ಕಲಬುರಗಿ: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಪತ್ನಿ, ಪ್ರಿಯಕರ ಸೇರಿದಂತೆ ನಾಲ್ವರಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹2.39 ಲಕ್ಷ ದಂಡ ವಿಧಿಸಿದೆ. ಸುನೀತಾ ಗೋಟೂರ, ಮಲ್ಲಪ್ಪ ಪೂಜಾರಿ, ಸಾಬಣ್ಣ ಪೂಜಾರಿ ಹಾಗೂ ಬಸಪ್ಪ ಗೋಟೂರ ಶಿಕ್ಷೆಗೆ ಒಳಗಾದವರು. ಚಿಂಚೋಳಿ ತಾಲ್ಲೂಕಿನ ಕುಡ್ಡಳ್ಳಿ ಗ್ರಾಮದಲ್ಲಿ 2022ರ ಆಗಸ್ಟ್ 5ರಂದು ರಾಮಪ್ಪ ಗೋಟೂರ ಕೊಲೆಯಾಗಿದ್ದರು. ಪತ್ನಿ ಸುನೀತಾ ಹಾಗೂ ಪ್ರಿಯಕರ ಮಲ್ಲಪ್ಪ ಸೇರಿ ಇತರರ ನೆರವಿನಿಂದ ರಾಮಪ್ಪನನ್ನು ಮನೆಯಲ್ಲಿ ಮಲಗಿದ್ದಾಗ ಕೊಲೆ ಮಾಡಿಸಿದ್ದರು. ಮಕ್ಕಳನ್ನು ಮತ್ತೊಂದು ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಪಿಐ ಜಗದೀಶ ಕೆ.ಜಿ. ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸೇಡಂ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿರಾಜುದ್ದೀನ್ ಎ. ಅವರು ನಾಲ್ವರಿಗೆ ಶಿಕ್ಷೆ ವಿಧಿಸಿದ್ದು, ದಂಡದ ಮೊತ್ತದಲ್ಲಿ ತಲಾ ₹1 ಲಕ್ಷವನ್ನು ರಾಮಪ್ಪನ ಇಬ್ಬರು ಮಕ್ಕಳಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

