Breaking News

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಸೆ.7 ರವರೆಗೆ ಭಾರೀ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಹವಾಮಾನ ವೈಪರಿತ್ಯವು ತೀವ್ರಗೊಂಡು ವಾಯುಭಾರ ಕುಸಿತವಾಗಿದ್ದು ತೆಲಂಗಾಣದ ಮೇಲೆ ಪ್ರಭಾವ ಬೀರಿದೆ. ಇದರ ಅಬ್ಬರದಿಂದಾಗಿ ಕರ್ನಾಟಕದ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಸಹ ಮಹಾರಾಷ್ಟ್ರ ದಕ್ಷಿಣಕ್ಕೆ 90 ಕಿಮೀ, ರಾಮಗುಂಡಂನಿಂದ 130 ಕಿಮೀ ಉತ್ತರ ಈಶಾನ್ಯಕ್ಕೆ ತೆಲಂಗಾಣ ಮತ್ತು ವಾರ್ಧಾದಿಂದ 170 ಕಿಮೀ ಆಗ್ನೇಯಕ್ಕೆ ವಾಯುಭಾರ ಕುಸಿತದ ಪ್ರಭಾವ ಇದೆ. ಗಾಳಿಯು ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿಮೀ ಎತ್ತರದಲ್ಲಿದೆ. ಇದರ ಸುಳಿಗಾಳಿಯು ಸುತ್ತಲಿನ ಪ್ರದೇಶಗಳ ಮೇಲೆ ಬೀಸುತ್ತಿದೆ. ಒಟ್ಟಾರೆ ಈ ವೈಪರಿತ್ಯ ಪ್ರಭಾದಿಂದಾಗಿ ಆಂಧ್ರ ಪ್ರದೇಶ, ಓಡಿಶಾ, ತೆಲಂಗಾಣದಲ್ಲಿ ಅತ್ಯಧಿಕ ಮಳೆ, ಪ್ರವಾಹ ಸ್ಥಿತಿ ಉಂಟಾಗಿದೆ. ಸದ್ಯ ಕರ್ನಾಟಕದ ಕರಾವಳಿಗೆ ಮುಂದಿನ ಐದು ದಿನಗಳು ಭಾರೀ ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *