Breaking News

ಗಾಂಜಾ ಪತ್ತೆ ಕಾರ್ಯಾಚರಣೆ: ಇಬ್ಬರ ಬಂಧನ

ಮೈಸೂರು: ಮಂಡಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮೂರು ಮನೆಗೆ ದಾಳಿ ನಡೆಸಿ, ಗಾಂಜಾ ಶೇಖರಿಸಿ ಇಟ್ಟಿದ್ದ ಇಬ್ಬರನ್ನು ಬಂಧಿಸಿದ್ದು, ಅವರಿಂದ 2 ಕೆ.ಜಿ ಗಾಂಜಾ, ₹ 7.30 ಲಕ್ಷ ನಗದು, 10 ತಲವಾರ್ ವಶಕ್ಕೆ ಪಡೆದಿದ್ದಾರೆ.ಫಿರ್ದೋಜ್‌ ಹಾಗೂ ರೋಶನ್‌ ಬೇಗ್‌ ಬಂಧಿತ ಆರೋಪಿಗಳು.ಗುಪ್ತಚರ ಮಾಹಿತಿ ಆಧರಿಸಿ ಗಾಂಜಾ ಶೇಖರಿಸಿ ಇಟ್ಟಿದ್ದ ಮೂರು ಮನೆಗಳಿಗೆ ದಾಳಿ ನಡೆಸಲಾಗಿದೆ. ನರಸಿಂಹರಾಜ ಎಸಿಪಿ ಮ್ಯಾಥ್ಯೂ ಥಾಮಸ್‌ ಹಾಗೂ ಮಂಡಿ ಠಾಣಾ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ದಾಳಿ ನಡೆಸಿದಾಗ ದೊರಕಿದ ಗಾಂಜಾ, ನಗದು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *