Breaking News

ಬೆಂಗಳೂರು

ಸಾವಿರ ‘ಕೋಟಿ’ ಗಳಿದ್ದರೂ ಅದೃಷ್ಟ ಖೋತಾ: ಪರಿಷತ್ ಚುನಾವಣೆಯಲ್ಲಿ ‘ಕೆಜಿಎಫ್ ಬಾಬು’ ಗೆ ಹೀನಾಯ ಸೋಲು!

ಬೆಂಗಳೂರು: ಬೆಂಗಳೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಎಸ್. ಗೋಪಿನಾಥ್ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ, ಸಾವಿರಾರು ಕೋಟಿಯ ಒಡೆಯ ಯೂಸೂಫ್‌ ಶರೀಫ್‌ ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಎಚ್‌.ಎಸ್‌.ಗೋಪಿನಾಥ್, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯೂಸಫ್‌ ಷರೀಫ್‌ ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಎಚ್‌.ಎಸ್‌.ಗೋಪಿನಾಥ್, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯೂಸಫ್‌ ಷರೀಫ್‌ ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ ಕಣದಲ್ಲಿದ್ದರು. ಆದರೆ, ಗೋಪಿನಾಥ್‌ ಮತ್ತು ಯೂಸೂಫ್‌ …

Read More »

ಸಿಎಂ ಬದಲಾವಣೆ ಬಗ್ಗೆ ನಂಗೆ ಗೊತ್ತಿಲ್ಲ ನಾನು ಸಿಎಂ ಆದರೆ ರಾಜ್ಯದ ಇತಿಹಾಸವೇ ಬದಲಾಗುತ್ತೇ: ಬಸವರಾಜ್ ಯತ್ನಾಳ್

ಸುವರ್ಣಸೌಧ (ಬೆಳಗಾವಿ): ರಾಜ್ಯದ ಸಚಿವ ಸಂಪುಟದಲ್ಲಿ ಕೇವಲ ನಾಲ್ಕು ಸ್ಥಾನವಲ್ಲ, ನಿಷ್ಕ್ರಿಯ ಸಚಿವರನ್ನೆಲ್ಲಾ ಬದಲಾವಣೆ ಮಾಡಬೇಕು. ನಾನು ಮುಖ್ಯಮಂತ್ರಿಯಾದರೆ ರಾಜ್ಯದ ಇತಿಹಾಸವೇ ಬದಲಾವಣೆಯಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆಯಾಗುತ್ತದೆಂದು ಹೇಳಿದ್ದೆ. ಪರಿಷತ್ ಫಲಿತಾಂಶ ನಂತರ ಮುಂದಿನ ಬೆಳವಣಿಗೆಯಾಗುತ್ತದೆ. ವಂಶ ಪಾರಂಪರ್ಯ ಬಿಜೆಪಿಯಲ್ಲಿ ನಡೆಯಲ್ಲ. ಕುಟುಂಬದವರೆಲ್ಲಾ ಶಾಸಕ, ಸಂಸದರಾದರೆ ದೇವೇಗೌಡರ ಕುಟುಂಬದ …

Read More »

ಕುವೆಂಪು ಸೊಸೆ, ಕವಿ ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ಇನ್ನಿಲ್ಲ

ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84 ವ) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರು ಕಳೆದ ಮೂರ್ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ರಾಜೇಶ್ವರಿ ಅವರು ಪತಿ ಪೂರ್ಣಚಂದ್ರ ತೇಜಸ್ವಿ ನಿಧನ ಬಳಿಕ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ತೋಟದಲ್ಲಿ ಒಬ್ಬರೇ ವಾಸವಾಗಿದ್ದರು. ಕಳೆದ ಕೆಲ ದಿನದ …

Read More »

ಸಭೆ, ಅಂತ್ಯಕ್ರಿಯೆ, ಮದುವೆಗಳಲ್ಲಿ ಜನಜಂಗುಳಿ ನಿರ್ಭಂಧಿಸಿ : ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ಬೆಂಗಳೂರು : ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗ್ತಿದೆ. ಈ ನಡುವೆ ಹೊಸ ರೂಪಾಂತರಿ ಒಮಿಕ್ರಾನ್‌ ಆತಂಕ ಸೃಷ್ಟಿಸ್ತಿದೆ. ಈಗಲೇ ಹೆಚ್ಚೆತ್ತುಕೊಳ್ಳದಿದ್ರೆ, ಅಪಾಯ ಖಂಡಿತ ಎಂದು ಮನಗೊಂಡಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಎಚ್ಚರಿಸಿದೆ. ದೇಶದಲ್ಲಿ ಕಳೆದ 2 ವಾರಗಳಲ್ಲಿ ಕೋವಿಡ್‌ ಪಾಸಿಟಿವಿಟಿ ಹೆಚ್ಚಳದ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯಕರ್ಶಿ ರಾಜೇಶ್‌ ಭೂಷಣ್‌ ಪತ್ರ ಬರೆದಿದ್ದು, ಕೊರೊನಾ ಕಟ್ಟಿ ಹಾಕಲು ಕಟ್ಟುನಿಟ್ಟಿನ …

Read More »

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಧಾರವಾಡ: ಕಳೆದ 20 ದಿನಗಳಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರುಇಂದು ಆಯಾ ತಹಶೀಲ್ದಾರ ಕಚೇರಿಲ್ಲಿ ಮಸ್ಟರಿಂಗ್ ಕಾರ್ಯ ನಾಳೆ ಮುಂಜಾನೆ 8 ರಿಂದ ಸಂಜೆ 4 ರ ವರೆಗೆ ನಡೆಯಲಿರೋ ಮತದಾನಧಾರವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿರೊ ಮೂರು ಜಿಲ್ಲೆಗಳು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿರೋ ಮತದಾನ ಮತಪೆಟ್ಟಿಗೆಗಳನ್ನು ಪಡೆದುಕೊಂಡು ಮತದಾನ ಕೇಂದ್ರಗಳತ್ತ ಸಾಗಿದ ಸಿಬ್ಬಂದಿಕಚೇರಿಗಳಿಗೆ ತೆರಳುತ್ತಿದ್ದಾರೆ. ಪ್ರತಿ ಬೂತ್‌ಗೆ …

Read More »

ರಾಜ್ಯದಲ್ಲಿ ಸದ್ಯಕ್ಕಿಲ್ಲ ನೈಟ್‌ ಕರ್ಪ್ಯೂ-ವಾರದ ಬಳಿಕ ನಿರ್ಧಾರ-ಸಿಎಂ ಬೊಮ್ಮಾಯಿ

ಬೆಂಗಳೂರು: ಕೋವಿಡ್​ ರೂಪಾಂತರಿ ತಳಿ ಒಮಿಕ್ರಾನ್​ ಕುರಿತು ಯಾರೂ ಕೂಡಾ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸದ್ಯಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ಒಂದು ವಾರದ ಬಳಿಕ ಈ ಕುರಿತು ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಸವರಾಜ​ ಬೊಮ್ಮಾಯಿ ತಿಳಿಸಿದರು. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ, ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ, ಒಂದು ವಾರದ ಬಳಿಕ ನಿರ್ಧಾರ ಮಾಡಲಾಗುವುದು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ …

Read More »

3 ಸಾವಿರ ಪರವಾನಗಿ ಭೂಮಾಪಕರ ಆಯ್ಕೆ ಅಧಿಸೂಚನೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಇತ್ತೀಚಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇದ್ದಂತ 3 ಸಾವಿರ ಪರವಾನಗಿ ಭೂಮಾಪಕರ ಆಯ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೇ ಈಗ ಈ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಈ ಕುರಿತಂತೆ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಹೊಸದಾಗಿ ಪರವಾನಗಿ ಭೂಮಾಪಕರನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ವಿಧಾನ …

Read More »

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯ ಗೌಡ

ಬೆಂಗಳೂರು: ಕಿರುತೆರೆ ನಟಿ ಕಾವ್ಯ ಗೌಡ, ಉದ್ಯಮಿ ಸೋಮಶೇಖರ್ ಜೊತೆ ಸಪ್ತಪದಿ ತುಳಿದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 1ರಂದು ಸೋಮಶೇಖರ್, ಕಾವ್ಯ ಮದುವೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಎರಡೂ ಕುಟುಂಬದವರು, ಆತ್ಮೀಯರು, ಸ್ನೇಹಿತರು, ರಾಜಕೀಯ ಗಣ್ಯರು, ಚಿತ್ರರಂಗದವರು ಪಾಲ್ಗೊಂಡಿದ್ದರು. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಕಾವ್ಯ ಗೌಡ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಸ್ಯಾಂಡಲ್‍ವುಡ್ ಮತ್ತು ಕಿರುತೆರೆ ಅನೇಕ ಕಲಾವಿದರು ಆಗಮಿಸಿನಿ ಕಾವ್ಯಾ, …

Read More »

ಅಪ್ಪು ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಕುಟುಂಬವನ್ನು ಭೇಟಿಯಾಗಿ ಆದಿಚುಂಚನಗಿರಿ ಶ್ರೀಗಳು ಸಾಂತ್ವನ ಹೇಳಿದ್ದಾರೆ. ಇಂದು ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಆಗಮಿಸಿದ ಆದಿಚುಂಚನಗಿರಿ ಶ್ರೀಗಳು ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಕನ್ನಡ ಕಲಾ ಕ್ಷೇತ್ರಕ್ಕೆ ಪುನೀತ್ ರಾಜ್‍ಕುಮಾರ್ ಅವರು ನೀಡಿದ ಕೊಡುಗೆ ಅಪಾರ. ಮೊದೊಲಿನಿಂದಲೂ ರಾಜ್‍ಕುಮಾರ್ ಕುಟುಂಬಕ್ಕೆ ಮತ್ತು ಮಠಕ್ಕೆ ಅವಿನಾಭಾವ ಸಂಬಂಧ ಇದೆ ಎಂದರು. ರಾಜ್‍ಕುಮಾರ್ ಕುಟುಂಬದ ಕುಡಿ …

Read More »
Featured Video Play Icon

ಬಿಜೆಪಿ’ ಸಭೆಯಲ್ಲಿ ಕೈ ಕೈ ಮಿಲಾಯಿಸಿ ಗಲಾಟೆ-ಘಟಾನುಘಟಿಗಳ ಎದುರಲ್ಲೇ ಗಲಾಟೆ ಮಾಡಿಕೊಂಡ ಶಾಸಕ ಹಾಗೂ ಎಂಎಲ್‌ ಸಿ

Read More »