Breaking News

ಬಜೆಟ್ 2022ರ ಪ್ರಮುಖ ಹೈಲೇಟ್ಸ್ ಇಲ್ಲಿವೆ ನೋಡಿ


ನವದೆಹಲಿ :  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಹೊಸ ವರ್ಷದ 2022  ಬಜೆಟ್ ಮಂಡಿಸಿದ್ದಾರೆ. ಕೆಲವೊಂದು ಪ್ರಮುಖ ತೀರ್ಮಾನ ಗಳನ್ನು ತಗೆದುಕೊಳ್ಳಲಾಗಿದೆ.

  ಬಜೆಟ್ 2022 ಪ್ರಮುಖ ನಿರ್ಧಾರ ಇಲ್ಲಿದೆ ನೋಡಿ

* ಬಜೆಟ್‌ ನಲ್ಲಿ ಮಧ್ಯಮ ವರ್ಗದವರು, ರೈತರು, ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು, ಬಡವರ ಉನ್ನತಿಗೆ ಬಜೆಟ್‌ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ.

* ಈ ಬಾರಿ ಆದಾಯ ತೆರಿಗೆ ಮೇಲಿನ ಯಾವುದೇ ಬದಲಾವಣೆ ಇಲ್ಲ. ಸಹಕಾರಿ ಮತ್ತು ವೈಯಕ್ತಿಕ ಆದಾಯ ತೆರಿಗೆ ದರಗಳೂ ಬದಲಾಗದೆ ಉಳಿದಿವೆ.

* ಈ ಸಾಲಿನ ಬಜೆಟ್‌ ಗಾತ್ರ 39.5 ಲಕ್ಷ ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7.4ರಷ್ಟು ಹೆಚ್ಚಿದೆ. 2021ರ ಹಣಕಾಸು ವರ್ಷದ ಬಜೆಟ್‌ ಗಾತ್ರ 35.1 ಲಕ್ಷ ಕೋಟಿ ಇತ್ತು. 2020ರಲ್ಲಿ ಬಜೆಟ್‌ ಗಾತ್ರ 37.7 ಲಕ್ಷ ಕೋಟಿ ರೂ. ಇತ್ತು.

* ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳು ಮತ್ತು 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ಸೃಷ್ಟಿಸುವ ಸಾಮರ್ಥ್ಯದೊಂದಿಗೆ ಆತ್ಮ ನಿರ್ಭರ್‌ ಭಾರತ್‌ ಸಾಧಿಸಲು ಪ್ರೊಡಕ್ಷನ್‌ ಲಿಂಕ್ಡ್‌ ಇನ್ಸೆಂಟಿವ್‌ (ಪಿಐಎಲ್‌) ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಹೇಳಿದ್ದಾರೆ.

* ವರ್ಜುವಲ್‌ ಡಿಜಿಟಲ್‌ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ಡಿಜಿಟಲ್‌ ರುಪಿಯನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಬ್ಲಾಕ್‌ ಚೈನ್‌ ಮತ್ತು ಇತರೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್‌ ರುಪಿಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *