Breaking News

ಕೃಷಿ ಅಧಿಕಾರಿಗಳ ಸಲಹೆ ಪಡೆದು ಉತ್ತಮ ಬೇಸಾಯ ರೂಡಿಸಿಕೊಳ್ಳಿ : ಸುರಕೋಡ

ಕುಂದಗೋಳ : ಕೃಷಿ ಇಲಾಖೆ ಸವಲತ್ತು ಹಾಗೂ ಕೃಷಿ ಅಧಿಕಾರಿಗಳ ಸಲಹೆ ಪಡೆದು ಉತ್ತಮ ಬೇಸಾಯದ ಕ್ರಮಗಳನ್ನು ರೈತರು ರೂಢಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಮಂಜುಳಾ ಸುರಕೋಡ ಹೇಳಿದರು.

ಅವರು ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದ ಎಲ್.ಡಿ.ಸಿ ಕಂಪನಿ ಮತ್ತು ದೇಶಪಾಂಡೆ ಫೌಂಡೇಶನ್ ನೇತೃತ್ವದಲ್ಲಿ ನಡೆದ ರೈತರು ಸಭೆಯ ನೇತೃತ್ವ ವಹಿಸಿ ಮಾತನಾಡಿ ರೈತರಿಗೆ ಹತ್ತಿ ಬೆಳೆ ಬಗ್ಗೆ ಸಲಹೆ ನೀಡಿದರು.

ದೇಶಪಾಂಡೆ ಫೌಂಡೇಶನ್ ಮತ್ತು ಎಲ್.ಡಿ.ಸಿ ಕೃಷಿ ಇಲಾಖೆ ಸಹಯೋಗದಲ್ಲಿ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಹತ್ತಿ ಬೆಳೆಯಲ್ಲಿನ ಸುಧಾರಿತ ಬೇಸಾಯದ ಕ್ರಮಗಳು ಮತ್ತು ಕಾಯಿ ಕೊರಕ ರೋಗದ ಬಗ್ಗೆ ಮಾಹಿತಿಯನ್ನು ಖಾಸಗಿ ಕಂಪನಿ ವತಿಯಿಂದ ನೀಡಲಾಯಿತು.

ಈ ವೇಳೆ ರೈತರಿಗೆ ರೋಗದ ಹತೋಟಿ ಹಾಗೂ ಹತ್ತಿ ಬೆಳೆಗಳಲ್ಲಿ ಮೋಹಕ ಬಲೆ ಅಳವಡಿಸಿ ರೋಗದಿಂದ ಬೆಳೆಗಳನ್ನು ಮುಕ್ತಗೊಳಿಸೂಪ ಬಗ್ಗೆ ತಿಳಿಸಿ, ರೈತರಿಗೆ ಉಚಿತವಾಗಿ ಮೋಹಕ ಬಲೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇಶಪಾಂಡೆ ಫೌಂಡೇಶನ್ ಕ್ಲಸ್ಟರ್ ಮ್ಯಾನೇಜ‌ರ್ ಗುರುನಾಥ್ ಬಿರಾದಾರ, ಗಿರೀಶ್ ಸರ್ ಹಾಗೂ ರೈತಾಪಿ ಜನರು ಉಪಸ್ಥಿತರಿದ್ದರು.

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *