Breaking News

ಅಫಘಾನಿಸ್ತಾನದಲ್ಲಿ ಜಾರಿಯಾದ ತಾಲಿಬಾನ್ ಆಡಳಿತ

ಕಾಬೂಲ್: ಇಸ್ಲಾಮಿಕ್ ಸಮಾಜಕ್ಕೆ ಸಂಬಂಧಿಸಿ ಹೊಸ ನೈತಿಕತೆಯ ಕಾನೂನನ್ನು ಜಾರಿಗೊಳಿಸುವಂತೆ ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅಫ್ಘಾನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತಾಲಿಬಾನ್ ಅಧಿಕಾರಿಗಳು ಈ ಸಂಬಂಧ ಹಲವು ಕಾನೂನನ್ನು ಘೋಷಿಸಿದ್ದು, ಇದು ಒಟ್ಟೂ 35 ನಿಯಮಗಳನ್ನು ಒಳಗೊಂಡಿದೆ. 2021 ರಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ಬಳಿಕ ಈ ಕ್ರಮಗಳನ್ನು ಜಾರಿಗೊಳಿಸಲಾಗಿದೆ, ಅವರ ಈ ಕ್ರಮಗಳು ಹಲವು ಸಮುದಾಯ ಮತ್ತು ಗುಂಪುಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸ ಕಾನೂನಿನ ಪ್ರಕಾರ, ಮಹಿಳೆಯರು ಸಾರ್ವಜನಿಕವಾಗಿ ಧ್ವನಿ ಎತ್ತಬಾರದು ಮತ್ತು ಅವರು ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಹಾಗೂ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಪುರುಷರು ಮೊಣಕಾಲಿನ ಮೇಲೆ ಶಾರ್ಟ್ಸ್ ಧರಿಸುವಂತಿಲ್ಲ. ಗಡ್ಡವನ್ನು ಟ್ರಿಮ್ ಮಾಡಬಾರದೆಂದು ಸೂಚಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಗೀತವನ್ನು ನುಡಿಸುವಂತಿಲ್ಲ. ಮತ್ತು ಮುಸ್ಲಿಮೇತರ ರಜಾದಿನಗಳನ್ನು ನಿಷೇಧಿಸಲಾಗಿದೆ.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *