Breaking News

ಅನಗತ್ಯ ಆರೋಪ : ಅರಣ್ಯಾಧಿಕಾರಿ ಅಮಾನತು

ಧಾರವಾಡ: ಅನಗತ್ಯ ಆರೋಪ ಮಾಡಿ ದೂರರ್ಜಿಯನ್ನು ಸಲ್ಲಿಸಿದ್ದ ಧಾರವಾಡದ ಸಾಮಾಜಿಕ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಪ್ರಸನ್ನ ಸುಬೇದಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶಕುಮಾರ ದೀಕ್ಷಿತ್ ಆದೇಶ ಹೊರಡಿಸಿದ್ದಾರೆ.

ತಮ್ಮದೇ ಇಲಾಖೆಯ ತಮ್ಮದೇ ಕೆಡರ್‌ನ ಅಧಿಕಾರಿಗಳ ಮೇಲೆ ಮೂರನೇ ವ್ಯಕ್ತಿಯ ಹೆಸರಿನಲ್ಲಿ ಅನಗತ್ಯ ಆರೋಪ ಮಾಡಿದರು.03-09-2024ರಿಂದ ಕೂಡಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ. ಧಾರವಾಡ ಸಾಮಾಜಿಕ ವಲಯ ಆರ್‌ಎಫ್‌ಓ ಸುಬೇದಾರ ತಮ್ಮ ಸಹೋದ್ಯೋಗಿ ಅಧಿಕಾರಿಗಳ ವಿರುದ್ಧ ದೂರರ್ಜಿ ತಯಾರಿಕೆಯ ರೂವಾರಿಯಾಗಿರುವುದು ತನಿಖಾ ವರದಿಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಸಲ್ಲಿಸಿದ ವರದಿ ಮತ್ತು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಬೆಳಗಾವಿ ಅಂತಿಮ ಆದೇಶದನ್ವಯ ಅವರನ್ನು ಅಮಾನತುಗೊಳಿಸಲಾಗಿದೆ.

ಈಗಾಗಲೇ ಈ ದೂರು ಅರ್ಜಿ ಪ್ರಕರಣದಲ್ಲಿ ಧಾರವಾಡ ವಲಯ ಸಾಮಾಜಿಕ ಅರಣ್ಯ ಪಾಲಕ ವಿಠಲ ಎಂ.ಝೂನಿ ಎಂಬುವರನ್ನು ಸಹ 06-05-2024ರಂದು ಅಮಾನತ್ತು ಮಾಡಲಾಗಿದೆ.

ಝೂನಿ ಮತ್ತು ಸುಬೇದಾರ ಸೇರಿಕೊಂಡು ಮೂರನೇ ವ್ಯಕ್ತಿ ಮುಬಾರಕ್ ಭಾಗವಾನ ಎಂಬುವವರ ಹೆಸರಿನಲ್ಲಿ ಇಬ್ಬರು ಆರ್‌ಎನ್‌ಓಗಳ ಮೇಲೆ ದೂರರ್ಜಿಯನ್ನು ತಯಾರಿಸಿರುವುದು ತನಿಖೆಯಲ್ಲಿ ದೃಢಪಟ್ಟು ಶಿಸ್ತು ಕ್ರಮ ಜರುಗಿಸಲಾಗಿತ್ತು. ಸಹೋದ್ಯೋಗಿಗಳ ಬಗ್ಗೆ ದೂರರ್ಜಿ ತಯಾರಿಸಲು ನಡೆಸಿದ ಸಂಚು, ವಿಭಾಗ ಕಚೇರಿಯ ಸಿಸಿಟಿವಿ ದೃಶ್ಯಾವಳಿ ತುಣುಕು, ಗಣಕಯಂತ್ರದಲ್ಲಿನ ವಿವರ, ಅಲ್ಲದೇ ವಾಟ್ಸಾಪ್ ಸಂದೇಶ ವಿನಿಮಯ ಸ್ಕಿನ್ ಶಾಟ್ ಸಹಿತ ಎಲ್ಲ ದಾಖಲೆಗಳು ಸಿಕ್ಕಿದ್ದವು. ಸುಬೇದಾ‌ರ್ ಮೇಲೆ ಇನ್ನೊಂದು ಪ್ರಕರಣದ ತನಿಖೆ ಕೂಡ ನಡೆಯುತ್ತಿದೆ ಎನ್ನಲಾಗಿದೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *