Breaking News

ಕಂಟೇನರ್ ವಾಹನಕ್ಕೆ‌ ಆಕಸ್ಮಿಕ್ ಬೆಂಕಿ : ಸುಟ್ಟ ಬಸ್ಮವಾದ ಕೊರಿಯರ್

ಧಾರವಾಡ: ಕೊರಿಯರ್ ಸಾಗಿಸುವ ಕಂಟೆನರ್ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಷ್ಟೇ ನಡೆದಿದೆ. ಬೆಳಗಾವಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೇನರ್ ಲಾರಿ ಹುಬ್ಬಳ್ಳಿಯ ಕಡೆಗೆ ತೆರಳುತಿತ್ತು.

ಆದರೆ ಲಾರಿಯ ಹಿಂಬದಿಯ ಕಂಟೆನರ್ ಬಾಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸುಡುತ್ತಿರುವ ವಾಸನೆ ಗಮನಿಸಿದ ಲಾರಿಯ ಚಾಲಕ ಯರಿಕೊಪ್ಪದ ರಮ್ಯಾ ರೆಸಿಡೆನ್ಸಿ ಬಳಿಯಲ್ಲಿ ಲಾರಿಯ ನಿಲ್ಲಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾನೆ. ಚಾಲಕನಿಗೆ ಸ್ಥಳೀಯರು ಹಾಗೂ ಗ್ರಾಮಸ್ಥರು ಸಾಥ ನೀಡಿದ್ದು, ಇದರ ಜೊತೆಗೆ ಅಗ್ನಿ ಶಾಮಕ ದಳದಕ್ಕೆ ಕೂಡಾ ಮಾಹಿತಿ ನೀಡಲಾಗಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸುತ್ತುದ್ದಾರೆ ಎಂದು ತಿಳುದು ಬಂದಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಕಿ ನೋಡಿದ ಸ್ಥಳಿಯರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು.

Share News

About admin

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *