ನವಲಗುಂದ: ನಿವೃತ್ತ ನೌಕರರ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರಾದ ಎನ್.ಎನ್.ಹಾಲಿಗೇರಿ 7 ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯವಾಗಿರುವ ನ್ಯೂನತೆಗಳನ್ನು ಸರಿಪಡಿಸಿ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಪರಿವರ್ತಿತ ಪಿಂಚಣೆ, ನಿವೃತ್ತಿ ಅಥವಾ ಮರಣ ಉಪಧಾನ ಮತ್ತು ಗಳಿಕೆ ರಜೆ ಸೌಲಭ್ಯವನ್ನು ನೀಡಬೇಕೆಂದು ಹೇಳಿದರು.
ನಿವೃತ್ತಿ ನೌಕರರನ್ನು ಸರಕಾರ ಕಡೇಗಣಿಸಬಾರದು ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಬೇಕೆಂದು ಒತ್ತಾಯಿಸಿ ನಿವೃತ್ತಿ ನೌಕರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ ನೌಕರರಾದ ಬಿ.ಬಿ.ಹೊನ್ನಕುದರಿ, ಎಸ್.ಬಿ.ಬಿಟ್ಟಣ್ಣವರ, ಎಮ್.ಎಚ್.ಸಾಯಿಗೋಳ, ಜಿ.ಜಿ.ಕುರಿ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

