Breaking News

ಆಂಬ್ಯುಲೆನ್ಸ್ ಒಳಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಕುಂದಗೋಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಒಳಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಅಕ್ಕಮಹಾದೇವಿ ಗೋಡಿ ಎಂಬುವವರಿಗೆ ಇಂದು ಬೆಳಿಗ್ಗೆ 3 ಗಂಟೆ 50 ನಿಮಿಷಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬಸ್ಥರು ಕುಂದಗೋಳ ತಾಲೂಕು ಆಸ್ಪತ್ರೆಯ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ದೇವನೂರು ಗ್ರಾಮಕ್ಕೆ ಆಗಮಿಸಿದ ಆಂಬ್ಯಲೆನ್ಸ್‌ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆ ತರುವಾಗ ಹೆರಿಗೆ ನೋವು ಹೆಚ್ಚಾಗಿ ದೇವನೂರು ಕುಂದಗೋಳ ಮಾರ್ಗದ ಮಧ್ಯೆ ಮಹಿಳೆ ಆಂಬ್ಯುಲೆನ್ಸ್‌ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಆಂಬ್ಯುಲೆನ್ಸ್‌ ನರ್ಸಿಂಗ್ ಆಫೀಸರ್ ಪರಶುರಾಮ್ ಚಂದಾವರಿ ಹೆರಿಗೆ ಸಮಯ ಸೂಕ್ತ ಪ್ರಜ್ಞೆವಹಿಸಿ ತಾಯಿ ಮಕ್ಕಳ ಸುರಕ್ಷತೆಯಿಂದ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್‌ ಚಾಲಕ ಸೋಮಪ್ಪ ಆಶಾ ಕಾರ್ಯಕರ್ತೆ ಶಾಂತಾ ಕಮಡೊಳ್ಳಿ ಅಗತ್ಯ ಸಹಾಯ ನೀಡಿದ್ದಾರೆ. ಹೆರಿಗೆ ಬಳಿಕ ಕುಂದಗೋಳ ತಾಲೂಕು ಆಸ್ಪತ್ರೆಗೆ ಆಗಮಿಸಿದ ತಾಯಿ, ಮಕ್ಕಳ ಆರೋಗ್ಯ ತಪಾಸಣೆ ಮಾಡಿದ ವೈದ್ಯ ಗಿರೀಶ್ ಮರಡ್ಡಿ ಆರೋಗ್ಯವಾಗಿದ್ದಾರೆ ತಿಳಿಸಿದ್ದಾರೆ.

Share News

About Shaikh BigTv

Check Also

ಅಡುಗೆ ರುಚಿಯಾಗಿಲ್ಲವೆಂದು ಕಿರಿಕ್, ಪೇಂಟರ್ ಕೈಯಿಂದಲೇ ಕಾರ್ಪೆಂಟರ್ ಭೀಕರ ಕೊಲೆ!

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚೇನಹಳ್ಳಿಯಲ್ಲಿ ಅಡುಗೆ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾರ್ಪೆಂಟರ್‌ವೊಬ್ಬರನ್ನು ಪೇಂಟರ್ …

Leave a Reply

Your email address will not be published. Required fields are marked *