Breaking News

ವಾಹನ‌ ಚಲಾವಣೆ ವೇಳೆ ಪೋಲಿಸಗೆ ಹೃದಯಾಘಾತ : ಸ್ಥಳದಲೇ ನಿಧನ

ಧಾರವಾಡ: ಗದಗ ಸಶಸ್ತ್ರ ಮೀಸಲು ಪಡೆಯ ವಾಹನ ಚಾಲಕನಾಗಿದ್ದ ಬಸವರಾಜ ವಿಠಲಾಪುರ ಎಂಬುವವರೇ ಹೃದಯಾಘಾತದಿಂದ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಧಾರವಾಡ ದಲ್ಲಿ ನಡೆದಿದೆ.

ವಾಹನ ಚಾಲನೆ ಮಾಡುವಾಗಲೇ ಪೊಲೀಸ್ ಸಿಬ್ಬಂದಿಗೆ ಹೃದಯಾಘಾತವಾಗಿದೆ. ಗದಗನಿಂದ ಕೈದಿಯೊಬ್ಬನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಬಿಡಲು ಬಂದಿದ್ದ ಸಂದರ್ಭದಲ್ಲಿ ಧಾರವಾಡದ ಜಿಲ್ಲಾ ನ್ಯಾಯಾಲಯದ ಬಳಿ ಬಸವರಾಜ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಬಸವರಾಜ ತಮ್ಮ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸುತ್ತಿದ್ದಂತೆಯೇ ತೀವ್ರ ಹೃದಯಾಘಾತವಾಗಿ ಅವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಧಾರವಾಡ ಉಪನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Share News

About Shaikh BigTv

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *