ಪಂಜಾಬ್: 2002ರಲ್ಲಿ ಸುಖ್ಪಾಲ್ ಸಿಂಗ್ ಎಂಬ ವ್ಯಕ್ತಿ ಜಪಾನ್ ಮೂಲದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಬಹು ಬೇಗನೆ ಆಕೆಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಎಲ್ಲವೂ ಅಂದುಕೊಂಡಂತೆ ನಡೆಯದ ಹಿನ್ನಲೆ ಸುಖ್ಪಾಲ್ ಮತ್ತು ಅವರ ಪತ್ನಿ ಒಪ್ಪಂದದ ಮೇರೆಗೆ ಪರಸ್ಪರ ದೂರವಾದರು. ತಂದೆ- ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ 2 ವರ್ಷದ ಮಗ ತನ್ನ ಹೆತ್ತವರಿಂದ ಅನಾಥನಾಗಿ, ಎಲ್ಲೋ ದೂರದಲ್ಲಿ ಬೆಳೆದು ಇಂದು 19 ವರ್ಷಗಳ ನಂತರ ತನ್ನ ತಂದೆಯನ್ನು ಸೇರಿದ್ದು ಇದೀಗ ನೋಡುಗರ ಕಣ್ಣನ್ನು ಒದ್ದೆ ಮಾಡಿದೆ.
ಮಗ ಮತ್ತು ಪತ್ನಿ ಜತೆ ಸಂಪರ್ಕ ಕಳೆದುಕೊಂಡ ಸುಖ್ಪಾಲ್ ಪಂಜಾಬ್ನ ಅಮೃತ್ರದಲ್ಲಿ ಉಳಿದುಕೊಂಡರು. ಅಂದಿನಿಂದ ಒಂದು ದಿನ ಕೂಡ ಮಗನನ್ನು ತಂದೆ ಕಾಣಲಿಲ್ಲ, ಪುತ್ರ ಅಪ್ಪನನ್ನು ನೋಡಲಿಲ್ಲ. ಜಪಾನ್ನ ಟೋಕಿಯೋದಲ್ಲಿ ಜನಿಸಿದ ರಿನ್ ಟಕಾಹಟಾ, ಜನ್ಮ ಕೊಟ್ಟ ತಂದೆಯ ಮುಖ ನೋಡದೆ ಅವರ ಅನುಪಸ್ಥಿತಿಯಲ್ಲೇ ಬೆಳೆದರು. ಬೆಳೆದು ದೊಡ್ಡವನಾದ ರಿನ್, ಈಗಲಾದರೂ ನನ್ನಪ್ಪನ ಮುಖ ನೋಡುವ ಸಮಯ ಬಂದಿದೆ ಎಂದು ದೃಢವಾಗಿ ನಿರ್ಧರಿಸಿ ಭಾರತಕ್ಕೆ ಪ್ರಯಾಣಿಸಿದ್ದು, ಕಡೆಗೂ 19 ವರ್ಷಗಳ ನಂತರ ತಂದೆ ಸುಖ್ಪಾಲ್ರನ್ನು ಭೇಟಿಯಾಗಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

