ಹುಬ್ಬಳ್ಳಿ : ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನದಿಂದ ಕೆಂಪು ಗಣಪತಿ ಉತ್ಸವವು ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ.
ಎಸ್ ರಾಮಚಂದ್ರ ಕುಲಕರ್ಣಿ, ಮೋಹನರಾವ ಕುಲಕರ್ಣಿ, ವಿನಾಯಕ ಕುಲಕರ್ಣಿ, ನಾರಾಯಣರಾವ ಕುಲಕರ್ಣಿ, ಸೋಮರಾವ ಕುಲಕರ್ಣಿ, ವಿಶ್ವನಾಥ ವಾಸುದೇವ ಕುಲಕರ್ಣಿ ಹಾಗೂ ಮಾಲತೇಶ ಕುಲಕರ್ಣಿ ಅವರ ಮನೆಗಳಲ್ಲಿ ಅದ್ದೂರಿಯಾಗಿ ಉತ್ಸವ ಆಚರಿಸಲಾಗುತ್ತಿದೆ.
ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಗಳಲ್ಲಿ ಆಯುಧಗಳನ್ನು ಹೊಂದಿರುವುದು ಇಲ್ಲಿನ ಕೆಂಪು ಗಣಪತಿಯ ವಿಶೇಷತೆ. ಮೈಸೂರು ಹಾಗೂ ಇಂದೋರ್‌ನ ಅರಮನೆಗಳಲ್ಲಿ ಮಾತ್ರ ಇಂತಹ ಗಣಪತಿಯನ್ನು ಕಾಣಬಹುದಾಗಿದೆ.
ಉತ್ಸವದ ಮೊದಲ ದಿನ ಚಂದ್ರೋದಯಕ್ಕೂ ಮುನ್ನ ಏಳು ಮನೆಗಳ ಗಣಪತಿಗಳನ್ನು ಮೆರವಣಿಗೆಯಲ್ಲಿ ತಂದು, ಪ್ರತಿಷ್ಠಾಪಿಸಲಾಗುತ್ತದೆ. ಅಂದು ರಾತ್ರಿ 8.30ರ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ನಂತರದ ಎರಡು ದಿನ ಭಕ್ತರಿಗೆ ಎಲ್ಲ ಮನೆಗಳಲ್ಲಿ ಉಚಿತ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಇರಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

