Breaking News

ಮಹಿಳೆಯರೊಂದಿಗೆ ಅನುಚಿತವಾಗಿ ವರ್ತನೆ: ಪೋಲಿಸ್ ರಿಂದ ಮುಟ್ಟಿದ ಬಿಸಿ

ಹುಬ್ಬಳ್ಳಿ: ಮಹಿಳೆಯರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಅಲ್ಲಿಂದ ಕಳುಹಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹುಬ್ಬಳ್ಳಿಯ ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬ ವಿಪರೀತ ಕುಡಿದು ನಿಲ್ದಾಣದಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ಬಸ್ ಚಾಲಕರು ಹಾಗೂ ನಿರ್ವಾಹಕರು ಆತನನ್ನು ಅಲ್ಲಿಂದ ಹೋಗು ಎಂದರೂ ಹೋಗದ ಕಾರಣ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಬಂದು ಗದರಿಸಿದ ಮೇಲೂ ಕೂಡ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಅಲ್ಲಿಂದ ಕದಲದೇ ಇದ್ದಾಗ ಅನಿವಾರ್ಯವಾಗಿ ಕುಡುಕನಿಗೆ ಲಾಠಿ ರುಚಿ ತೋರಿಸಿ ಅಲ್ಲಿಂದ ಕಳುಹಿಸಿದ್ದಾರೆ. ಹುಬ್ಬಳ್ಳಿಯ ಗೋಕುಲ್‌ ರೋಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About Shaikh BigTv

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *