ಧಾರವಾಡ: ಈ ಗಣೇಶನ ಹಬ್ಬಕ್ಕೆ ಧಾರವಾಡದಲ್ಲಿ ಪಟಾಕಿ ವ್ಯಾಪಾರ ಜೋರಾಗಿಯೇ ನಡೆದಿದೆ.
ಪ್ರತಿವರ್ಷ ಧಾರವಾಡದ ಕಡಪಾ ಮೈದಾನದಲ್ಲಿ ಪಟಾಕಿ ವ್ಯಾಪಾರಸ್ಥರು ಪಟಾಕಿ ತಂದು ಮಾರಾಟ ಮಾಡುತ್ತಾರೆ. ಪ್ರಸಕ್ತ ವರ್ಷ ಕೂಡ ಸುಮಾರು ಆರೇಳು ಅಂಗಡಿಗಳನ್ನು ತೆರೆಯಲಾಗಿದ್ದು, ಜನ ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ.
ಗೋವಾ ಪಟಾಕಿ, ಚಟಪಟ ಪಟಾಕಿ, ಕುಡಿಕೆ, ಚಕ್ರ, ಆಟಂಬಾಂಬ್ ಸೇರಿದಂತೆ ಇತ್ಯಾದಿ ಪಟಾಕಿಗಳ ವ್ಯಾಪಾರ ಜೋರಾಗಿ ನಡೆದಿದೆ. ಗಣೇಶನ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಕಳೆಗಟ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

