ಬೈಕ್ ಕಳ್ಳರನ್ನು ಬಂಧಿಸಲು ಹೋದಾಗ ಎಎಸ್ಐ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಬೈಕ್ ಕಳ್ಳರ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟುವಲ್ಲಿ ಬೆಂಗಳೂರು ಹೊರವಲಯ ಸೂರ್ಯಸಿಟಿ ಪೋಲಿಸರು ಯಶಸ್ವಿಯಾಗಿದ್ದಾರೆ,ಹೌದು ಕಳೆದ ಏಪ್ರಿಲ್ 19 ನೇ ತಾರೀಖಿನಂದು ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ 7 ರ ಚಂದಾಪುರದ ಕೀರ್ತನ ಹೋಟೆಲ್ ಬಳಿ ನಾಲ್ಕು ಜನ ಬೈಕ್ ಕಳ್ಳರ ಗ್ಯಾಂಗ್ ಒಂದು ಬೈಕ್ ಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಸೂರ್ಯಸಿಟಿ ಪೋಲಿಸ್ ಠಾಣೆಯ ಎಎಸ್ಐ ಶಿವಲಿಂಗ ನಾಯ್ಕ್ ಕಳ್ಳರನ್ನು ಹಿಡಿಯಲು ಹೋದ ಸಂಧರ್ಭದಲ್ಲಿ ಮಾರಕಾಸ್ತ್ರಗಳಿಂದ ಅವರ ತಲೆ ಭಾಗಕ್ಕೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಕಳ್ಳರಿಗೆ ಬಲೆ ಬಿಸಿದ ಸೂರ್ಯಸಿಟಿ ಪೋಲಿಸರು ಬೆಂಗಳೂರಿನ ಕೆಜಿ ಹಳ್ಳಿ ಮೂಲದ ಸಲ್ಮಾನ್,ಯಾರಬ್,ಹಾಗು ಅರ್ಫತ್ ಅಹಮ್ಮದ್ ಎಂಬಾ ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಇನ್ನು ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಟೂಲ್ಸ್ ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





