ಹುಬ್ಬಳ್ಳಿ: ನಗರದಲ್ಲಿ ಶನಿವಾರ ರಾತ್ರಿ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ದಕ್ಷಿಣ ಉಪ ವಿಭಾಗದಲ್ಲಿ 14 ಚೆಕ್ ಪೋಸ್ಟ್ ಹಾಕಿ ವಾಹನಗಳ ಪರಿಶೀಲನೆ ಮಾಡುವಾಗ ದಾಖಲೆಗಳು ಇಲ್ಲದೆ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್ ಮಾಡಲಾಯಿತು.
ಸದ್ಯ ಈ ಎಲ್ಲ ವಾಹನಗಳ ಪೈಕಿ ಇದೀಗ ವಾಹನಗಳ ಸರಿಯಾದ ದಾಖಲೆಗಳು ಇದ್ದ ವಾಹನಗಳನ್ನು ಬಿಟ್ಟು ಕಳುಹಿಸಿ, ದಾಖಲೆಗಳು ಇಲ್ಲದ ವಾಹನಗಳಿಗೆ 166500 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಇನ್ನು ಕೆಲವು ವಾಹನಗಳ ಮಾಲೀಕರು ಬಾರದ ಹಿನ್ನೆಲೆಯಲ್ಲಿ 5 ಪೊಲೀಸ್ ಠಾಣೆಯಲ್ಲಿ 13 FIR ದಾಖಲು ಮಾಡಿ 28 ಬೈಕ್ ಗಳ ವಿವರವನ್ನು ನ್ಯಾಯಾಲಕ್ಕೆ ಕೊಡಲಾಗಿದೆ.
ಸದ್ಯ ಅವಳಿನಗರದಲ್ಲಿ ಈ ರೀತಿಯಾದ ಕಾರ್ಯಾಚರಣೆ ಪ್ರತಿ ವೀಕೆಂಡ್ ದಿನಗಳಲ್ಲಿ ನಡೆಸಲಾಗುವುದು ಎಂದು ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ. ಹೀಗಾಗಿ ಅವಳಿನಗರದಲ್ಲಿನ ವಾಹನ ಸವಾರರು ತಮ್ಮ ವಾಹನಗಳ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳದೇ ಹೋದಲ್ಲಿ ನಿಮ್ಮ ಮೇಲೆ ದಂಡ ಹಾಕುವ ಪ್ರಮೇಯ ಬರಬಹುದು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

