ಮಂಡ್ಯ: ಜಿಲ್ಲೆಯ ತೆಂಡೇಕೆರೆ ಗ್ರಾಮದಲ್ಲಿ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣ ತೆಂಡೇಕೆರೆಜಿಲ್ಲಾ ಪಂಚಾಯತಿ ಕೃಷಿ ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಮಾತನಾಡಿ, ರೈತರು ವೈಜ್ಞಾನಿಕವಾಗಿ ಬೇಸಾಯ ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯಬೇಕು.ಏಕ ಬೆಳೆ ಪದ್ಧತಿಯನ್ನು ಅನುಸರಿಸದೇ ಮಿಶ್ರಬೆಳೆ ಪದ್ದತಿಯನ್ನು ಅನುಸರಿಸಿ ಹೆಚ್ಚಿನ ಲಾಭಗಳಿಸುವ ಮೂಲಕ ಕೃಷಿಯನ್ನು ಲಾಭದಾಯಕ ಉಧ್ಯಮವನ್ನಾಗಿಸಿಕೊಳ್ಳಬೇಕು ಎಂದು ಮಂಜು ಕರೆ ನೀಡಿದರು.ತಾ.ಪಂ ಸದಸ್ಯೆ ಸುಶೀಲಮ್ಮ, ತೆಂಡೇಕೆರೆ ಗ್ರಾ.ಪಂ ಅಧ್ಯಕ್ಷೆ ಜಯಮ್ಮ, ಎಪಿಎಂಸಿ ಅಧ್ಯಕ್ಷ ನಾಗರಾಜೇಗೌಡ, ತಾ.ಪಂ ಸ್ಥಾಯಿಸಮಿತಿ ಮಾಜಿಅಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಟಿ.ಎಸ್.ಮಂಜುನಾಥ್, ಕೃಷಿ ಅಧಿಕಾರಿಗಳಾದ ಜಯಶಂಕರ ಆರಾಧ್ಯ, ಎಸ್.ಕೆ.ಸತೀಶ್ ಚಂದ್ರ, ಶ್ರೀಧರ್, ಗ್ರಾ.ಪಂ ಸದಸ್ಯರಾದ ರಮೇಶ್, ಯಶೋ ಜಿಲ್ಲೆಧರ, ಜಿ.ಪಂ ಮಾಜಿಸದಸ್ಯೆ ನಾಗರತ್ನಮ್ಮಸುಬ್ಬಣ್ಣ ಸೇರಿದಂತೆ ನೂರಾರು ಮಹಿಳೆಯರು ಕೃಷಿ ಅಭಿಯಾನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





