Breaking News

ಈ ರೀತಿಯ ಪೊಲೀಸ್ ಮಹಾನಿರ್ದೇಶಕರ (DGP) ಹಾಗೂ ಸರ್ಕಾರದ ಆದೇಶಗಳಿಗೆ ಇಂದು ಕವಡೆ ಕಾಸಿನಷ್ಟು ಬೆಲೆಯೂ ಉಳಿದಿಲ್ಲ…?

ಡಿಜಿ ಆದೇಶಗಳನ್ನು ಗಾಳಿಗೆ ತೂರಿ, ಕೆಲ ಟ್ರಾಫಿಕ್ ಪೊಲೀಸರು ಖಡಕ್ ಅಧಿಕಾರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡು ತಮ್ಮ ಆಟವನ್ನಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರ ಮುಂದೆ ನಿಂತಿದೆ.ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನ ಸವಾರರ ಗೋಳು ಕೇಳೋರು ಯಾರು..?

ಗಸ್ತು ತಿರುಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದವರು ಮಾಡಿದ್ದೇನು ಗೊತ್ತಾ…?

ಪೊಲೀಸ್ ಕಂಡ ಕಥೆಗಳು…

ಕಡ್ಡಾಯವಾಗಿ ವಾರದ ರಜೆ ನೀಡಬೇಕು ಎಂಬ ಆದೇಶ ಬಂದು ಸಾಕಷ್ಟು ವರ್ಷಗಳೇ ಕಳೆದರೂ, ಅದು ಇಂದಿಗೂ ಕಾಗದದಲ್ಲೇ ಉಳಿದಿದೆ. ಪೊಲೀಸರಿಗೆ ಗೌರವ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಠಾಣೆಗಳಿಗೆ ಲಕ್ಷಾಂತರ ರೂ. ಮೌಲ್ಯದ ಕುರ್ಚಿಗಳನ್ನು ಕಳುಹಿಸಿದರೆ, ಅವು ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ.

ಇನ್ನೊಂದು ಕಡೆ, ಕೆಲ ಅಧಿಕಾರಿಗಳು ಸದ್ಯದ ಹಿರಿಯ ಪೊಲೀಸರನ್ನೂ ತಮ್ಮ ಕುರ್ಚಿಯ ಮುಂದೆ ಕುಳ್ಳಿರಿಸಬಾರದು ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಆದರೆ ರೌಡಿಗಳು, ರೌಡಿಶೀಟರ್‌ಗಳು, ದರೋಡೆಕೋರರು, ಕಳ್ಳತನ ಹಾಗೂ ದರೋಡೆ ಪ್ರಕರಣಗಳ ಆರೋಪಿಗಳನ್ನು ತಮ್ಮ ಮುಂದೆ ಕೂಡಿಸಿಕೊಂಡು ಪೂಜಿಸಿ, ಸನ್ಮಾನಿಸುವಂತಹ ಅಸಹ್ಯ ಪದ್ಧತಿ ಇಂದು ಜಾರಿಯಲ್ಲಿದೆ. ಇನ್ನೇನು, ಪ್ರತಿ ರಜೆಗೆ ಇಷ್ಟು ದರ ಎಂದು ಸೂಚಿಸುವ ದಿನಗಳು ದೂರವಿಲ್ಲ ಅನ್ನೋ ಭಾವನೆ ಮೂಡುತ್ತಿದೆ. ಪ್ರತಿ ಸಾರಿ ‘ಎಮರ್ಜೆನ್ಸಿ’

ನೆಪ ಹೇಳುವ ಅಧಿಕಾರಿಗಳು ಒಂದು ಕಡೆ ಇದ್ದರೆ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ, ರಜೆ ಕೊಡಬೇಕು ಎಂದು ಹೇಳುವ ಸರ್ಕಾರ ಇನ್ನೊಂದು ಕಡೆ ಇದೆ. ಈ ಸರ್ಕಾರದ ಆದೇಶಗಳು ಎಂದಿಗೂ ಜಾರಿಗೆ ಬರಲಿಲ್ಲ ಎಂಬುದಕ್ಕೆ ಒಂದೇ ಕಾರಣ — ಸರ್ವಾಧಿಕಾರಿ ಧೋರಣೆ ತೋರುವ ಕೆಲ ಅಧಿಕಾರಿಗಳು.ಇವರ ಮೇಲೆ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಂಡಾಗ ಮಾತ್ರ ಸರ್ಕಾರದ ಆದೇಶಗಳಿಗೆ ನಿಜವಾದ ಬೆಲೆ ಬರಬಹುದು ಎಂಬ ನಿರೀಕ್ಷೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *