Breaking News


ಕಾಂಗ್ರೆಸ್ ಬಸ್ ಯಾತ್ರೆಗೆ ಬಿಜೆಪಿ ಟಕ್ಕರ್


ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಈಗಿನಿಂದಲೇ ಕಾವೇರುತ್ತಾ ಇದೆ. ಈಗಾಗಲೇ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್‌ ಬಸ್‌ ಯಾತ್ರೆ ಮಾಡೋಕೆ ಸಜ್ಜಾಗಿದೆ. ಇದೀಗ ಅದಕ್ಕೆ ರಾಜ್ಯ ಬಿಜೆಪಿ ಘಟಕ ಕೂಡ ಟಕ್ಕರ್‌ ಕೊಡೋಕೆ ಮುಂದಾಗಿದೆ.

ಜನವರಿ 11ರಂದು ಕಾಂಗ್ರೆಸ್‌ನ ಬಸ್‌ ಯಾತ್ರೆಗೆ ಮೂಹರ್ತ ಫಿಕ್ಸ್‌ ಆಗಿದ್ದು, ಜನವರಿ 12ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಬರೋದು ಬಹುತೇಕ ಖಚಿತವಾಗಿದೆ. ಕೇಂದ್ರ ಯುವ ಸಬಲೀಕರಣ ಇಲಾಖೆಯಿಂದ ಆಯೋಜಿಸಿರೊ ರಾಷ್ಟ್ರೀಯ ಯುವಜನ ಮೇಳ ಉದ್ಘಾಟಿಸೋಕೆ ಮೋದಿ ಆಗಮಿಸುತ್ತಿದ್ದಾರೆ. ಇದೇ ವೇಳೆ ಇತರ ಕಾರ್ಯಕ್ರಮಗಳಿಗೂ ಚಾಲನೆ ಕೊಡಿಸೋಕೆ ಸಿದ್ದತೆ ನಡೆಸಲಾಗ್ತಿದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಬಸ್‌ ಯಾತ್ರೆ ಆರಂಭದ ಸಮಯದಲ್ಲೇ ರಾಜ್ಯಕ್ಕೆ ಮೋದಿ ಕರೆಸಿ ಕಾಂಗ್ರೆಸ್‌ ಅಬ್ಬರವನ್ನ ಕಡಿಮೆ ಮಾಡೋ ಗುರಿ ಹಾಕೊಂಡಿದೆ.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *