ಬೆಂಗಳೂರು : ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ರಾಜ್ಯಾತಿಥ್ಯ ವ್ಯವಸ್ಥೆಯ ಫೋಟೋ ವಿಡಿಯೋ ವೈರಲ್ ಸಂಬಂಧ 7 ಜನ ಅಧಿಕಾರಿಗಳ ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.7 ಜನ ಅಧಿಕಾರಿಗಳನ್ನ ತಡ ರಾತ್ರಿ 1ಗಂಟೆಯವರೆಗೂ ವಿಚಾರಣೆ ಮಾಡಲಾಗಿದೆ ಹಾಗೇ ಜೈಲು ಸೂಪರ್ಡೆಂಟ್ ನ ಸಹ ಶಿಫ್ಟ್ ಮಾಡ್ತೀವಿ ಎಂದಿದ್ದಾರೆ.
ಈಗಾಗಲೇ ಈ ಘಟನೆ ಸಂಬಂಧ ವರದಿ ಕೇಳಿದ್ದೇನೆ. ಇದು ಹೇಗೆ ಆಯ್ತು ಅಂತ 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಮೇಲೆ ಕ್ರಮ ಕೈಗೊಂಡಿದ್ದೇವೆ. ಇಂತಹ ಘಟನೆ ನಡೆಯಬಾರದು ಪದೇ ಪದೇ ಈ ರೀತಿ ಆಗಬಾರದು, ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ರು ಸಹ ಅವರವಿರುದ್ಧ ತನಿಖೆ ಮಾಡಿ ಕ್ರಮ ತೆಗೆದುಕೊಳ್ತಿವಿ.
ಎಲ್ಲಾ ಜೈಲ್ ಗಳಲ್ಲಿ ಜಾಮರ್, ಕ್ಯಾಮರಾ ಹಾಕಿದ್ರು ಹೀಗೆ ಆಗೋದು ಸರಿಯಲ್ಲ, ತನಿಖೆ ಬಳಿಕ ಫೋನ್ ಎಲ್ಲಿಂದ ಬಂತೂ, ಸಿಗರೇಟ್ ಹೇಗೆ ಬಂತು ತನಿಖೆ ಮಾಡಿ ಕ್ರಮ ತೆಗೆದುಕೊಳ್ತಿವಿ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

