ಹುಬ್ಬಳ್ಳಿ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಮಟ್ಟದ ಹಿರಿಯ ನಾಗರಿಕರ ಸಮಾವೇಶವನ್ನು ಮೇ.8 ರಂದು ಬೆಂಗೇರಿಯ ಸೆಂಟ್ರಲ್ ಮಾರ್ಕೆಟ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಬಿ.ಎ.ಪಾಟೀಲ್ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯದ ನಿವೃತ್ತ ನೌಕರರ ಮತ್ತು ಸಾರ್ವಜನಿಕ ಹಿರಿಯ ನಾಗರಿಕರ ಹಿತರಕ್ಷಣೆ, ಬೇಡಿಕೆ, ಸಮಸ್ಯೆಗಳನ್ನು ಜಂಟಿಯಾಗಿ ಸಂಘಟನೆಗೊಂಡು ಕಳೆದ 15 ವರ್ಷಗಳಿಂದ ಹಿರಿಯ ನಾಗರಿಕರ ಸಮಸ್ಯೆ ಕುರಿತು ಹೋರಾಟ ಮಾಡುತ್ತಲೇ ಬರುತ್ತಿದೆ. ರಾಜ್ಯದಲ್ಲಿ ಸುಮಾರು 70 ಲಕ್ಷ ಹಿರಿಯ ನಾಗರಿಕರಿದ್ದಾರೆ. ಸರ್ಕಾರ ಹಿರಿಯ ನಾಗರಿಕರ ಕಾನೂನು-2007 ರಚಿಸಿ ಹಿರಿಯ ನಾಗರಿಕರ ನೀತಿಯನ್ನು ಬಿಡುಗಡೆ ಮಾಡಿ ಕೆಲವು ಸೌಲಭ್ಯಗಳನ್ನು ನೀಡಿದೆ. ಆದರೆ ಕೆಲವು ಅಧಿಕಾರಗಳ ನಿರ್ಲಕ್ಷ್ಯದಿಂದ ಯಾವ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಎರಡನೇ ಅಧಿವೇಶವನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಅಧಿವೇಶನವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಲಿದ್ದು, ಶಾಸಕ ಜಗದೀಶ್ ಶೆಟ್ಟರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಂಘ ಮುದ್ರಿಸಿದ ಹಿರಿಯ ನಾಗರಿಕರ ಕಾರ್ಯಾಗಾರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಿರಿಯ ನಾಗರಿಕರ ಇಲಾಖೆ ಸಚಿವ ಹಾಲಪ್ಪ ಆಚಾರ ಅವರು ಹಿರಿಯ ನಾಗರಿಕರ ಕಾರ್ಯಾಗಾರ ಉದ್ಘಾಟನೆ ಮಾಡಲಿದ್ದಾರೆ, ಅತಿಥಿಗಳಾಗಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು ಎಂದರು.
ಮಧ್ಯಾಹ್ನ 3 ಕ್ಕೆ ಹಿರಿಯ ನಾಗರಿಕರ ಕಾರ್ಯಾಗಾರ ನಡೆಯಲಿದೆ. ಅಲ್ಲಿ ಹಿರಿಯ ನಾಗರಿಕರ ಬದಲಾದ ಅನುಬಂದ, ಕಾನೂನು ಮತ್ತು ಕಾರ್ಯಾಚರಣೆ, ಹಿರಿಯ ನಾಗರಿಕರಿಗಾಗಿ ಸರ್ಕಾರದ ಸೌಲಭ್ಯಗಳು, ಹಿರಿಯ ನಾಗರಿಕರ ದೌರ್ಜನ್ಯಗಳು ಮತ್ತು ಪರಿಹಾರ ಕುರಿತು ಕಾರ್ಯಾಗಾರ ನಡೆಯಲಿದೆ. ನುರಿತ ನ್ಯಾಯವಾದಿಗಳು, ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದು, ಹಿರಿಯರ ಚರ್ಚೆ ನಡೆದು ಅಭಿಪ್ರಾಯ ಸಂಗ್ರಹ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಎ.ಪಾಟೀಲ್, ಬಿ.ಪಿ.ಗಾಯಕವಾಡ, ಟಿ.ಟಿ.ಪಾಟೀಲ್, ಕೆ.ಪಿ.ಘಂಟಿ, ಕುಂಬಾರ್, ಅರಳಿ, ಸುನಂದಾ ಬೆನ್ನೂರು, ಪಿ.ಬಿ.ಹಿರೇಮಠ, ರಮೇಶ ಹಂಡಗಿ ಸೇರಿದಂತೆ ಮುಂತಾದವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

