Breaking News

ಹುಬ್ಬಳ್ಳಿ-ಧಾರವಾಡ

ನಾಳೆ ರಾಷ್ಟ್ರೀಯ ಯುವ ಮಹೋತ್ಸವ; ನಗರದ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ

ಹುಬ್ಬಳ್ಳಿ: ಜನವರಿ 12 ನಾಳೆ ದಿನದಂದು ನಡೆಯುವ, ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಿದೆಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು. ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾಳೆ ನಡೆಯುವ ಯುವ ಜನೋತ್ಸವ ಕಾರ್ಯಕ್ರಮ ಪ್ರಧಾನಿ ಮೋದಿಯವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ನಂತರ ರೋಡ್ ಮೂಲಕ ಬರುತ್ತಾರೆ. ಈ ಕಾರ್ಯಕ್ರಮಕ್ಕೆ …

Read More »

ಆಕಸ್ಮಿಕವಾಗಿ ದನದ ಕೊಟ್ಟಿಗೆಯ ಶೆಡ್‌ಗೆ ಬೆಂಕಿ

ಆಕಸ್ಮಿಕವಾಗಿ ದನದ ಕೊಟ್ಟಿಗೆಯ ಶೆಡ್‌ಗೆ ಬೆಂಕಿ ತಗುಲಿದ ಪರಿಣಾಮ, ಆರು ಎಮ್ಮೆಗಳು ಗಂಭೀರ ಗಾಯಗೊಂಡ ಘಟನೆ ಹುಬ್ಬಳ್ಳಿಯ ರಮೇಶ ಭವನ ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಹೌದು.ಇಂದು ಸಾಯಂಕಾಲದ ಸಮಯದಯಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ, ಕೊಟ್ಟಿಗೆಯಲ್ಲಿದ್ದ ಎಮ್ಮೆಗಳಿಗೆ ಬೆಂಕಿಯ ಝಳ ತಾಗಿ ಮೈ ತುಂಬಾ ಅರೆ ಬರೆ ಸುಟ್ಟ ಗಾಯಗಳಾಗಿವೆ.ಸೈಯ್ಯದ್ ಬೇಫಾರಿ ಎಂಬುವವರ ಸೇರಿದ ಆರು ಎಮ್ಮೆಗಳು ಬೆಂಕಿಯ ಝಳಕ್ಕೆ ತುತ್ತಾಗಿವೆ. ಬೆಂಕಿ ತಗುಲಿದ್ದನ್ನು ಗಮನಿಸಿದ …

Read More »

ಇಂದು ಕಂಡ ಅದ್ಭುತವಾದ ಹಾಗೂ ಮನ ತಟ್ಟುವ ವಿಡಿಯೋ, ಹುಚ್ಚಿಡಿದ ಕಾರಣಕ್ಕಾಗಿ ಮನೆಯಿಂದ ಹೊರಹಾಕಿದ ಪತಿ, ಸ್ಟ್ಯಾಚು ಕಂಡು ಮಹಿಳೆ…… !!!

ಜೀವನದಲ್ಲಿ ನಾವೆಷ್ಟು ಗಳಿಕೆ ಮಾಡಿದ್ದೇವೆ ಎಂಬುದು ನಮ್ಮ ಕೊನೆಯ ಕ್ಷಣದಲ್ಲಿ ಗೊತ್ತಾಗುತ್ತೆ. ಇಂದು ಪ್ರತಿಯೊಬ್ಬ ವ್ಯಕ್ತಿ ಹಣದ ಹಿಂದೆ ಬೆನ್ನು ಹತ್ತಿ ಅದನ್ನು ಪಡೆದುಕೊಳ್ಳುವ ಸಲುವಾಗಿ ಹಗಲು ರಾತ್ರಿ ಕಷ್ಟ ಪಡುತ್ತಾನೆ. ಇದು ಸತ್ಯವಾದ ಸಂಗತಿ ಸಹ. ಏಕೆಂದರೆ ಇಂದು ಮನುಷ್ಯರನ್ನು ಅವರ ವ್ಯಕ್ತಿತ್ವದಿಂದ ಗುರುತಿಸುವದಿಲ್ಲ ಹೊರತಾಗಿ ಅವರ ಬಳಿಯಲ್ಲಿದ್ದ ಸಂಪತ್ತಿನಿಂದ ಗುರುತ್ತಿಸುತ್ತಾರೆ. ಆ ವ್ಯಕ್ತಿ ಎಷ್ಟೇ ಒಳ್ಳೆಯವ ನಾಗಿದ್ದರೂ ಆತನ ಬಳಿಯಲ್ಲಿ ಹಣ ವಿರದಿದ್ದರೆ ಸಮಾಜದ ಜನರು ಆತನನ್ನು …

Read More »

ರಾಷ್ಟ್ರೀಯ ಯುವಜನೋತ್ಸವಕ್ಕೆ ಸಜ್ಜಾದ ಗಂಡು ಮೆಟ್ಟಿನ ನಾಡು ಹುಬ್ಬಳ್ಳಿ!

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ವಾಣಿಜ್ಯನಗರಿ ಹುಬ್ಬಳ್ಳಿ ಸಜ್ಜಾಗುತ್ತಿದೆ. ನಗರದ ರೈಲ್ವೆ ಮೈದಾನದಲ್ಲಿ ಬೃಹತ್ ವೇದಿಕೆ ತಯಾರಾಗಿದ್ದು, ಪೆಂಡಲ್ ಹಾಕಿ ತಯಾರಿ ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕ್ರಿಮಿಕೀಟಗಳ ನಾಶ ಮಾಡಲು, ಮೈದಾನದ ಸುತ್ತ ಮತ್ತು ವೇದಿಕೆಯ ಸುತ್ತಲೂ ಫಾಗಿಂಗ್ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

Read More »

ಮಾಜಿ ಶಾಸಕಿ ಸೀಮಾ ಮಸೂತಿ ನೇತೃತ್ವದಲ್ಲಿ ಬೂತ್ ವಿಜಯಾ ಅಭಿಯಾನ!

ಧಾರವಾಡ ತಾಲೂಕ ತಡಕೋಡ ಗ್ರಾಮ ಪಂಚಾಯಿತಿಯ ಗ್ರಾಮ ವ್ಯಾಪ್ತಿಯಲ್ಲಿ ಬೂತ್ ವಿಜಯ ಅಭಿಯಾನವನ್ನು ಮಾಜಿ ಶಾಸಕಿ ಸೀಮಾ ಮಸೂತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು.ವಾರ್ಡ್ ನಂಬರ್ 5 ಮತ್ತು 6 ಮತ್ತು ೩ಬೂತ್ ನಂಬರ್ 8,9,11,12 ರಲ್ಲಿ ಅಧ್ಯಕ್ಷರಾದ ಈರಣ್ಣಮೆಟಗುಡ್ಡಿ, ಅರ್ಜುನ್ ಕರಿಕಟ್ಟಿ, ಮಡಿವಾಳಪ್ಪ ಕಾದ್ರೋಳ್ಳಿ, ರುದ್ರಪ್ಪ ತಾವರೆನ್ನವರ್, ಬೂತಿನ ಅಧ್ಯಕ್ಷರು ಹಾಗೂ ಪೇಜ್ ಪ್ರಮುಖರು ಬೂತ್ ಸಮಿತಿಯ ಸದಸ್ಯರು ಗ್ರಾಮಸ್ಥರು ಪ್ರಮುಖರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಜರಿದ್ದರು.

Read More »

ಯುವ ಜನೋತ್ಸವಕ್ಕೆ ಭರ್ಜರಿ ತಯಾರಿ, ಕಾರ್ಯಕ್ರಮದ ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಧಾರವಾಡ : ಧಾರವಾಡದಲ್ಲಿ ನಾಳೆ 12 ರಿಂದ 16 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾಧ್ಯಮಗೋಷ್ಠಿ ನಡೆಸಿದರು. ಯುವಜನೋತ್ಸವದ ತಯಾರಿ ಬಗ್ಗೆ ಮಾತನಾಡಿದ ಅವರು, ಭದ್ರತೆ ಸೇರಿ, ಆಹಾರ ಹಾಗೂ ಮಾರ್ಗಗಳ ಬದಲಾವಣೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಒಳಗೆ ಎಲ್ಲ ಕಾರ್ಯ ಮುಗಿಯಲಿವೆ. ಪ್ರಧಾನಿ ಕಾರ್ಯಕ್ರಮ ಹಿನ್ನೆಲೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ 25 ಸಾವಿರ ಜನರು …

Read More »

Hubli Dargah issue…?

Read More »

ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳರ ಕೈಚಳಕ, ಸಿಸಿ ಕ್ಯಾಮೇರಾದಲ್ಲಿ ಸೆರೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳರ ಕೈಚಳಕ ಜೋರಾಗಿದೆ. ನಗರದಲ್ಲಿ ಮತ್ತೆ ಸರಣಿ ಕಳ್ಳತನ ಪ್ರಕರಣ ನಡೆದಿದೆ. ಕೇಶ್ವಾಪುರ, ಮಯೂರಿ ಎಸ್ಟೇಟ್ ಮತ್ತಿತರ ಕಡೆ ಸರಣಿ ಕಳ್ಳತನ ನಡೆದಿದೆ. ರಾತ್ರಿ ಹೊತ್ತು ಖದೀಮರು ರಾಜಾರೋಷವಾಗಿ ಬಂದು ಕಳ್ಳತನ ಮಾಡ್ತಿದ್ದಾರೆ. ಮನೆಗಳಿಗೆ ನುಗ್ಗಿ ಚಿನ್ನ, ಬೆಳ್ಳಿ, ನಗದು ಕದಿಯುತ್ತಿದ್ದಾರೆ. ಯಾರೂ ಇಲ್ಲದ ಮನೆಗಳೇ ಕಳ್ಳರ ಟಾರ್ಗೆಟ್ ಆಗಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಸಮೀಪದ ಮನೆಯಲ್ಲಿಯೂ ಕಳ್ಳತನ ನಡೆದಿದೆ. …

Read More »

ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಬೆಲೆ ಏರಿಕೆ ಖಂಡಿಸಿ ಮಹಿಳಾ ವಿಭಾಗದಿಂದ  ಪ್ರತಿಭಟನೆ

ಧಾರವಾಡ:  ಜಿಲ್ಲಾಧಿಕಾರಿಗಳ ಕಚೇರಿಯ ಮುಂಬಾಗದಲ್ಲಿ ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯ ಬಡಜನರಲ್ಲೂ ಮಧ್ಯಮವರ್ಗದ ಜನರಿಗೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ ಎಂದು ಇಂದಿನ ದಿನಮಾನದಲ್ಲಿ ಸಿಲೆಂಡರ್‌,ಪೆಟ್ರೋಲ್, ಡಿಸೇಲ್ ಹಾಗೂ ದಿನ ಬಳಕೆಯ ದಿನಸಿ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರಿದ್ದು,  ಜನಸಾಮಾನ್ಯರು ತಮ್ಮ ಜೀವನವನ್ನು ನಡೆಸುವುದು ತುಂಬಾ ಚಿಂತಾಜನಕವಾಗಿದೆ, ಆದ್ದರಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಈ ಎಲ್ಲಾ ಬೆಲೆ ಏರಿಕೆಯನ್ನು ಇಳಿಮುಖ ಮಾಡಿ ಆದೇಶ ಹೂರಡಿಸಬೇಕೆಂದು ಒತ್ತಾಯಿಸಿ …

Read More »

ಪ್ರಧಾನಮಂತ್ರಿ  ಮೆಚ್ಚಿಸಲು ಹಾಗೂ ಭ್ರಷ್ಟಾಚಾರ ಮುಚ್ಚಿಡಲು ತೇಪೆ ಹಚ್ಚಿದ ಹು-ಧಾ ಮಹಾ ನಗರ ಪಾಲಿಕೆ

ಹುಬ್ಬಳ್ಳಿ : ಜನೆವರಿ ೧೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಲಿದ್ದು, ಅವರು ಸಂಚರಿಸುವ ಮಾರ್ಗಗಳನ್ನು ಹಾಗೂ ರ್ಯಾಲಿ ನಡೆಸುವ ಮಾರ್ಗಗಳಲ್ಲಿ  ಸ್ಮಾರ್ಟ್ ಸಿಟಿ ಮಾಡಿದ ಕಳಪೆ ಕಾಮಗಾರಿಯನ್ನು ಮುಚ್ಚಿಡಲು ತೆಪೆ ಹಚ್ಚುವ ಕಾರ್ಯವನ್ನು ರಾತ್ರೋ ರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಹು-ಧಾ ಪಾಲಿಕೆ ವಿರೋಧ ಪಕ್ಷದ ನಾಯಕ ದೊರಾಜ್ ಮನ್ನೆಕುಂಟ್ಲಾ  ಆರೋಪಿಸಿದರು. ನಗರದ ಪಾಲಿಕೆಯ ವಿರೋಧ ಪಕ್ಷದ ಕಚೇರಿಯಲ್ಲಿ …

Read More »