Breaking News

ಗುರುಗಳನ್ನು ನೆನೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ ; ಮಾಬುಸಾಬ ಯರಗುಪ್ಪಿ ಅಭಿಪ್ರಾಯ

ನವಲಗುಂದ: ಅಕ್ಷರ ಕಲಿಸಿದ ಗುರುವನ ಸ್ಥಾನ ದೊಡ್ಡಡಿದ್ದು ಗುರುಗಳನ್ನು ನೆನೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಗುರು ಎನ್ನುವ ಎರಡು ಅಕ್ಷರದಲ್ಲಿ ಅದ್ಭುತವಾದ ಶಕ್ತಿ ಅಡಗಿದ್ದು, ಪುರಂದರ ದಾಸರು ಹೇಳಿದ ಹಾಗೆ ಗುರುವಿನ ಗುಲಾಮನಾಗಿ ವಿದ್ಯೆಯನ್ನು ಕಲಿಯಬೇಕು, ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಉನ್ನತ ಸಾಧನೆ ಸಾಧ್ಯ ಎಂದರು.

ಮುಖ್ಯ ಶಿಕ್ಷಕ ಆನಂದ ಭೋವಿ ಮಾತನಾಡಿ ಮಕ್ಕಳು ಸ್ವತಃ ತಾವೇ ಖರ್ಚು ಮಾಡಿ ಇವತ್ತಿನ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣ ಆಚರಣೆ ಮಾಡಿರುವುದು ಬಹಳ ಖುಷಿಯ ವಿಷಯ. ಏಕಲವ್ಯ ಹೇಗೆ ತನ್ನ ಗುರುಗಳಾದ ದ್ರೋಣಾಚಾರ್ಯರ ಮೂರ್ತಿಯನ್ನು ಇಟ್ಟುಕೊಂಡು ವಿದ್ಯೆಯನ್ನು ಕಲಿತನೋ ಹಾಗೆ ವಿದ್ಯಾರ್ಥಿಗಳು ಗುರುಗಳು ಕಲಿಸುವಂತಹ ವಿಷಯವನ್ನು ಬಹಳ ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಬಸನಗೌಡ ಪಾಟೀಲ, ಜಮೀರಅಹ್ಮದ ಕಾಗದಗಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಇತರರು ಉಪಸ್ಥತಿದ್ದರು.

Share News

About Shaikh BigTv

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *