಯರಿಗೆ …

Read More »

ಶಾಲೆಗಳ ಪುನರಾರಂಭಕ್ಕೆ ಧಾರವಾಡ ಡಿಸಿ ಆದೇಶ

ಧಾರವಾಡ: ಧಾರವಾಡ ನಗರ, ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಹರಡುತ್ತಿದ್ದ ಕೊರೊನಾ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಕಳೆದ ಜ.13 ರಂದು ಈ ವ್ಯಾಪ್ತಿಯ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಹಾಗೂ 1 ರಿಂದ 8 ನೇ ತರಗತಿವರೆಗೆ ಘೋಷಿಸಿದ್ದ ರಜೆ ಆದೇಶವನ್ನು ಹಿಂಪಡೆದು, ಶಾಲೆಗಳ ಪುನರಾರಂಭಕ್ಕೆ ಆದೇಶ ನೀಡಿದ್ದಾರೆ. ಶಾಲೆಗಳ ಪುನರಾರಂಭದ ಕುರಿತು ನಿಯಮಿತವಾಗಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು, ರಜೆ ಘೋಷಿಸಿದ್ದ …

Read More »

ಧಾರವಾಡದಲ್ಲಿ ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್ ವಿತರಣೆ

ಧಾರವಾಡ: ಕೋವಿಡ್-19  3ನೇ ಅಲೆ ಆರಂಭವಾಗಿದ್ದು, ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ 94% ರಿಂದ 95% ಜನ ಸೋಂಕಿತರು ಹೋಮ್ ಐಸೋಲೇಷನ್ ಆಗುತ್ತಿದ್ದಾರೆ.ಹೋಮ್ ಐಸೋಲೇಷನ್‍ದಲ್ಲಿರುವ ಸೋಂಕಿತರು ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರೋಗ್ಯವಂತರಾಗಿ, ರೋಗದಿಂದ ಗುಣಮುಖರಾಗಲು ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಹೊಸ ಉಪಾಯ ಹುಡುಕಿ, ಅನುಷ್ಠಾನಗೊಳಿಸಿವೆ. ಅದುವೇ ‘ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್’ ವಿತರಣೆ. ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನವಾಗುತ್ತಿದೆ.

Read More »

ಕಂಟೇನರ್ ವಾಹನಕ್ಕೆ‌ ಆಕಸ್ಮಿಕ್ ಬೆಂಕಿ : ಸುಟ್ಟ ಬಸ್ಮವಾದ ಕೊರಿಯರ್

ಧಾರವಾಡ: ಕೊರಿಯರ್ ಸಾಗಿಸುವ ಕಂಟೆನರ್ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಷ್ಟೇ ನಡೆದಿದೆ. ಬೆಳಗಾವಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೇನರ್ ಲಾರಿ ಹುಬ್ಬಳ್ಳಿಯ ಕಡೆಗೆ ತೆರಳುತಿತ್ತು. ಆದರೆ ಲಾರಿಯ ಹಿಂಬದಿಯ ಕಂಟೆನರ್ ಬಾಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸುಡುತ್ತಿರುವ ವಾಸನೆ ಗಮನಿಸಿದ ಲಾರಿಯ ಚಾಲಕ ಯರಿಕೊಪ್ಪದ ರಮ್ಯಾ ರೆಸಿಡೆನ್ಸಿ ಬಳಿಯಲ್ಲಿ ಲಾರಿಯ ನಿಲ್ಲಿಸಿ, …

Read More »

ನಿಯಂತ್ರಣ ತಪ್ಪಿದ ಚಾಲಕ : ವಿದ್ಯಾರ್ಥಿಗೆ ಗಂಭೀರ ಗಾಯ

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವೃತ್ತಕ್ಕೆ ಡಿಕ್ಕಿಯಾಗಿ ಧಾರವಾಡ ಎಸ್​ಡಿಎಂ ಎಂಬಿಬಿಎಸ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ಗಂಭೀರ ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲಾಧಿಕಾರಿ ನಿವಾಸದ ಬಳಿ ನಡೆದಿದೆ. ವಿದ್ಯಾರ್ಥಿ ಅತೀ ವೇಗವಾಗಿ ಕಾರು ಚಲಾಯಿಸಿದ್ದು, ನಿಯಂತ್ರಣ ತಪ್ಪಿ ವೃತ್ತಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಸದ್ಯ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ …

Read More »

ಕಣವಿ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು

ಧಾರವಾಡ: ಕಣವಿ ಅವರಿಗೆ ನೀಡುತ್ತಿರುವ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು,  ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಉಂಟಾಗಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ಎಸ್‌ಡಿಎಂ ಆಸ್ಪತ್ರೆಯು ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ. ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತ್ತು. ಅಲ್ಲಿಂದ ಅವರಿಗೆ ನಿರಂತರವಾಗಿ ವೈದ್ಯಕೀಯ ಆಮ್ಲಜನಕ ನೀಡಲಾಗುತ್ತಿದೆ. ಮಂಗಳವಾರ 8 ಲೀ ಆಮ್ಲಜನವನ್ನು ಅವರಿಗೆ ನೀಡಲಾಗಿದೆ.

Read More »

ಡಾ.ಚನ್ನವೀರ ಕಣವಿ ಆರೋಗ್ಯದಲ್ಲಿ ಏರುಪೇರು : ಚಿಕಿತ್ಸೆ ಮುಂದುವರಿದಿದ್ದು, ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ

ಧಾರವಾಡ : ಹಿರಿಯ ಕವಿ ಡಾ.ಚನ್ನವೀರ ಕಣವಿ ಅವರ ಆರೋಗ್ಯದಲ್ಲಿ ತುಸು ಮಟ್ಟಿನ ಏರುಪೇರು ಉಂಟಾಗಿದ್ದು, ವೈದ್ಯಕೀಯ. ಆಮ್ಲಜನಕ ಪ್ರಮಾಣವನ್ನು ಮಂಗಳವಾರ 8 ಲೀ. ಗೆ ಹೆಚ್ಚಿಸಲಾಗಿದೆ ಎಂದು ಎಸ್. ಡಿ. ಎಂ. ಆಸ್ಪತ್ರೆ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಡಳಿತ, ಡಾ. ಕಣವಿ ಅವರು ಪ್ರತಿದಿನದಂತೆ ಇಂದೂ ಸಹ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತ, ಎಸ್.ಡಿ.ಎಮ್ ಆಸ್ಪತ್ರೆಯ ಆಡಳಿತ …

Read More »

ಹೆಣ್ಣಿನ ವಿಷಯಕ್ಕೆ ಬಿತ್ತು ಯುವಕನ ಹೆಣ

ಧಾರವಾಡ : ಜಿಲ್ಲೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಸುಮಾರು ಎರಡು ವರ್ಷಗಳಿಂದ ಹೆಣ್ಣು ಮಗಳೊಂದಿಗೆ ಸಲಿಗೆಯಿಂದ ನಡೆದುಕೊಂಡಿದ್ದ ಕ್ಕಾಗಿ ಸಿಟ್ಟು ತಾಳಲಾರದೆ ಯುವಕನ ಜೊತೆಗೆ ಜಗಳವಾಡುತ್ತಿದ್ದಾಗ ಕಲ್ಲಿನಿಂದ ಹೊಡೆದ ಪರಿಣಾಮ ಯುವಕ ಮೂರ್ಛೆ ಬಿದ್ದಿದ್ದು ಅವನನ್ನು ಕೂಡಲೇ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಮರಣ ಹೊಂದಿರುವ ಘಟನೆ ಇಂದು ನಡೆದಿದ್ದು ಈ ಪ್ರಕರಣ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಕಲಘಟಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ …

Read More »

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಪುಷ್ಪ‌ ನಮನ

ಧಾರವಾಡ : ಸ್ವಾಮಿ ವಿವೇಕಾನಂದ ಅವರ ಜಯಂತಿ ಅಂಗವಾಗಿ ಇಂದು ಧಾರವಾಡದ ವಿವೇಕಾನಂದ ವೃತ್ತದ ಸ್ವಾಮಿ ವಿವೇಕಾನಂದ ಅವರ ಪುತ್ಥಳಿಗೆ ಬಿಜೆಪಿ ನಗರ ಘಟಕ 71ರ ವತಿಯಿಂದ ಮಾಲಾರ್ಪಣೆ ಮಾಡಿ ಪುಷ್ಪ‌ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮಂಡಳ ಅಧ್ಯಕ್ಷ ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ ರವಿ ಎಲಿಗಾರ ಮಂಜುನಾಥ ಕಮ್ಮಾರ ರಜತ ನಗರ ಸೋಮಲಿಂಗ ಹಿರೇಮನಿ …

Read More »

ವಿದ್ಯಾಕಾಶಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ

ಧಾರವಾಡ: ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮೀಣ ಕ್ಷೇತ್ರ, ಹುಬ್ಬಳ್ಳಿ ನಗರ ಮತ್ತು ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಸೇರಿದಂತೆ 1 ರಿಂದ 8ನೇ ತರಗತಿವರೆಗೆ ರಜೆ ಘೋಷಣೆ ಮಾಡಿದ್ದಾರೆ. ನಾಳೆಯಿಂದಲೇ ಈ ಆದೇಶ ಅನ್ವಯವಾಗಲಿದ್ದು, ಮುಂದಿನ ಆದೇಶದವರೆಗೂ ಶಾಲೆಗಳನ್ನು ಪುನರಾರಂಭಿಸದಂತೆ ಸೂಚನೆ ನೀಡಲಾಗಿದೆ. ಈ ತಾಲೂಕಿನಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದ್ದು, ಹೀಗಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. …

Read More »