Breaking News

ಆ್ಯಪಲ್‌ಗೆ ಚೀಫ್ ಫೈನಾನ್ಸಿಯಲ್ ಆಫೀಸರ್ ಆಗಿ ಭಾರತ ಮೂಲದ ವ್ಯಕ್ತಿ ನೇಮಕ

ಕ್ಯಾಲಿಫೋರ್ನಿಯಾ: ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್‌ಫೋನ್ ಕಂಪನಿಯಾದ ಆ್ಯಪಲ್‌ಗೆ ಚೀಫ್ ಫೈನಾನ್ಸಿಯಲ್ ಆಫೀಸರ್ ಆಗಿ ಭಾರತ ಮೂಲದ ಕೇವನ್ ಪರೇಖ್ ನೇಮಕವಾಗಿದ್ದಾರೆ.

ಲ್ಯೂಕಾ ಮೇಸ್ಟ್ರಿ ಅವರ ಸ್ಥಾನವನ್ನು ಪರೇಖ್ ತುಂಬಲಿದ್ದಾರೆ. ಲೂಕಾ ಅವರು ಸಿಎಫ್‌ಒ ಸ್ಥಾನದಿಂದ ಹೊರಹೋಗುತ್ತಾರಾದರೂ ಆ್ಯಪಲ್ ಕಂಪನಿಯಲ್ಲಿ ಅವರು ಬೇರೆ ಜವಾಬ್ದಾರಿಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕೇವನ್ ಪರೇಖ್ 10ಕ್ಕೂ ಹೆಚ್ಚು ವರ್ಷಗಳಿಂದ ಆ್ಯಪಲ್ ಕಂಪನಿಯಲ್ಲೇ ಕೆಲಸ ಮಾಡಿದ್ದಾರೆ. ಆ್ಯಪಲ್ ಸೇರುವ ಮುನ್ನ ಅವರು ಥಾಯ್ಸನ್ ರಾಯ್ಸರ್ಸ್ ಮತ್ತು ಜನರಲ್ ಮೋಟಾರ್ಸ್ ಸಂಸ್ಥೆಗಳಲ್ಲಿ ಹಿರಿಯ ಹುದ್ದೆ ನಿಭಾಯಿಸಿದ್ದರು. ಸದ್ಯ ಅವರು ಆ್ಯಪಲ್ ಕಂಪನಿ ಫೈನಾನ್ಸಿಯಲ್ ಪ್ಲಾನಿಂಗ್ ಅಂಡ್ ಅನಾಲಿಸಿಸ್ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡಿದ್ದಾರೆ. ಅವರನ್ನು ಸಿಎಫ್‌ಒ ಆಗಿ ನೇಮಕ ಮಾಡುವುದು ಕೆಲ ಕಾಲದ ಹಿಂದೆಯೇ ನಿಶ್ಚಿತವಾಗಿತ್ತು ಎಂದೂ ಹೇಳಲಾಗುತ್ತಿದೆ.

ಪ್ರಸಕ್ತ ಸಿಎಫ್‌ಒ ಆಗಿರುವ ಲೂಕಾ ಮೇಸ್ಟ್ರಿ ಅವರು 2024ರ ಡಿಸೆಂಬರ್ 31ರವರೆಗೂ ಅದೇ ಸ್ಥಾನದಲ್ಲಿ ಮುಂದುವರಿದು ಆ ಬಳಿಕ ಹುದ್ದೆಯನ್ನು ಕೇವನ್ ಪರೇಖ್ ಅವರಿಗೆ ಬಿಟ್ಟು ಕೊಡಲಿದ್ದಾರೆ. ಆ ಬಳಿಕ ಇನ್ಸಾರ್ಮೇಶನ್ ಸಿಸ್ಟಮ್ಸ್ ಮತ್ತ ಟೆಕ್ನಾಲಜಿ, ಇನ್ನಾರ್ಮೇಶನ್ ಸೆಕ್ಯೂರಿಟಿ, ರಿಯಲ್ ಎಸ್ಟೇಟ್ ಡೆವಲಪ್ಟೆಂಟ್ ಸೇರಿದಂತೆ ವಿವಿಧ ಕಾರ್ಪೊರೇಟ್ ಸರ್ವಿಸ್ ಟೀಮ್‌ಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಲೂಕಾ ಅವರು ಸಿಎಫ್‌ಒ ಆಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *