Breaking News

ಧಾರವಾಡ

ಮಿರ್ಚಿ ಹಾಗೂ ಗಿರಮಿಟ್ ಸವೀದ ಸಂತೋಷ ಲಾಡ್

ಧಾರವಾಡ: ಬೆಳೆ ಹಾನಿ ವೀಕ್ಷಣೆಗೆಂದು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮಕ್ಕೆ ಬಂದಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬೆಳೆ ವೀಕ್ಷಣೆ ನಂತರ ಅಮ್ಮಿನಬಾವಿ ಗ್ರಾಮದ ಬಸ್ ನಿಲ್ದಾಣದಲ್ಲಿದ್ದ ಚಹಾ ಅಂಗಡಿಯಲ್ಲಿ ಸಾಮಾನ್ಯರಂತೆ ಮಿರ್ಚಿ ಹಾಗೂ ಗಿರಮಿಟ್ ಸವಿದಿದ್ದಾರೆ. ಸಚಿವರೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಸ್ವರೂಪಾ ಟಿ.ಕೆ. ಅವರೂ ಗಿರಮಿಟ್ ಹಾಗೂ ಮಿರ್ಚಿ ರುಚಿ …

Read More »

ಹಳ್ಳ ದಾಟುತ್ತಿದ್ದ ವ್ಯಕ್ತಿಯ ತೇಲಿ ಹೋದ ಕಾರು

ಕಲಘಟಗಿ : ತಾಲೂಕಿನ ಹಿರೇಹೊನ್ನಿಹಳ್ಳಿ ಹಾಗೂ ಧಾರವಾಡ ರಾಜ್ಯ ಹೆದ್ದಾರಿಯಿಂದ ಬೇಗೂರು ಬಿಸನಳ್ಳಿ ಸಂಪರ್ಕಿಸುವ ರಸ್ತೆಯಲಿ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳ ದಾಟುತ್ತಿದ್ದ ವ್ಯಕ್ತಿಯ ಕಾರು ನೀರಿನಲ್ಲಿ ತೇಲಿ ಹೋಗಿರುವ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಡ್ರೈವ‌ರ್ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಸಾರ್ವಜನಿಕರ ಸಹಾಯದಿಂದ ಕಾರು ಹೊರತೆಗೆದಿದ್ದಾರೆ.

Read More »

ರಸ್ತೆ ಅಪಘಾತದಲ್ಲಿ ಸಾವನಪ್ಪಿದ ವ್ಯಕ್ತಿಯ ಮನೆಗೆ ಸಂತೋಷ್ ಲಾಡ್

ಧಾರವಾಡ: ಅಕ್ಟೋಬರ್ 20, 2024 ರಂದು ಸಂಪಿಗೆ ನಗರ ಹತ್ತಿರ ರಸ್ತೆ ಅಪಘಾತದಲ್ಲಿ ಕೆಲಗೇರಿ ಗ್ರಾಮದ ರಮೇಶ್ ಹಂಚಿನಮನಿ, ಮರೆವ್ವ ಹಂಚಿನಮನಿ, ಪ್ರಣವ್ ಹಂಚಿನಮನಿ ಮೃತಪಟ್ಟಿದ್ದು, ಇವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಂದು ಭೇಟಿ ನೀಡಿದರು. ವಾರಸುದಾರರಿಗೆ 2 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ತಹಶೀಲ್ದಾರ ಡಾ.ಡಿ.ಎಚ್.ಹೂಗಾರ, ಡಿಸಿಪಿ ರವೀಶ, …

Read More »

ರೈತರಿಗೆ ಮತ್ತೇ ಬೀಜ ವಿತರಿಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ; ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಸಂತೋಷ ಲಾಡ

ಧಾರವಾಡ : ಅತಿಯಾದ ಮಳೆಯಿಂದಾಗಿ, ಮುಂಗಾರಿನ ಫಸಲು ಕೊಯ್ಲು ಹಂತದಲ್ಲಿ ನಾಶವಾಗಿದ್ದು ಮತ್ತು ಹಿಂಗಾರು ಬಿತ್ತನೆ ಮಾಡಿದ್ದ ಬೀಜಗಳು ಕೊಚ್ಚಿಕೊಂಡು ಹೋಗಿ ನಾಟಿ ಬಂದಿರುವದಿಲ್ಲ. ಆದ್ದರಿಂದ ಈಗಾಗಲೇ ಕೃಷಿ ಇಲಾಖೆಯಿಂದ ಹಿಂಗಾರು ಬಿತ್ತನೆಗೆ ಬೀಜ ಪಡೆದಿದ್ದ ರೈತರಿಗೆ ಮರಳಿ ರಿಯಾತಿಯಲ್ಲಿ ಬಿತ್ತನೆ ಬೀಜ ವಿತರಿಸಲು ಅಗತ್ಯವಿರುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ತಿಳಿಸಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ …

Read More »

ಬೆಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ ಲಾಡ ಭೇಟಿ; ರೈತರ ಅಹವಾಲು ಆಲಿಕೆ

ಧಾರವಾಡ : ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಇಂದು ಮದ್ಯಾಹ್ನ ಜಿಲ್ಲೆಯ ಅಮ್ಮಿನಭಾವಿ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ, ಜಿಲ್ಲೆಯ ಮಳೆ ಹಾನಿ ಕುರಿತು ಹಾನಿಯಾದ ಮನೆಗಳಿಗೆ ಹಾಗೂ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಅವರು ರೈತರೊಂದಿಗೆ ಮಾತನಾಡಿ, ಬೆಳೆ ಹಾನಿ ಕುರಿತು ಪ್ರತಿ ರೈತರನ ಜಮೀನುಗಳನ್ನು ತಪ್ಪದೇ ನಿಖರವಾಗಿ ಸಮೀಕ್ಷೆ ಮಾಡಿ, ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಕ್ಕೆ ಜಿಲ್ಲೆಯ ಬೆಳೆ ಹಾನಿ ಕುರಿತು ವಿಶೇಷ ವರದಿ …

Read More »

ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ; ಬೆಳೆ, ಮನೆ, ರಸ್ತೆ, ಸೇತುವೆ ಹಾನಿ ಪರಿಶೀಲನೆ

ಹುಬ್ಬಳ್ಳಿ: ಅಕ್ಟೋಬರ ಆರಂಭದಿಂದ ನಿರಂತರವಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಈ ಕುರಿತು ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಭೇಟಿ ನೀಡಿ, ಪರಿಶೀಲಿಸಿದರು. ಪ್ರವಾಸ ಸಂದರ್ಭದಲ್ಲಿ ವಿವಿಧ ಗ್ರಾಮಗಳ ರೈತರನ್ನು, ಜನಪ್ರತಿನಿಧಿಗಳನ್ನು ಮತ್ತು ಸಾರ್ವಜನಿಕರನ್ನು ಭೇಟಿ ಆಗಿ ಅಹವಾಲು ಕೇಳಿದರು. ಮನವಿ ಸ್ವೀಕರಿಸಿದರು. ಬೆಳೆಹಾನಿ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಮನೆ ಹಾನಿ ಮತ್ತು ಮನೆಗಳಿಗೆ …

Read More »

ಜವಾಹರ ನವೋದಯ ವಿದ್ಯಾಲಯ 9 ನೇ ಮತ್ತು 11ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಧಾರವಾಡ : 2025-26 ನೆಯ ಸಾಲಿಗೆ ಜವಾಹರ ನವೋದಯ ವಿದ್ಯಾಲಯದಲ್ಲಿ 9 ನೇ ಮತ್ತು 11ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ಪ್ರವೇಶಾವಕಾಶವಿದ್ದು, ಪ್ರಸಕ್ತ ವರ್ಷ (2024-25) 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು 10ನೆ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅಕ್ಟೋಬರ್ 30, 2024 ರೊಳಗಾಗಿ www.navodaya.gov.in ಹಾಗೂ https://cbseitms.nic.in/2024/nvsix?AspxAutoDetectCookieSupport=1, https://cbseitms.nic.in/2024/nvsxi_11?AspxAutoDetectCookieSupport=1 ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜವಾಹರ ನವೋದಯ …

Read More »

ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಎಂ.ಆರ್.ಪಾಟೀಲ್‌

ಕುಂದಗೋಳ : ಧಾರಾಕಾರ ಮಳೆಯ ರಭಸಕ್ಕೆ ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ ಹಂಚಿನಾಳ ಗ್ರಾಮದ ಜನರನ್ನೂ ಶಾಸಕ ಎಂ.ಆರ್.ಪಾಟೀಲ್‌ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಹಲವು ಜನರು ಮನೆ ಕಳೆದುಕೊಂಡಿದ್ದರು.ಇನ್ನೂ ಬಹುತೇಕ ಕೃಷಿ ಭೂಮಿಯಲ್ಲಿನ ಬೆಳೆಗಳು ಸಹ ಹಾಳಾಗಿದ್ದನ್ನೂ ಸ್ವತಃ ಶಾಸಕರೇ ರೈತಾಪಿ ಜನರ ಜಮೀನುಗಳಿಗೆ ತಹಶೀಲ್ದಾರ್ ರಾಜು ಮಾವರಕರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ …

Read More »

ರೈತರು ಬೆಳೆ ಹಾನಿ : ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ಘೋಷಣೆ ಮಾಡುವಂತೆ ಪ್ರತಿಭಟನೆ

ಧಾರವಾಡ: ಕಳೆದ ಕೆಲ ತಿಂಗಳಿನಿಂದ ಅತಿಯಾದ ಮಳೆಯಾಗಿ ರೈತರು ಬೆಳೆದ ಬೆಳೆ ಹಾಳಾಗಿವೆ. ರಾಜ್ಯ ಸರ್ಕಾರ ಕೂಡಲೇ ಪ್ರತಿ ಎಕರೆಗೆ 20 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಸಂಘಟನೆಯ ನೇತೃತ್ವದಲ್ಲಿ ರೈತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲೆಯ ಅಂದಾಜು 40 ಸಾವಿರ ಹೆಕ್ಟೇ‌ರ್ ಪ್ರದೇಶದಲ್ಲಿದ್ದ ಬೆಳೆ ಮಳೆಯಿಂದಾಗಿ ಹಾನಿಗೀಡಾಗಿದೆ. ಇದರಿಂದಾಗಿ ರೈತರು ಆತ್ಮಹತ್ಯೆಯ ದಾರಿ …

Read More »

ಮನೆ ಕುಸಿತ: ಮಹಿಳೆ ಸಾವು

ನವಲಗುಂದ: ನಿರಂತರವಾಗಿ ಸುರಿದ ಮಳೆಯಿಂದ ತಾಲೂಕಿನ ಹನಸಿ ಗ್ರಾಮದಲ್ಲಿ ಮನೆ ಬಿದ್ದ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೋರ್ವಳು ಚಿಕಿತ್ಸೆ ಫಲಿಸದೇ ಕಿಮ್ನಲ್ಲಿ ನಿನ್ನೆ ರಾತ್ರಿ ಸಾವಿಗೀಡಾಗಿದ್ದಾರೆ. ತಾಲೂಕಿನ ಹನಸಿ ಗ್ರಾಮದಲ್ಲಿ ಮನೆ ಬಿದ್ದ ತಕ್ಷಣವೇ ಗ್ರಾಮಸ್ಥರು ಮಣ್ಣಿನಡಿ ಸಿಲುಕಿದ್ದ ಅತ್ತೆ-ಸೊಸೆಯನ್ನ ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ, ಅತ್ತೆ ಮಂಗಳಾ ಪಾಟೀಲ ಅವರಿಗೆ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Read More »